ಮುಂಬೈ: ಮುಂಬರುವ ಮಧ್ಯಂತರ ಬಜೆಟ್ನಲ್ಲಿ (ಬಜೆಟ್ 2019), ವಿಮಾ ಕ್ಷೇತ್ರವು ದೊಡ್ಡ ಪಾಲನ್ನು ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಝೀ ಬಿಸಿನೆಸ್ಗೆ ಲಭಿಸಿರುವ ಮಾಹಿತಿ ಪ್ರಕಾರ, ಸರ್ಕಾರ Insurance ವಲಯವನ್ನು ಸುಧಾರಿಲು ಮುಂದಾಗಿದ್ದು, ಇದು ಹೆಚ್ಚು ಜನರಿಗೆ ಪ್ರಯೋಜನಕಾರಿಯಾಗಿದೆ. ಹೆಚ್ಚು ಹೆಚ್ಚು ಜನರು ವಿಮೆಯ ವ್ಯಾಪ್ತಿಯೊಳಗೆ ಬರುವುದರಿಂದ ಇದು ಜನರ ಸಾಮಾಜಿಕ ಭದ್ರತೆಯನ್ನು ಮಾತ್ರ ಹೆಚ್ಚಿಸುವುದಿಲ್ಲ, ಜೊತೆಗೆ ತೆರಿಗೆ ವಿನಾಯಿತಿಯ ಲಾಭವನ್ನು ನೀಡುತ್ತದೆ. ವಿಮೆಯಿಂದಾಗುವ ಪ್ರಯೋಜನಗಳ ಬಗ್ಗೆ ನಾವು ನಿಮಗೆ ಹೇಳುತ್ತೇವೆ.
1. ಟರ್ಮ್ ಇನ್ಶುರೆನ್ಸ್ನಲ್ಲಿ ಮೊದಲ ಅನುಕೂಲ:
ಇದುವರೆಗೂ ಆದಾಯ ತೆರಿಗೆಯ ಸೆಕ್ಷನ್ 80c ಅಡಿಯಲ್ಲಿ ರೂ. 1.50 ಲಕ್ಷದ ವರೆಗೂ ವಿನಾಯಿತಿ ಇದೇ. ಇದು ನಿಮ್ಮ ಎಲ್ಐಸಿ, ಟರ್ಮ್ ಇನ್ಶುರೆನ್ಸ್ ಮತ್ತು ಇತರ ವಿಮೆಯನ್ನು ಒಳಗೊಂಡಿರುತ್ತದೆ. ಆದರೆ ಬಜೆಟ್ 2019 ಸರ್ಕಾರ 1.50 ಲಕ್ಷ ರೂ.ಗಿಂತ ಹೆಚ್ಚುವರಿ ರಿಯಾಯಿತಿ ನೀಡಲಿದೆ ಎನ್ನಲಾಗಿದೆ. ಉದಾಹರಣೆಗೆ, ಸರ್ಕಾರ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಅನ್ನು ಪ್ರಾರಂಭಿಸಿದಾಗ, ನಂತರ 80CCD ಯ ಅಡಿಯಲ್ಲಿ, 50 ಸಾವಿರ ರೂಪಾಯಿಗಳ ಪ್ರತ್ಯೇಕ ರಿಯಾಯಿತಿಗೆ ಅವಕಾಶ ಕಲ್ಪಿಸಲಾಯಿತು. ಮೂಲಗಳ ಪ್ರಕಾರ, ವಿಮೆಯಲ್ಲಿ ತೆರಿಗೆ ವಿನಾಯತಿಗಾಗಿ ಸರ್ಕಾರವು ಪ್ರತ್ಯೇಕ ನಿಬಂಧನೆಗಳನ್ನು ರಚಿಸುವ ಸಾಧ್ಯತೆಯಿದೆ.
2. ಎಲ್ಲಾ ವಿಧದ ವಿಮೆಗಳಿಗೆ ಇರುವ ಪ್ರಯೋಜನ:
ಪ್ರಸ್ತುತ ವಿಮೆಗೆ 18% ಜಿಎಸ್ಟಿ ಪಾವತಿಸಲಾಗುತ್ತಿದೆ. ಮೂಲಗಳ ಪ್ರಕಾರ ಎಲ್ಲಾ ವಿಧದ ವಿಮೆಗಳ ಮೇಲೆ ಸರ್ಕಾರ ಶೀಘ್ರದಲ್ಲೇ ಜಿಎಸ್ಟಿ ದರವನ್ನು ಕಡಿಮೆ ಮಾಡಬಹುದು. ಆದಾಗ್ಯೂ, ಜಿಎಸ್ಟಿ ದರವನ್ನು ಕಡಿಮೆ ಮಾಡುವ ನಿರ್ಧಾರ ಜಿಎಸ್ಟಿ ಕೌನ್ಸಿಲ್ ದಾಗಿದೆ. ಹಾಗಾಗಿ ಸರ್ಕಾರ ಈ ಸಲಹೆಗಳನ್ನು ಶೀಘ್ರದಲ್ಲೇ ಜಿಎಸ್ಟಿ ಕೌನ್ಸಿಲ್ ಗೆ ನೀಡಬಹುದು.
