ರಾಜಸ್ತಾನ ಸರ್ಕಾರದಿಂದ ಶಾಸಕರಿಗೆ iPhone 13 ಭಾಗ್ಯ...! ಬೇಡವೆಂದ ಬಿಜೆಪಿ ಶಾಸಕರು

ರಾಜ್ಯದ ಎಲ್ಲಾ ಶಾಸಕರಿಗೆ ಇಪೋನ್ ಉಡುಗೊರೆ ನೀಡಲು ಮುಂದಾಗಿದ್ದ ಅಶೋಕ್ ಗೆಹಲೋಟ್ (Ashok Gehlot) ನೇತೃತ್ವದ ಸರ್ಕಾರದ ನಿರ್ಧಾರವನ್ನು ಬಿಜೆಪಿ ಶಾಸಕರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.ಈ ಹಿನ್ನಲೆಯಲ್ಲಿ ಈಗ ಕಾಂಗ್ರೆಸ್ ಸರ್ಕಾರಕ್ಕೆ ಶಾಸಕರ ನಿರ್ಧಾರದಿಂದಾಗಿ ಮುಜುಗುರ ಉಂಟಾಗಿದೆ.ಇದು ರಾಜ್ಯದ ಬೊಕ್ಕಸಕ್ಕೆ ಹೊರೆಯನ್ನು ಉಂಟು ಮಾಡಲಿದೆ ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ.

Written by - Zee Kannada News Desk | Last Updated : Feb 24, 2022, 01:44 PM IST
  • ಅಶೋಕ್ ಗೆಹ್ಲೋಟ್ ಸರ್ಕಾರ ಬುಧವಾರ ರಾಜ್ಯ ಬಜೆಟ್ ಮಂಡಿಸಿದ ನಂತರ ಎಲ್ಲಾ 200 ಶಾಸಕರಿಗೆ ಇತ್ತೀಚಿನ ಐಫೋನ್ ಅನ್ನು ಉಡುಗೊರೆಯಾಗಿ ನೀಡಿತ್ತು.
  • ಆದರೆ, ಬಿಜೆಪಿ ಶಾಸಕರು ಅದನ್ನು ಸರ್ಕಾರಕ್ಕೆ ಹಿಂತಿರುಗಿಸುತ್ತೇವೆ ಎಂದು ಹೇಳಿದರು
 ರಾಜಸ್ತಾನ ಸರ್ಕಾರದಿಂದ ಶಾಸಕರಿಗೆ iPhone 13 ಭಾಗ್ಯ...! ಬೇಡವೆಂದ ಬಿಜೆಪಿ ಶಾಸಕರು title=

ನವದೆಹಲಿ: ರಾಜ್ಯದ ಎಲ್ಲಾ ಶಾಸಕರಿಗೆ ಇಪೋನ್ ಉಡುಗೊರೆ ನೀಡಲು ಮುಂದಾಗಿದ್ದ ಅಶೋಕ್ ಗೆಹಲೋಟ್ (Ashok Gehlot) ನೇತೃತ್ವದ ಸರ್ಕಾರದ ನಿರ್ಧಾರವನ್ನು ಬಿಜೆಪಿ ಶಾಸಕರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.ಈ ಹಿನ್ನಲೆಯಲ್ಲಿ ಈಗ ಕಾಂಗ್ರೆಸ್ ಸರ್ಕಾರಕ್ಕೆ ಶಾಸಕರ ನಿರ್ಧಾರದಿಂದಾಗಿ ಮುಜುಗುರ ಉಂಟಾಗಿದೆ.ಇದು ರಾಜ್ಯದ ಬೊಕ್ಕಸಕ್ಕೆ ಹೊರೆಯನ್ನು ಉಂಟು ಮಾಡಲಿದೆ ಎಂದು ಬಿಜೆಪಿ ಶಾಸಕರು ಹೇಳಿದ್ದಾರೆ.

ಇದನ್ನೂ ಓದಿ: ಭಾರತೀಯ ಕ್ರಿಕೆಟ್ ತಂಡದ ಮೂವರು ಭಾವಿ ನಾಯಕರನ್ನು ಹೆಸರಿಸಿದ ರೋಹಿತ್ ಶರ್ಮಾ...!

ಅಶೋಕ್ ಗೆಹ್ಲೋಟ್ ಸರ್ಕಾರ ಬುಧವಾರ ರಾಜ್ಯ ಬಜೆಟ್ ಮಂಡಿಸಿದ ನಂತರ ಎಲ್ಲಾ 200 ಶಾಸಕರಿಗೆ ಇತ್ತೀಚಿನ ಐಫೋನ್ ಅನ್ನು ಉಡುಗೊರೆಯಾಗಿ ನೀಡಿತ್ತು.ಆದರೆ, ಬಿಜೆಪಿ ಶಾಸಕರು ಅದನ್ನು ಸರ್ಕಾರಕ್ಕೆ ಹಿಂತಿರುಗಿಸುತ್ತೇವೆ ಎಂದು ಹೇಳಿದರು.ಕಳೆದ ವರ್ಷ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಬಜೆಟ್ ಮಂಡಿಸಿದ ನಂತರ ಎಲ್ಲಾ 200 ಶಾಸಕರಿಗೆ ಐಪ್ಯಾಡ್‌ಗಳನ್ನು ಉಡುಗೊರೆಯಾಗಿ ನೀಡಲಾಯಿತು.

