ಕೇವಲ 18 ರೂ.ಗೆ ಈ ಕಂಪನಿ ನೀಡಲಿದೆ ಅನಿಯಮಿತ ಕರೆ, ಡೇಟಾ ಸೌಲಭ್ಯ!

ಕೇವಲ 18 ರೂ.ಗಳಿಗೆ ಅನಿಯಮಿತ ಕರೆ ಮತ್ತು ಡೇಟಾ ಸೌಲಭ್ಯವನ್ನು ಪಡೆಯಬಹುದು. 

Last Updated : Sep 30, 2018, 03:30 PM IST
ಕೇವಲ 18 ರೂ.ಗೆ ಈ ಕಂಪನಿ ನೀಡಲಿದೆ ಅನಿಯಮಿತ ಕರೆ, ಡೇಟಾ ಸೌಲಭ್ಯ! title=

ನವದೆಹಲಿ: ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ಕೇವಲ ಇದೇ ಅಕ್ಟೋಬರ್ 1 ರಂದು ತನ್ನ 18ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ವಿಶೇಷ ಆಫರ್ ನೀಡಿದೆ. 

ಬಿಎಸ್ಎಸ್ಎಲ್ ತನ್ನ 18ನೇ ವಾರ್ಷಿಕೋತ್ಸವದ ಅಂಗವಾಗಿ 18 ರೂ. ಮೌಲ್ಯದ ವಿಶೇಷ ಆಫಾರ್ ಬಿಡುಗಡೆ ಮಾಡಿದೆ. ಈ ಮೂಲಕ ಕೇವಲ 18 ರೂ.ಗಳಿಗೆ ಅನಿಯಮಿತ ಕರೆ ಮತ್ತು ಡೇಟಾ ಸೌಲಭ್ಯವನ್ನು ಎರಡು ದಿನಗಳ ಅವಧಿಗೆ ಪಡೆಯಬಹುದು. ಈ ವಿಶೇಷ ಟ್ಯಾರಿಫ್ ವೋಚರ್ ಭಾರತದ ಎಲ್ಲಾ ರಾಜ್ಯಗಳಲ್ಲಿ ಲಭ್ಯವಾಗಲಿದೆ. 

ಅಷ್ಟೇ ಅಲ್ಲದೆ, 18 ನೇ ವಾರ್ಷಿಕೋತ್ಸವದ ಅಂಗವಾಗಿ STV 1801, STV 1201 ಮತ್ತು STV 601 ಅನ್ನೂ ಸಹ ಬಿಎಸ್ಎನ್ಎಲ್ ಬಿಡುಗಡೆಗೊಳಿಸಿದೆ. ಈ ಎಲ್ಲಾ ಪ್ಲಾನ್ ಗಳು 90 ದಿನಗಳ ವ್ಯಾಲಿಡಿಟಿ ಹೊಂದಿವೆ.

STV 1801
STV 1801ರಲ್ಲಿ ಬಿಎಸ್ಎನ್ಎಲ್ ಪ್ರೀಪೆಯ್ಡ್ ಬಳಕೆದಾರರು  1801 ರೂ. ರೀಚಾರ್ಜ್ ಮಾಡಿಸಿದರೆ 2,125 ರೂ.ಗಳ ಟಾಕ್ ಟೈಮ್ ಪಡೆಯಲಿದ್ದಾರೆ. ಇದರ ಜತೆಗೆ 15 ಜಿಬಿ ಡೇಟಾ ಕೂಡಾ ದೊರೆಯಲಿದೆ. ಇದು ಬಿಎಸ್ಎನ್ಎಲ್ ಕುಟುಂಬದಿಂದ ಗ್ರಾಹಕರಿಗೆ ನೀಡುತ್ತಿರುವ ವಾರ್ಷಿಕ ಕೊಡುಗೆ ಎಂದು ಬಿಎಸ್ಎನ್ಎಲ್ ಸಿಎಂಡಿ ಅನುಪಮ್ ಶ್ರೀವಾತ್ಸವ ಹೇಳಿದ್ದಾರೆ. 

STV 1201
ಈ ಆಫರ್ ಅಡಿಯಲ್ಲಿ 1201 ರೂ.ಗಳ ರೀಚಾರ್ಜ್ ಮಾಡಿಸಿದರೆ 1417 ರೂ.ಗಳ ಟಾಕ್ ಟೈಮ್ ಮತ್ತು 10 ಜಿಬಿ ಡೇಟಾ ದೊರೆಯಲಿದೆ. 

STV 601
ಈ ಆಫರ್ ಅಡಿಯಲ್ಲಿ 601 ರು.ಗಳಿಗೆ ರೀಚಾರ್ಜ್ ಮಾಡಿಸಿದರೆ 709 ರೂ.ಗಳ ಟಾಕ್ ಟೈಮ್ ಮತ್ತು 5 ಜಿಬಿ ಡೇಟಾ ದೊರೆಯಲಿದೆ. ಈ ಎಲ್ಲಾ ಪ್ಲಾನ್ ಗಳು 90 ದಿನಗಳ ವ್ಯಾಲಿಡಿಟಿ ಹೊಂದಿರಲಿದೆ. ಈ ಆಫರ್ ಅಕ್ಟೋಬರ್ 1, 2018 ರಿಂದ ಅಕ್ಟೋಬರ್ 18, 2019ರವರೆಗೆ ಅನ್ವಯವಾಗಲಿದೆ. 

Trending News