God Sent Us A Gift: ಹೆಣ್ಣು ಮಗುವಿಗೆ ತಂದೆಯಾದ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್!

ಪುಟ್ಟ ಕಂದಮ್ಮನ ಬಗ್ಗೆ ಟ್ವೀಟ್ ಮಾಡಿರುವ ತೇಜಸ್ವಿ ಯಾದವ್, ‘ದೇವರು ನಮಗೆ ಮಗಳ ರೂಪದಲ್ಲಿ ಉಡುಗೊರೆ ಕಳುಹಿಸಿದ್ದಾರೆ’ ಎಂದು ಹಿಂದಿಯಲ್ಲಿ ಕ್ಯಾಪ್ಶನ್ ಬರೆದುಕೊಂಡಿದ್ದಾರೆ.

Written by - Puttaraj K Alur | Last Updated : Mar 27, 2023, 01:56 PM IST
  • ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ
  • ತಮ್ಮ ತೋಳುಗಳಲ್ಲಿ ನವಜಾತ ಶಿಶು ಹಿಡಿದುಕೊಂಡಿರುವ ಫೋಟೋ ಹಂಚಿಕೊಂಡ ಆರ್‌ಜೆಡಿ ನಾಯಕ
  • ತೇಜಸ್ವಿ ಯಾದವ್ ಮತ್ತು ಕುಟುಂಬಕ್ಕೆ ಶುಭ ಕೋರಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
God Sent Us A Gift: ಹೆಣ್ಣು ಮಗುವಿಗೆ ತಂದೆಯಾದ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್!  title=
ಹೆಣ್ಣು ಮಗುವಿಗೆ ತಂದೆಯಾದ ತೇಜಸ್ವಿ ಯಾದವ್

ನವದೆಹಲಿ: ಬಿಹಾರದ ಉಪಮುಖ್ಯಮಂತ್ರಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ತಮ್ಮ ಮೊದಲ ಮಗುವನ್ನು ಖುಷಿಯಿಂದ ಸ್ವಾಗತಿಸಿರುವ ಅವರು ಸೋಮವಾರ ತಮ್ಮತೋಳುಗಳಲ್ಲಿ ನವಜಾತ ಶಿಶು ಹಿಡಿದುಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ.

ಪುಟ್ಟ ಕಂದಮ್ಮನ ಬಗ್ಗೆ ಟ್ವೀಟ್ ಮಾಡಿರುವ ತೇಜಸ್ವಿ ಯಾದವ್, ‘ದೇವರು ನಮಗೆ ಮಗಳ ರೂಪದಲ್ಲಿ ಉಡುಗೊರೆ ಕಳುಹಿಸಿದ್ದಾರೆ’ ಎಂದು ಹಿಂದಿಯಲ್ಲಿ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ರಾಷ್ಟ್ರೀಯ ಜನತಾ ದಳದ ಅಧಿಕೃತ ಟ್ವಿಟರ್ ಖಾತೆಯು ಪುತ್ರಿ ಜನಿಸಿದ್ದಕ್ಕೆ ತೇಜಸ್ವಿ ಯಾದವ್ ಅವರಿಗೆ ಅಭಿನಂದನೆ ಸಲ್ಲಿಸಿದೆ.

‘ಆಕಾಂಕ್ಷೆ ಈಡೇರಿದೆ! ಡಿಸಿಎಂ ತೇಜಸ್ವಿ ಯಾದವ್ ಅವರಿಗೆ ನವರಾತ್ರಿ ಮತ್ತು ಚೈತಿ ಛತ್‌ನಂತಹ ಶುಭ ಸಂದರ್ಭಗಳಲ್ಲಿ ಮಗಳ ರೂಪದಲ್ಲಿ ಅತ್ಯಮೂಲ್ಯ ಉಡುಗೊರೆ ಸಿಕ್ಕಿದೆ. ಅತ್ಯಂತ ಪ್ರೀತಿಯ ಮತ್ತು ಅಮೂಲ್ಯವಾದ ಜವಾಬ್ದಾರಿ ಪಡೆದಿದ್ದಕ್ಕಾಗಿ ಬಿಹಾರದಿಂದ ಅಭಿನಂದನೆಗಳು!’ ಎಂದು ಆರ್‍ಜೆಡಿ ಟ್ವೀಟ್ ಮಾಡಿದೆ.  

