ಬಿಹಾರ ಪ್ರವಾಹ: ಅತಂತ್ರ ಸ್ಥಿತಿಯಲ್ಲಿ 53.67 ಲಕ್ಷ ಜನರು

ಭಾನುವಾರ ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಹದಗೆಟ್ಟಿದ್ದು, ಈಗ ರಾಜ್ಯದ 14 ಜಿಲ್ಲೆಗಳಲ್ಲಿ ಒಟ್ಟು 53.67 ಲಕ್ಷ ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ. ಪ್ರವಾಹ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 13 ಆಗಿದೆ.

Last Updated : Aug 2, 2020, 08:40 PM IST
ಬಿಹಾರ ಪ್ರವಾಹ: ಅತಂತ್ರ ಸ್ಥಿತಿಯಲ್ಲಿ 53.67 ಲಕ್ಷ ಜನರು title=

ನವದೆಹಲಿ: ಭಾನುವಾರ ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಹದಗೆಟ್ಟಿದ್ದು, ಈಗ ರಾಜ್ಯದ 14 ಜಿಲ್ಲೆಗಳಲ್ಲಿ ಒಟ್ಟು 53.67 ಲಕ್ಷ ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ. ಪ್ರವಾಹ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 13 ಆಗಿದೆ.

ಶನಿವಾರದಿಂದ ಪ್ರವಾಹದಿಂದ ಪೀಡಿತರ ಸಂಖ್ಯೆ 4.62 ಲಕ್ಷ ಏರಿಕೆಯಾಗಿದೆ,ಆದರೆ ಜಿಲ್ಲೆಯ ಸಂಖ್ಯೆ 14 ರಷ್ಟಿದೆ ಎಂದು ಇಲಾಖೆ ಬುಲೆಟಿನ್ ನಲ್ಲಿ ತಿಳಿಸಿದೆ.ಆದಾಗ್ಯೂ, ವಿಪತ್ತಿನಿಂದ ಹಾನಿಗೊಳಗಾದ ಪಂಚಾಯಿತಿಗಳ ಸಂಖ್ಯೆ ಹಿಂದಿನ ದಿನ 1,043 ರಿಂದ 1,059 ಕ್ಕೆ ಏರಿತು.

ಇದನ್ನು ಓದಿ: ಪ್ರವಾಹದ ಬಳಿಕ ಬಿಹಾರದಲ್ಲಿ ಡೆಂಗ್ಯೂ ಭೀತಿ; ಉನ್ನತ ಮಟ್ಟದ ಸಭೆ ನಡೆಸಿದ ಸಿಎಂ ನಿತೀಶ್ ಕುಮಾರ್

ಮುಜಾಫರ್ಪುರ ಜಿಲ್ಲೆಯ ಮುರಾಲ್ ಬ್ಲಾಕ್‌ನಲ್ಲಿ ಕನಿಷ್ಠ ಒಂದು ಡಜನ್ ಹಳ್ಳಿಗಳನ್ನು ಮುಳುಗಿವೆ. ಸ್ಥಳದಲ್ಲಿ ಎರಡು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ತಂಡಗಳನ್ನು ನಿಯೋಜಿಸಲಾಗಿದೆ.16.89 ಲಕ್ಷ ಪ್ರವಾಹ ಪೀಡಿತ ಜನರಿರುವ ಮುಜಾಫರ್ಪುರವು ಅತಿ ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದ್ದು, ನಂತರದ ಸ್ಥಾನದಲ್ಲಿ 12.40 ಲಕ್ಷ ಜನರು ಮತ್ತು ಪೂರ್ವ ಚಂಪಾರನ್ನಲ್ಲಿ 8.09 ಲಕ್ಷ ಜನರು ಇದ್ದಾರೆ.ಪೀಡಿತ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಮುಜಾಫರ್ಪುರ್ ಮತ್ತು ದರ್ಭಂಗಾ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.

