ಅಮಿತ್ ಶಾ ನೇತೃತ್ವದಲ್ಲಿ 2019ರ ಚುನಾವಣೆ ಎದುರಿಸಲಿದೆ ಬಿಜೆಪಿ!

ಮುಂಬರುವ 2019ರ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಅಮಿತ್ ಶಾ ನೇತೃತ್ವದಲ್ಲಿ ಚುನಾವಣೆಗೆ ಮುಂದಾಗಲಿದೆ ಎಂದು ಸುದ್ದಿಮೂಲಗಳಿಂದ ತಿಳಿದು ಬಂದಿದೆ.

Last Updated : Sep 8, 2018, 04:14 PM IST
ಅಮಿತ್ ಶಾ ನೇತೃತ್ವದಲ್ಲಿ 2019ರ ಚುನಾವಣೆ ಎದುರಿಸಲಿದೆ ಬಿಜೆಪಿ! title=

ನವದೆಹಲಿ: ಮುಂಬರುವ 2019ರ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಅಮಿತ್ ಶಾ ನೇತೃತ್ವದಲ್ಲಿ ಚುನಾವಣೆಗೆ ಮುಂದಾಗಲಿದೆ ಎಂದು ಸುದ್ದಿಮೂಲಗಳಿಂದ ತಿಳಿದು ಬಂದಿದೆ.

ದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಪಕ್ಷವು ಈ ಕಾರಣಕ್ಕಾಗಿ ಆಂತರಿಕ ಚುನಾವಣೆಯನ್ನು ತಡೆ ಹಿಡಿಯಲಿದೆ ಎನ್ನಲಾಗುತ್ತಿದೆ.ಅಮಿತ್ ಶಾ ಅವರ ಕಾಲಾವಧಿ 2019 ಜನೆವರಿ ತಿಂಗಳಲ್ಲಿ ಮುಗಿಯಲಿರುವುದರಿಂದ ಈಗ ಅದು ಅಂತರಿಕ ಚುನಾವಣೆಗೆ ತಡೆಯೊಡ್ಡಲಿದೆ ಎನ್ನಲಾಗಿದೆ.

ಪಕ್ಷದ ಎಲ್ಲ ರಾಜ್ಯಗಳ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ ಬಿಜೆಪಿ 2014ರಲ್ಲಿ ಗೆದ್ದ ಸ್ಥಾನಗಳಿಗಿಂತಲೂ ಅಧಿಕ ಸ್ಥಾನವನ್ನು 2019ರ ಚುನಾವಣೆಯಲ್ಲಿ ಗೆಲ್ಲಲಿದೆ  ಎಂದು ಅವರು ತಿಳಿಸಿದರು. 

ಪ.ಜಾತಿ ಮತ್ತು ಪ.ಪಂಗಡ ಸಮುದಾಯಗಳನ್ನು ತಲುಪುವ ನಿಟ್ಟಿನಲ್ಲಿ ಬಿಜೆಪಿ ತನ್ನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಲು ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್ ನ್ನು ಆಯ್ಕೆ ಮಾಡಿಕೊಂಡಿದೆ ಎನ್ನಲಾಗಿದೆ.ಅಲ್ಲದೆ ಮುಂಬರುವ ಚುನಾವಣೆಯಲ್ಲಿ ಅದು ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಯಶಸ್ಸನ್ನು ಪ್ರಮುಖ ಚುನಾವಣಾ ಮಂತ್ರವನ್ನಾಗಿ ಚುನಾವಣಾ ಕಾರ್ಯ ತಂತ್ರ ರೂಪಿಸಲಿದೆ ಎನ್ನಲಾಗಿದೆ.

Trending News