ಇದನ್ನೂ ಓದಿ: ಸಾವರ್ಕರ್ ಅವಮಾನಿಸಿದ್ರೆ ಪರಿಸ್ಥಿತಿ ನೆಟ್ಟಗಿರಲ್ಲ: ರಾಹುಲ್ ಗಾಂಧಿಗೆ ಉದ್ಧವ್ ಠಾಕ್ರೆ ತಿರುಗೇಟು!

ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ತೇಜಸ್ವಿ ಯಾದವ್ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ‘ನವರಾತ್ರಿಯ ಪವಿತ್ರ ದಿನಗಳಲ್ಲಿ ಮಾತಾ ದೇವಿಯ ಈ ಆಶೀರ್ವಾದಕ್ಕಾಗಿ ನಿಮಗೆ ಮತ್ತು ನಿಮ್ಮ ಇಡೀ ಕುಟುಂಬಕ್ಕೆ ಅಭಿನಂದನೆಗಳು, ತೇಜಸ್ವಿಯವರ ಪುತ್ರಿಗೆ ದೇವಿಯು ಬಹಳಷ್ಟು ಪ್ರೀತಿ ಮತ್ತು ಆಶೀರ್ವಾದ ನೀಡಲಿ, ದೇವರು ನಿಮ್ಮ ಕುಟುಂಬವನ್ನು ಯಾವಾಗಲೂ ಆಶೀರ್ವದಿಸಲಿ’ ಎಂದು ಶುಭ ಹಾರೈಸಿದ್ದಾರೆ.  

ತೇಜಸ್ವಿ ಯಾದವ್ ಅವರು ರಾಜಶ್ರೀ ಯಾದವ್ ಅವರನ್ನು ವಿವಾಹವಾಗಿದ್ದಾರೆ. ದೆಹಲಿಯ ಆರ್‌ಕೆ ಪುರಂನಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಇಬ್ಬರೂ ಭೇಟಿಯಾಗಿದಿದ್ದರು. ರಾಜಶ್ರೀಯವರು ಮೂಲತಃ ಹರಿಯಾಣದವರಾಗಿದ್ದರೂ ದೆಹಲಿಯಲ್ಲಿ ಬೆಳೆದಿದ್ದಾರೆ.

ಉದ್ಯೋಗಕ್ಕಾಗಿ ಭೂ ಹಗರಣದಲ್ಲಿ ಇಡಿ ದಾಳಿ ವೇಳೆ ಗರ್ಭಿಣಿಯಾಗಿದ್ದ ರಾಜಶ್ರೀ ಯಾದವ್ ಅವರು ದೈಹಿಕ ಅಸ್ವಸ್ಥತೆ ಅನುಭವಿಸಿದ್ದರು. ಗರ್ಭಧಾರಣೆ ಮತ್ತು ಅಧಿಕ ರಕ್ತದೊತ್ತಡದ ಹೊರತಾಗಿಯೂ ಇಡಿ ಅಧಿಕಾರಿಗಳು ಅವರನ್ನು 15 ಗಂಟೆಗಳ ಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದರು ಎಂದು ಆರೋಪಿಸಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಸಿದ್ದರು.  

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಸ್ಟ್ರೆಚರ್ ಸಿಗದಕ್ಕೆ ಹಾಳೆಯಲ್ಲಿ ಮಾವನನ್ನು ಎಳೆದೊಯ್ದ ಸೊಸೆ : Video ವೈರಲ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

Trending News