3. ಮನೆ ಸಾಲ ವಿಮೆ ಮೇಲೆ ರಿಯಾಯಿತಿ:
ಇದೀಗ ಮನೆ ಸಾಲವನ್ನು ತೆಗೆದುಕೊಂಡರೆ, ತೆರಿಗೆ ರಿಯಾಯಿತಿ ಪಡೆಯುತ್ತೀರಿ. ಆದರೆ ಮನೆ ಸಾಲವನ್ನು ತೆಗೆದುಕೊಳ್ಳುವಾಗ, ಬ್ಯಾಂಕ್ ಮನೆಯ ಸಾಲ ವಿಮೆಯನ್ನು ಪಡೆಯಲು ಕೇಳುತ್ತಾರೆ. ಮನೆ ಸಾಲದ ವಿಮೆಯ ಮೊತ್ತಕ್ಕೆ ಈಗ ತೆರಿಗೆ ವಿನಾಯಿತಿ ಇಲ್ಲ, ಆದರೆ ಈ ಬಾರಿಯ ಬಜೆಟ್ ನಲ್ಲಿ ಮನೆ ಸಾಲ ವಿಮೆಯ ಮೇಲೆ ನೀವು ತೆರಿಗೆ ವಿನಾಯಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಮೂಲಗಳು ತಿಳಿಸಿವೆ.
4. ಆರೋಗ್ಯ ವಿಮಾ ಪಾಲಿಸಿ:
ನೀವು ಕೆಲಸ ಮಾಡುವ ಕೆಲವು ಕಂಪನಿಗಳು ಈಗ ನಿಮಗೆ ವಿಮೆ ಪಾಲಿಸಿಯ ಪ್ರಯೋಜನವನ್ನು ನೀಡುತ್ತದೆ ಮತ್ತು ನಿಮ್ಮ ಸಂಬಳದ ಮೂಲಕ ವಿಮಾ ಹಣವನ್ನು ಪಡೆಯುತ್ತದೆ. ಆದರೆ ಕೆಲವು ಕಂಪನಿಗಳು ಉದ್ಯೋಗಿಗಳಿಗೆ ವಿಮೆ ಮಾಡಿಸುವುದಿಲ್ಲ. ಈ ಬಜೆಟ್ ನಲ್ಲಿ ಪ್ರತಿ ಕಂಪನಿಯು ತನ್ನ ಉದ್ಯೋಗಿಗಳಿಗೆ ವಿಮೆ ಮಾಡಿಸುವುದನ್ನು ಸರ್ಕಾರ ಕಡ್ಡಾಯ ಮಾಡಬಹುದು.
5. ಆಯುಷ್ಮಾನ್ ಭಾರತದ ವಿಸ್ತರಣೆ:
2018ರ ಬಜೆಟ್ ನಲ್ಲಿ ಸರ್ಕಾರ Ayushman Bharat ವನ್ನು ಘೋಷಿಸಿತು. ಸರ್ಕಾರದ ಅಯುಷ್ಮಾನ್ ಭಾರತ್ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹಿಂದಿನ ಬಜೆಟ್ನಲ್ಲಿ, ಇದಕ್ಕಾಗಿ ಸರ್ಕಾರವು 1,200 ಕೋಟಿ ರೂಪಾಯಿಗಳನ್ನು ನಿಗದಿಪಡಿಸಿದೆ. ಈ ಯೋಜನೆಯಿಂದ ಈಗ ಸುಮಾರು 7 ಲಕ್ಷ ಜನರು ಲಾಭ ಪಡೆದುಕೊಂಡಿದ್ದಾರೆ. ಮೂಲಗಳ ಪ್ರಕಾರ, ಈ ಬಜೆಟ್ನಲ್ಲಿ ಸರ್ಕಾರವು ಈ ವಿಮಾ ಯೋಜನೆಯ ವ್ಯಾಪ್ತಿಯನ್ನು 2,000 ಕೋಟಿ ರೂಪಾಯಿಗಳಿಗೆ ಹೆಚ್ಚಿಸಬಹುದು.
6. ವಿಮಾ ಕಂಪನಿಗಳ ವಿಲೀನ:
ಸರ್ಕಾರಿ ಸ್ವಾಮ್ಯದ ಎಲ್ಲಾ ವಿಮಾ ಕಂಪಗಳ ವಿಲೀನವಾಗಬಹುದು ಎಂದೂ ಸಹ ಹೇಳಲಾಗುತ್ತಿದೆ. ಯುನೈಟೆಡ್ ಇಂಡಿಯಾ, ಓರಿಯೆಂಟಲ್ ಮತ್ತು ನ್ಯಾಷನಲ್ ಇನ್ಶ್ಯೂರೆನ್ಸ್ ಸಹಿತ ಹಲವು ವಿಮಾ ಕಂಪನಿಗಳು ನಷ್ಟದಲ್ಲಿವೆ ಎನ್ನಲಾಗುತ್ತಿದ್ದು, ಆದ್ದರಿಂದ ಸರ್ಕಾರವು ಅವುಗಳ ವಿಲೀನ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು.