ಪೋಷಕರ ಮೂಢನಂಬಿಕೆಗೆ 5 ವರ್ಷದ ಬಾಲಕ ಬಲಿ..! 

Miracle cure : ಪೋಷಕರ ಮೂಢನಂಬಿಕೆಯಿಂದಾಗಿ ಉತ್ತರಾಖಂಡದ ಹರಿದ್ವಾರದಲ್ಲಿ ಐದು ವರ್ಷದ ಮಗು ಮೃತಪಟ್ಟ ದಾರುಣ ಘಟನೆ ನಡೆದಿದ್ದು ಈ ಕುರಿತ ವಿಡಿಯೋ ವೈರಲ್‌ ಆಗಿದೆ. ಬಾಲಕನ ಪೋಷಕರು ಮತ್ತು ಆತನ ಚಿಕ್ಕಮ್ಮನನ್ನು ವಿಚಾರಣೆಗಾಗಿ ವಶಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

Written by - Krishna N K | Last Updated : Jan 25, 2024, 05:36 PM IST
  • ಪೋಷಕರ ಮೂಢನಂಬಿಕೆಗೆ 5 ವರ್ಷದ ಬಾಲಕ ಬಲಿ
  • ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ದಾರುಣ ಘಟನೆ
  • ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌
ಪೋಷಕರ ಮೂಢನಂಬಿಕೆಗೆ 5 ವರ್ಷದ ಬಾಲಕ ಬಲಿ..!  title=

Ganga river Miracle cure : ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬಾಲಕನನ್ನು ಗಂಗಾ ನದಿಯಲ್ಲಿ ಮುಳುಗಿಸಿ ಎಬ್ಬಿಸಿದರೆ ಗುಣಮುಖವಾಗುವುದೆಂದು ನಂಬಿದ್ದ ಪೋಷಕರು, ಕೊರೆಯುವ ಚಳಿಯಲ್ಲಿಯೂ ಸಹ ಬಾಲಕನನ್ನು ನೀರಿನಲ್ಲಿ ಮುಳುಗಿಸಿದ್ದಾರೆ. ಇದರಿಂದಾಗಿ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ದೆಹಲಿ ಮೂಲದ ಕುಟುಂಬವೊಂದು ನಿನ್ನೆ ಬೆಳಗ್ಗೆ 9 ಗಂಟೆ ಸುಮಾರಿಗೆ ರೋಗಗ್ರಸ್ತ ಬಾಲಕನ ಜೊತೆ ಹರಿದ್ವಾರಕ್ಕೆ ತೆರಳಿತ್ತು. ಈ ವೇಳೆ ಮಗುವಿನೊಂದಿಗೆ ಪೋಷಕರು ಮತ್ತು ಇನ್ನೊಬ್ಬ ಮಹಿಳಾ ಸಂಬಂಧಿ ಇದ್ದರು ಎಂದು ಕ್ಯಾಬ್ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಇದನ್ನೂ ಓದಿ: ಬುಡಕಟ್ಟು ಸಂಸ್ಕೃತಿಯ ಸಾಂಪ್ರದಾಯಿಕ ಮಹುವಾ ಬಗ್ಗೆ ನಿಮಗೆ ತಿಳಿದಿದೆಯೇ..?

ಕೆಲವು ವರದಿಗಳ ಪ್ರಕಾರ ಆ ಮಹಿಳೆ ಬಾಲಕನ ಚಿಕ್ಕಮ್ಮ ಎಂದು ಹೇಳಲಾಗಿದೆ. ಬಾಲಕ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ದೆಹಲಿಯ ವೈದ್ಯರು ಬಾಲಕ ಬದುಕುವುದಿಲ್ಲ ಎಂದು ಕೈಚೆಲ್ಲಿದ್ದರಂತೆ, ಇದರಿಂದಾಗಿ ಗಂಗಾನದಿಯಲ್ಲಿ ಸ್ನಾನ ಮಾಡಿಸಲು ಕರೆತಂದಿದ್ದಾಗಿ ಹೇಳಿದ್ದರು ಎಂದು ಕಾರು ಚಾಲಕ ತಿಳಿಸಿದ್ದಾನೆ‌. 

ಇನ್ನು ಪೋಷಕರು ಪ್ರಾರ್ಥನೆಗಳನ್ನು ಪಠಿಸುತ್ತಿರುವಾಗ ಇನ್ನೊಬ್ಬ ಮಹಿಳೆ ಆತನನ್ನು, ನೀರಿನ ಅಡಿಯಲ್ಲಿ ಕೆಲವೊತ್ತು ಮುಳುಗಿಸಿದ್ದಾರೆ. ಈ ಘಟನೆ ಕಂಡ ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ ಅಲ್ಲದೆ, ಬಾಲಕನ್ನು ರಕ್ಷಿಸಲು ಮುಂದಾಗಿದ್ದಾರೆ. ಆದ್ರೆ ಆ ಮಹಿಳೆ ಜನರ ಜೊತೆ ಜಗಳವಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ನಂತರ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯರು ಬಾಲಕ ಸಾವನ್ನಪ್ಪಿರುವುದಾಗಿ ಎಂದು ಘೋಷಿಸಿದ್ದಾರೆ.

ಇದನ್ನೂ ಓದಿ:ಮಹಿಳಾ ಕೇಂದ್ರಿತ 75ನೇ ಗಣರಾಜ್ಯೋತ್ಸವಕ್ಕೆ ಮಾಕ್ರೋನ್ ಮುಖ್ಯ ಅತಿಥಿ

ಬಾಲಕ ದೆಹಲಿಯ ಉತ್ತನ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗಾಗಿ ಚಿಕಿತ್ಸೆ ಪಡೆಯುತ್ತಿದ್ದ, ವೈದ್ಯರು ಅಂತಿಮವಾಗಿ ಮಗುವನ್ನು ಉಳಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಇದರಿಂದಾಗಿ ಗಂಗಾ ನದಿಯು ಹುಡುಗನನ್ನು ಗುಣಪಡಿಸುತ್ತದೆ ಎಂದು ಕುಟುಂಬದವರು ನಂಬಿದ್ದರು. ಅದಕ್ಕಾಗಿ ಅವರು ಗಂಗಾ ಸ್ನಾನ ಮಾಡಿಸಲು ಬಾಲಕನನ್ನು ಕರೆತಂದಿದ್ದರು ಎಂದು ಹರಿದ್ವಾರ ನಗರ ಪೊಲೀಸ್ ಮುಖ್ಯಸ್ಥ ಸ್ವತಂತ್ರ ಕುಮಾರ್ ತಿಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News