ದೆಹಲಿ ಚುನಾವಣೆಯಲ್ಲಿ ಸೋಲುವ ಭಯದಿಂದ ಬಿಜೆಪಿ ಇಂತಹ ದುಷ್ಕೃತ್ಯವನ್ನು ಮಾಡಿದೆ- ಆಮ್ ಆದ್ಮಿ ಪಕ್ಷ

ಮುಂದಿನ ತಿಂಗಳು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯನ್ನು ಮುಂದೂಡುವ ಪಿತೂರಿಯ ಭಾಗವಾಗಿದೆ ಎಂದು ಜಾಮಿಯಾ ಮಿಲಿಯಾ ಇಸ್ಲಾಮಿಕ್ ವಿಶ್ವವಿದ್ಯಾಲಯದ ಬಳಿ ನಡೆದ ಪ್ರತಿಭಟನೆಯಲ್ಲಿ ನಡೆದ ಶೂಟ್ ಔಟ್  ವಿಚಾರವಾಗಿ ಆಮ್ ಆದ್ಮಿ ಪಕ್ಷ (ಎಎಪಿ) ಬಿಜೆಪಿಯನ್ನು ದೂರಿದೆ.

Last Updated : Jan 30, 2020, 09:51 PM IST
ದೆಹಲಿ ಚುನಾವಣೆಯಲ್ಲಿ ಸೋಲುವ ಭಯದಿಂದ ಬಿಜೆಪಿ ಇಂತಹ ದುಷ್ಕೃತ್ಯವನ್ನು ಮಾಡಿದೆ- ಆಮ್ ಆದ್ಮಿ ಪಕ್ಷ  title=
file photo

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯನ್ನು ಮುಂದೂಡುವ ಪಿತೂರಿಯ ಭಾಗವಾಗಿದೆ ಎಂದು ಜಾಮಿಯಾ ಮಿಲಿಯಾ ಇಸ್ಲಾಮಿಕ್ ವಿಶ್ವವಿದ್ಯಾಲಯದ ಬಳಿ ನಡೆದ ಪ್ರತಿಭಟನೆಯಲ್ಲಿ ನಡೆದ ಶೂಟ್ ಔಟ್  ವಿಚಾರವಾಗಿ ಆಮ್ ಆದ್ಮಿ ಪಕ್ಷ (ಎಎಪಿ) ಬಿಜೆಪಿಯನ್ನು ದೂರಿದೆ.

"ಗಾಂಧಿ ಜಿ ಅವರ  ಹತ್ಯೆ ದಿನದಂದು ದೆಹಲಿ ಚುನಾವಣೆಯಲ್ಲಿ ಸೋಲಬಹುದೆಂಬ ಭಯದಿಂದ ಬಿಜೆಪಿ ಇಂತಹ ದುಷ್ಕೃತ್ಯವನ್ನು ಮಾಡಿದೆ, ಬಿಜೆಪಿ ಮತ್ತು ಅಮಿತ್ ಶಾ ಅವರು ಚುನಾವಣೆಯನ್ನು ಮುಂದೂಡುವ ಸಂಚು ರೂಪಿಸಿದ್ದಾರೆ, ಅದಕ್ಕಾಗಿಯೇ ಪೊಲೀಸರ ಕೈಗಳನ್ನು ಕಟ್ಟಿ ಅವರು ಮೂಕ ಪ್ರೇಕ್ಷಕರಾಗಿದ್ದರು' ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ."ಅಮಿತ್ ಶಾ ಅವರು ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ದೆಹಲಿಯ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂಬುದು ಈಗ ಸಾಬೀತಾಗಿದೆ" ಎಂದು ಅವರು ಹೇಳಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಟ್ವೀಟ್ ಮಾಡಿದ್ದಾರೆ.'ದೆಹಲಿಯಲ್ಲಿ ಏನಾಗುತ್ತಿದೆ? ದೆಹಲಿಯ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ದಯವಿಟ್ಟು ದೆಹಲಿಯ ಕಾನೂನು ಸುವ್ಯವಸ್ಥೆಯ ಉಸ್ತುವಾರಿ ವಹಿಸಿ" ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಜಾಮೀಯಾ ವಿಶ್ವವಿದ್ಯಾನಿಲಯದ ಸಮೀಪ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆಯ ಮೇಲೆ ಯುವಕನೊಬ್ಬ ಇಂದು ಗುಂಡು ಹಾರಿಸಿದ್ದು, ವಿದ್ಯಾರ್ಥಿಗೆ ಗಾಯವಾಗಿದೆ. ಕಪ್ಪು ಜಾಕೆಟ್ ಮತ್ತು  ಬಿಳಿ ಪ್ಯಾಂಟ್ ಧರಿಸಿದ ರಾಮ್ ಭಕ್ತ ಗೋಪಾಲ್ ಎನ್ನುವ ವ್ಯಕ್ತಿ ಬಂದೂಕು ಹಿಡಿದು ತಗೋ ಆಜಾದಿ ಇಲ್ಲಿದೆ ಎಂದು ಗುಂಡು ಹಾರಿಸುವ ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗಿದೆ.

Trending News