Biparjoy Cyclone: ಅಪಾಯಕಾರಿ ಸ್ವರೂಪ ಪಡೆದುಕೊಳ್ಳುತ್ತಿದೆ ಬಿಪರ್ಜಾಯ್, ಅಧಿಕಾರಿಗಳಿಗೆ ಪ್ರಧಾನಿ ಮೋದಿ ನಿರ್ದೇಶನ

Biparjoy Update: ಬಿಪರ್ಜೋಯ್ ಚಂಡಮಾರುತ ಅಪಾಯಕಾರಿ ಸ್ವರೂಪ ಪಡೆದುಕೊಳ್ಳುತ್ತಿದೆ. ಗುಜರಾತ್ ಕರಾವಳಿ ಪ್ರದೇಶದ ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ಮೀನುಗಾರಿಕೆಯ ಮೇಲೆ ನಿರ್ಬಂಧ ವಿಧಿಸಲಾಗಿದೆ.   

Written by - Nitin Tabib | Last Updated : Jun 12, 2023, 05:31 PM IST
  • ಇದಲ್ಲದೆ ಪೂರ್ವ ಮಧ್ಯ ಹಾಗೂ ಅದಕ್ಕೆ ಹೊಂದಿಕೊಂಡಂತೆ ಇರುವ ಪುರೋತ್ತರ ಅರಬ್ಬೀ ಸಮುದ್ರದಲ್ಲಿ ಎದ್ದಿರುವ ಈ ಚಂಡಮಾರುತ​ದ ಹಿನ್ನೆಲೆ
  • ಭಾರತೀಯ ಹವಾಮಾನ ಇಲಾಖೆ ಸೌರಾಷ್ಟ್ರ ಹಾರೂ ಕಚ್ಛ್ ಮತ್ತು ಅದಕ್ಕೆ ಹೊಂದಿಕೊಂಡಂತೆ ಇರುವ ಪ್ರದೇಶಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ.
  • ಕಚ್ಛ್ ಜಿಲ್ಲೆಯ ಕಡಲು ತೀರಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು. ಸ್ಥಳೀಯ ಆಡಳಿತ ಕಡಲು ತೀರದ ಹತ್ತಿರದಲ್ಲಿ ವಾಸಿಸುವ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸುವ ಕೆಲಸದಲ್ಲಿ ನಿರತವಾಗಿದೆ.
Biparjoy Cyclone: ಅಪಾಯಕಾರಿ ಸ್ವರೂಪ ಪಡೆದುಕೊಳ್ಳುತ್ತಿದೆ ಬಿಪರ್ಜಾಯ್, ಅಧಿಕಾರಿಗಳಿಗೆ ಪ್ರಧಾನಿ ಮೋದಿ ನಿರ್ದೇಶನ title=

Biparjoy Latest Update: ಬಿಪರ್ಜೋಯ್ ಚಂಡಮಾರುತ ಅಪಾಯಕಾರಿ ಸ್ವರೂಪ ಪಡೆದುಕೊಳ್ಳುತ್ತಿದೆ. ಗುಜರಾತ್ ಕರಾವಳಿ ಪ್ರದೇಶದ ದಕ್ಷಿಣ ಮತ್ತು ಉತ್ತರ ಭಾಗದಲ್ಲಿ ಮೀನುಗಾರಿಕೆಯ ಮೇಲೆ ನಿರ್ಬಂಧ ವಿಧಿಸಲಾಗಿದೆ. ಈ ಅಪಾಯಕಾರಿ ಚಂಡಮಾರುತದ ಹಿನ್ನೆಲೆ ಪ್ರಧಾನಿ ಮೋದಿ ಸುಮಾರು 1 ಗಂಟೆಗೂ ಅಧಿಕ ಕಾಲ ಪರಿಶೀಲನಾ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಗೃಹ ಸಚಿವ ಅಮಿತ್ ಷಾ, ಪಿಎಂಒ ಅಧಿಕಾರಿಗಳು ಹಾಗೂ ಗೃಹ ಸಚಿವಾಲಯದ ಅಧಿಕಾರಿಗಳು ಕೂಡ ಉಪಸ್ಥಿತರಿದ್ದರು. 