ಪ್ರವಾಹ ಸಂಬಂಧಿತ ಘಟನೆಗಳಲ್ಲಿ ಸಂಭವಿಸಿದ 13 ಸಾವುಗಳಲ್ಲಿ, ದರ್ಭಂಗಾ ಅತಿ ಹೆಚ್ಚು ಏಳು ಸಾವುನೋವುಗಳನ್ನು ದಾಖಲಿಸಿದೆ, ಪಶ್ಚಿಮ ಚಂಪಾರನ್ನಲ್ಲಿ ನಾಲ್ಕು ಮತ್ತು ಮುಜಾಫರ್ಪುರದಲ್ಲಿ ಎರಡು ಸಾವುನೋವುಗಳು ಸಂಭವಿಸಿವೆ.ಎನ್‌ಡಿಆರ್‌ಎಫ್‌ನ ಒಟ್ಟು 20 ತಂಡಗಳು ಮತ್ತು ಎಸ್‌ಡಿಆರ್‌ಎಫ್‌ನ 11 ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ ಮತ್ತು ಅವರು ಈವರೆಗೆ 4.03 ಲಕ್ಷ ಜನರನ್ನು ಪೀಡಿತ ಪ್ರದೇಶಗಳಿಂದ ಸ್ಥಳಾಂತರಿಸಿದ್ದಾರೆ ಎಂದು ಬುಲೆಟಿನ್ ತಿಳಿಸಿದೆ.

ಇದನ್ನು ಓದಿ: ಅಸ್ಸಾಂ ಪ್ರವಾಹ : 85 ಜನರು ಮತ್ತು 20 ಜಾನುವಾರುಗಳನ್ನು ರಕ್ಷಿಸಿದ NDRF ತಂಡ

19 ಪರಿಹಾರ ಶಿಬಿರಗಳಲ್ಲಿ 26,734 ಜನರು ತಂಗಿದ್ದಾರೆ ಮತ್ತು ಪೀಡಿತ ಜಿಲ್ಲೆಗಳ 1,385 ಸಮುದಾಯ ಅಡಿಗೆಮನೆಗಳಲ್ಲಿ ಸುಮಾರು 9.29 ಲಕ್ಷ ಜನರಿಗೆ ಆಹಾರವನ್ನು ನೀಡಲಾಗುತ್ತಿದೆ ಎಂದು ಅದು ಹೇಳಿದೆ.ಬಾಗಮತಿ, ಬುರ್ಹಿ ಗಂಡಕ್, ಕಮಲಾಬಾಲನ್, ಅಧ್ವಾರಾ, ಖಿರೋಯ್, ಮಹಾನಂದ ಮತ್ತು ಘಘ್ರಾ ಮುಂತಾದ ನದಿಗಳು ಅಪಾಯದ ಮಟ್ಟಕ್ಕಿಂತ ವಿವಿಧ ಸ್ಥಳಗಳಲ್ಲಿ ಹರಿಯುತ್ತಿವೆ.

ರಾಜ್ಯದಲ್ಲಿ ಹರಿಯುವ ಎಲ್ಲಾ ನದಿಗಳ ಜಲಾನಯನ ಪ್ರದೇಶಗಳಲ್ಲಿ ಸೋಮವಾರ ಲಘು ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.14 ಪ್ರವಾಹ ಪೀಡಿತ ಜಿಲ್ಲೆಗಳೆಂದರೆ ಸೀತಮಾರ್ಹಿ, ಶಿಯೋಹರ್, ಸುಪಾಲ್, ಕಿಶಂಗಂಜ್, ದರ್ಭಂಗಾ, ಮುಜಾಫರ್ಪುರ್, ಗೋಪಾಲಗಂಜ್, ಪಶ್ಚಿಮ ಚಂಪಾರನ್, ಪೂರ್ವ ಚಂಪಾರನ್, ಖಗರಿಯಾ, ಸರನ್, ಸಮಸ್ತಿಪುರ, ಸಿವಾನ್ ಮತ್ತು ಮಧುಬನಿ.

Trending News