ಬುಧವಾರದಂದು ಮುಖ್ಯಮಂತ್ರಿಗಳು ಬಜೆಟ್ ಮಂಡಿಸಿದ ನಂತರ ಮತ್ತು ಸದನವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು, ನಿರ್ಗಮಿಸುವ ಸಮಯದಲ್ಲಿ ಎಲ್ಲಾ ಶಾಸಕರಿಗೆ ಐಫೋನ್ 13 ಇರುವ ಬ್ರೀಫ್ಕೇಸ್ ನೀಡಲಾಯಿತು. ಪ್ರತಿ ಫೋನ್ ಬೆಲೆ 70,000 ರೂ.ಎನ್ನಲಾಗಿದೆ.

ಈಗ ಈ ಕುರಿತಾಗಿ ಟ್ವೀಟ್ ಮಾಡಿರುವ ರಾಜಸ್ಥಾನದ ಬಿಜೆಪಿ ಮುಖ್ಯಸ್ಥ ಸತೀಶ್ ಪೂನಿಯಾ "ಗುಲಾಬ್ ಕಟಾರಿಯಾ ಜಿ ಮತ್ತು ರಾಜೇಂದ್ರ ಜಿ ಮತ್ತು ಇತರ ಶಾಸಕರೊಂದಿಗೆ ಚರ್ಚಿಸಿದ ನಂತರ, ರಾಜ್ಯ ಸರ್ಕಾರದ ಮೇಲಿನ ಆರ್ಥಿಕ ಹೊರೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಬಿಜೆಪಿ ರಾಜಸ್ಥಾನ ಶಾಸಕರು ಕಾಂಗ್ರೆಸ್ ಸರ್ಕಾರ ನೀಡಿದ ಐಫೋನ್ ಅನ್ನು ಹಿಂದಿರುಗಿಸಲು ನಿರ್ಧರಿಸಲಾಗಿದೆ." ಎಂದು ಹೇಳಿದ್ದಾರೆ.

ಇನ್ನೊಂದೆಡೆಗೆ ಕಟರಿಯಾ ಕೂಡ ಪ್ರತಿಕ್ರಿಯಿಸಿ 'ನಮ್ಮೆಲ್ಲರ ಫೋನ್‌ಗಳಿವೆ, ಅದು ತಪ್ಪು ನಿದರ್ಶನವನ್ನು ನೀಡುತ್ತದೆ.ಎಲ್ಲಾ ಬಿಜೆಪಿ ಶಾಸಕರು ಅವರ ಫೋನ್‌ಗಳನ್ನು ಹಿಂತಿರುಗಿಸುತ್ತಾರೆ.ನಾವು ಎಲ್ಲರೊಂದಿಗೆ ಮಾತನಾಡುತ್ತೇವೆ.ಸಾಮಾನ್ಯವಾಗಿ ಬಜೆಟ್‌ನಲ್ಲಿ ಬ್ಯಾಗ್ ಅಥವಾ ಬ್ರೀಫ್‌ಕೇಸ್ ನೀಡಲಾಗುತ್ತದೆ, ಇದು ಅಗತ್ಯವಿರಲಿಲ್ಲ" ಎಂದು ಅವರು ಹೇಳಿದರು.

ಇದನ್ನೂ ಓದಿ: 'ಎಲ್ಲಾ ಮಾದರಿಯ ಕ್ರಿಕೆಟ್ ತಂಡಕ್ಕೆ ನಾಯಕನಾಗಿರುವುದು ಗೌರವದ ಸಂಗತಿ'

ಸದನದಲ್ಲಿ ಮಂಡಿಸಿದ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಪೂನಿಯಾ, ಬಜೆಟ್ ಅನ್ನು ಬ್ಯೂಟಿ ಪಾರ್ಲರ್‌ಗೆ ತೆಗೆದುಕೊಂಡು ಹೋಗಿ ಉತ್ತಮ ಮೇಕ್ಅಪ್‌ನೊಂದಿಗೆ ಮಂಡಿಸಿದಂತೆ ತೋರುತ್ತಿದೆ ಎಂದು ಹೇಳಿದರು.

200 ಸದಸ್ಯ ಬಲದ ಸದನದಲ್ಲಿ ಬಿಜೆಪಿ 71 ಶಾಸಕರನ್ನು ಹೊಂದಿದೆ ಎಂಬುದು ಗಮನಾರ್ಹ.ಇಂದು ವಿಧಾನಸಭೆಯಲ್ಲಿ ರಾಜ್ಯ ಬಜೆಟ್ ಮಂಡನೆ ಬಳಿಕ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಸರ್ಕಾರ ತನ್ನ ಎಲ್ಲಾ ಶಾಸಕರಿಗೆ ಐಫೋನ್ 13 ಅನ್ನು ಉಡುಗೊರೆಯಾಗಿ ನೀಡಿತ್ತು. ಕಳೆದ ವರ್ಷ ಶಾಸಕರಿಗೆ ಬಜೆಟ್ ಪ್ರತಿಯೊಂದಿಗೆ ಐಪ್ಯಾಡ್‌ಗಳನ್ನು ನೀಡಲಾಗಿತ್ತು.

ಸಾಮಾನ್ಯವಾಗಿ, ಶಾಸಕರಿಗೆ ಬ್ರೀಫ್‌ಕೇಸ್‌ನಲ್ಲಿ ಬಜೆಟ್ ಪ್ರತಿಯನ್ನು ನೀಡಲಾಗುತ್ತದೆ, ಆದರೆ ಈ ಬಾರಿ ಅವರಿಗೆ ಬಜೆಟ್ ಪ್ರತಿಯೊಂದಿಗೆ ಐಫೋನ್ 13 ಅನ್ನು ನೀಡಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News