ನಿರ್ದೇಶನಗಳನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿ
ಬಿಪರ್‌ಜೋಯ್ ಚಂಡಮಾರುತದ ಪರಿಶೀಲನಾ ಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಹಾನಿಯ ಸಂದರ್ಭದಲ್ಲಿ, ತಕ್ಷಣದ ಸಹಾಯಕ್ಕಾಗಿ ಸನ್ನದ್ಧತೆಯೊಂದಿಗೆ ಅಗತ್ಯ ಸೇವೆಗಳ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಿದ್ದಾರೆ. ಪ್ರಧಾನಮಂತ್ರಿಯವರ ಸಭೆಯಲ್ಲಿ, ಹವಾಮಾನ ಇಲಾಖೆಯ ಅಧಿಕಾರಿಯು ಜೂನ್ 15 ರ ಮಧ್ಯಾಹ್ನ ಸೌರಾಷ್ಟ್ರ ಮತ್ತು ಕಚ್ಛ್ ನಲ್ಲಿ ಮಾಂಡ್ವಿ ಮತ್ತು ಕರಾಚಿ ನಡುವಿನ ಜಖೌ ಬಂದರಿನ ಬಳಿ ಚಂಡಮಾರುತ ಅಪ್ಪಳಿಸಲಿದೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ 125-130 ಕಿ.ಮೀ ನಡುವೆ ವೇಗವಾಗಿ ಗಾಳಿ ಬೀಸಲಿದ್ದು, ಇದು 145 ಕಿ.ಮೀ ವರೆಗೆ ಹೆಚ್ಚಾಗಬಹುದು ಎಂದು ಅವರು ಹೇಳಿದ್ದಾರೆ.

ಐಎಂಡಿ ಹೇಳಿದ್ದೇನು? 
ಬಿಪರ್‌ಜೋಯ್ ಚಂಡಮಾರುತವು ನಿಧಾನವಾಗಿ ಉತ್ತರ ದಿಕ್ಕಿನಲ್ಲಿ ಗಂಟೆಗೆ 5 ಕಿಮೀ ವೇಗದಲ್ಲಿ ಚಲಿಸುತ್ತಿದೆ ಮತ್ತು ಜೂನ್ 14 ರ ನಂತರ ತನ್ನ ದಿಕ್ಕನ್ನು ಬದಲಾಯಿಸಲಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ. ಜೂನ್ 15 ರ ಮಧ್ಯಾಹ್ನದ ವೇಳೆಗೆ, 125-135 ಕಿಮೀ / ಗಂ ವೇಗದಲ್ಲಿ ಅತ್ಯಂತ ತೀವ್ರವಾದ ಚಂಡಮಾರುತವು ಸೌರಾಷ್ಟ್ರ, ಕಚ್ಛ್ ಮತ್ತು ಪಾಕಿಸ್ತಾನದ ಕರಾವಳಿಯನ್ನು ಅಪ್ಪಳಿಸಲಿದೆ. ಜೂನ್ 14-15 ರಂದು ಸೌರಾಷ್ಟ್ರ, ಕಚ್ಛ್ ನಲ್ಲಿ ಭಾರೀ ಮಳೆಯಾಗಲಿದೆ ಅವರು ಹೇಳಿದ್ದಾರೆ. 

ಗುಜರಾತ್ ಗೃಹ ಸಚಿವರು ಹೇಳಿದ್ದೇನು?
ಭೀಕರ ಚಂಡಮಾರುತದ ಹಿನ್ನೆಲೆ ಗುಜರಾತ್ ನ ಗೃಹ ಸಚಿವ ಹರ್ಷ ಸಾಂಘ್ವಿ ಅವರು ದ್ವಾರಕಾಧೀಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. 13-15 ರ ನಡುವೆ ದ್ವಾರಕಾದಲ್ಲಿ ಜೋರಾಗಿ ಗಾಳಿ ಮತ್ತು ಮಳೆ ಬೀಳಲಿದೆ ಎಂದು ಅವರು ಹೇಳಿದ್ದಾರೆ. 16 ರವರೆಗೆ ದ್ವಾರಕಾ ಯೋಜನೆಗಳನ್ನು ಮರುಹೊಂದಿಸಲು ಎಲ್ಲಾ ಯಾತ್ರಾರ್ಥಿಗಳಿಗೆ ನಾನು ವಿನಂತಿಸುತ್ತೇನೆ. ದೇವಭೂಮಿ ದ್ವಾರಕಾ ಜಿಲ್ಲಾಡಳಿತವು ಕಳೆದ ಹಲವು ದಿನಗಳಿಂದ ಕರಾವಳಿ ಪ್ರದೇಶದಲ್ಲಿರುವ ಸುಮಾರು 4100 ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕೆಲಸದಲ್ಲಿ ನಿರತವಾಗಿದೆ.

ಇದನ್ನೂ ಓದಿ-Ram Mandir: ಪ್ರಧಾನಿ ಮೋದಿಯಿಂದ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ, 2024ರಲ್ಲಿ ಯಾವಾಗ ರಾಮಮಂದಿರ ಉದ್ಘಾಟನೆ?

