ಬಿಹಾರ: ನಳಂದದಲ್ಲಿ ಡಿಎಸ್ಪಿ ವಾಹನದ ಮೇಲೆ ಕಲ್ಲು ತೂರಾಟ, 67 ಜನರ ವಿರುದ್ಧ ಎಫ್‌ಐಆರ್ ದಾಖಲು

ಹಿಲ್ಸಾ ಪೊಲೀಸ್ ಠಾಣೆ ಪ್ರದೇಶದ ರೆಡಿ ಹಳ್ಳಿಯ ಬಳಿ ಲಕ್ಷ್ಮಿ ಪ್ರತಿಮೆ ಮುಳುಗಿಸುವ ಮೆರವಣಿಗೆಯಲ್ಲಿ ಭಾಗಿಯಾಗಿರುವ ಸಮಾಜ ವಿರೋಧಿಗಳು ಹಿಲ್ಸಾ ಡಿಎಸ್ಪಿಯ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದರು.

Last Updated : Oct 31, 2019, 02:01 PM IST
ಬಿಹಾರ: ನಳಂದದಲ್ಲಿ ಡಿಎಸ್ಪಿ ವಾಹನದ ಮೇಲೆ ಕಲ್ಲು ತೂರಾಟ,  67 ಜನರ ವಿರುದ್ಧ ಎಫ್‌ಐಆರ್ ದಾಖಲು title=

ನಳಂದ: ಬಿಹಾರದ ನಳಂದಾ ಜಿಲ್ಲೆಯ ಹಿಲ್ಸಾ ಡಿಎಸ್ಪಿ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿರುವ ಬಗ್ಗೆ ವರದಿಯಾಗಿದೆ.. ಈ ಘಟನೆಯಲ್ಲಿ ಚಾಲಕ ಮತ್ತು ಡಿಎಸ್ಪಿ ಗಾಯಗೊಂಡಿದ್ದಾರೆ. 

ಈ ಘಟನೆ ಹಿಲ್ಸಾ ಪೊಲೀಸ್ ಠಾಣೆಯ ರೆಡಿ ಗ್ರಾಮದ ಬಳಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಆರೋಪಿ ವಿನಯ್ ರಾಮ್ ಎಂಬಾತನನ್ನು ಬಂಧಿಸಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಆತ ಆಲ್ಕೊಹಾಲ್ ದೃಢಪಟ್ಟಿದೆ. ಹಿಲ್ಸಾ ಪೊಲೀಸ್ ಠಾಣೆಯಲ್ಲಿ ನಾಮನಿರ್ದೇಶಿತ ಏಳು ಮತ್ತು ಅಪರಿಚಿತ 60 ಜನರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. 

ಹಿಲ್ಸಾ ಪೊಲೀಸ್ ಠಾಣೆ ಪ್ರದೇಶದ ರೆಡಿ ಹಳ್ಳಿಯ ಬಳಿ ಲಕ್ಷ್ಮಿ ಪ್ರತಿಮೆ ಮುಳುಗಿಸುವ ಮೆರವಣಿಗೆಯಲ್ಲಿ ಭಾಗಿಯಾಗಿರುವ ಸಮಾಜ ವಿರೋಧಿಗಳು ಹಿಲ್ಸಾ ಡಿಎಸ್ಪಿಯ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದರು.

ಮಾಹಿತಿಯ ಪ್ರಕಾರ, ಘಟನಾ ಸ್ಥಳದಲ್ಲಿ ತಲೆದೂರಿದ್ದ ವಿವಾದವನ್ನು ಬಗೆಹರಿಸಿದ ನಂತರ ಹಿಲ್ಸಾ ಡಿಎಸ್ಪಿ ಚಿಕಾಸೌರಾ ಗ್ರಾಮದಿಂದ ಹಿಂದಿರುಗುತ್ತಿದ್ದ. ಅದೇ ಸಮಯದಲ್ಲಿ, ನೂರಾರು ಜನರು ಅವರ ಕಾರಿಗೆ ಕಲ್ಲು ಎಸೆದರು. ಇದರ ನಂತರ, ಡಿಎಸ್ಪಿ ತನ್ನ ಅಂಗರಕ್ಷಕನೊಂದಿಗೆ ಪರಾರಿಯಾಗಿ ಪ್ರಾಣ ರಕ್ಷಿಸಿಕೊಂಡಿದ್ದಾರೆ ಎನ್ನಲಾಗಿದೆ.

ಘಟನೆಯ ನಂತರ ಪೊಲೀಸರು ಸಂಪೂರ್ಣ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. 
 

Trending News