ಇನ್ನೊಂದೆಡೆ ಅರಬ್ಭಿ ಸಮುದ್ರದಲ್ಲಿ ನಿರ್ಮಾಣಗೊಂಡ ಈ ಭೀಕರ ಬಿಪರ್ಜೋಯ್ ಚಂಡಮಾರುತದ ಪರಿಣಾಮ ಕೊಂಕಣ್ ಕಡಲು ತೀರದ ಪ್ರದೇಶಗಳಲ್ಲಿ ಎತ್ತರದ ಅಲೆಗಳು ಬಂದು ಅಪ್ಪಳಿಸಲಾರಂಭಿಸಿವೆ. ಹವಾಮಾನ ಇಲಾಖೆ ಮುಂದಿನ 3 ದಿನಗಳ ಕಾಲ ಕಡಲು ತೀರದ ಹತ್ತಿರಕ್ಕೆ ಹೋಗದಂತೆ ಸೂಚನೆ ನೀಡಿದೆ. ಆದರೂ, ಕೂಡ ಜನರು ಅಪಾಯವನ್ನು ಲೆಕ್ಕಿಸುತ್ತಿಲ್ಲ ಎಂದು ಮೂಲಗಳು ವರದಿ ಮಾಡಿವೆ. ಇದಲ್ಲದೆ ಪೂರ್ವ ಮಧ್ಯ ಹಾಗೂ ಅದಕ್ಕೆ ಹೊಂದಿಕೊಂಡಂತೆ ಇರುವ ಪುರೋತ್ತರ ಅರಬ್ಬೀ ಸಮುದ್ರದಲ್ಲಿ ಎದ್ದಿರುವ ಈ ಚಂಡಮಾರುತದ ಹಿನ್ನೆಲೆ ಭಾರತೀಯ ಹವಾಮಾನ ಇಲಾಖೆ ಸೌರಾಷ್ಟ್ರ ಹಾರೂ ಕಚ್ಚ್ ಮತ್ತು ಅದಕ್ಕೆ ಹೊಂದಿಕೊಂಡಂತೆ ಇರುವ ಪ್ರದೇಶಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಕಚ್ಛ್ ಜಿಲ್ಲೆಯ ಕಡಲು ತೀರಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದ್ದು. ಸ್ಥಳೀಯ ಆಡಳಿತ ಕಡಲು ತೀರದ ಹತ್ತಿರದಲ್ಲಿ ವಾಸಿಸುವ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸುವ ಕೆಲಸದಲ್ಲಿ ನಿರತವಾಗಿದೆ. 

ಇದನ್ನೂ ಓದಿ-Indian Navy Exercise: ಅರಬ್ಬೀ ಸಮುದ್ರದಲ್ಲಿ ಭಾರತದ ಭಾರಿ ಆಕ್ಷನ್, ಬೆಚ್ಚಿಬಿದ್ದ ಡ್ರಾಗನ್

NDRF ಹಲವು ತುಕ್ಕಡಿಗಳನ್ನು ನಿಯೋಜಿಸಲಾಗಿದೆ
ಮತ್ತೊಂದೆಡೆ, ಬಿಪರ್ಜೋಯ್ ಚಂಡಮಾರುತದ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಮುಂಬೈನಲ್ಲಿ ಈಗಾಗಲೇ ಲಭ್ಯವಿರುವ ಮೂರು ತಂಡಗಳ ಜೊತೆಗೆ ಎರಡು ತಂಡಗಳನ್ನು ನಿಯೋಜಿಸಿದ್ದೇವೆ ಎಂದು ಎನ್‌ಡಿಆರ್‌ಎಫ್ ಮಾಹಿತಿ ನೀಡಿದೆ. ಇದಲ್ಲದೇ, ಬಿಪರ್ಜೋಯ್ ಚಂಡಮಾರುತವು ಗುಜರಾತ್‌ನಲ್ಲಿ ಹೆಚ್ಚಿನ ಪರಿಣಾಮ ಬೀರುವ ನಿರೀಕ್ಷೆಯಿರುವುದರಿಂದ ನಾವು ಇನ್ನೂ ನಾಲ್ಕು ತಂಡಗಳನ್ನು ಗುಜರಾತ್‌ಗೆ ಕಳುಹಿಸಿದ್ದೇವೆ. ಅಲ್ಲದೆ ನಮ್ಮ ತಂಡಗಳು ಪುಣೆಯಲ್ಲಿ ಸಿದ್ಧವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News