Bihar Boat Capsized:ಬಿಹಾರದ ಮೋತಿಹಾರಿಯಲ್ಲಿ ಭೀಕರ ದೋಣಿ ದುರಂತ, 22 ಜನರು ನೀರುಪಾಲು, ಒಂದು ಶವ ಪತ್ತೆ

Bihar Boat Accident - ಬಿಹಾರದ (Bihar) ಮೋತಿಹಾರಿಯಲ್ಲಿ (Motihari) ಭಾನುವಾರ ಬೆಳಗ್ಗೆ 10 ಗಂಟೆಗೆ ಒಂದು ದೊಡ್ಡ ಅಪಘಾತ ಸಂಭವಿಸಿದೆ. ಜಿಲ್ಲೆಯ ಚಿರಾಯ ಬ್ಲಾಕ್ ನ ಸಿಕರ್ಹಾನಾ ನದಿಯಲ್ಲಿ 25 ಜನರ ತುಂಬಿದ್ದ ದೋಣಿಯೊಂದು (Boat Capsized)  ಮುಳುಗಿದೆ. 

Written by - Nitin Tabib | Last Updated : Sep 26, 2021, 12:42 PM IST
  • ಬಿಹಾರದಲ್ಲಿ ಭೀಕರ ದೋಣಿ ದುರಂತ.
  • ಮೊತಿಹಾರಿ ದೋಣಿ ದುರಂತದಲ್ಲಿ 20 ಜನ ನಾಪತ್ತೆ.
  • ದೋಣಿ ದುರಂತದಲ್ಲಿ ಓರ್ವ ಸಾವು, ಐವರಿಗೆ ಗಂಭೀರ ಗಾಯ.
Bihar Boat Capsized:ಬಿಹಾರದ ಮೋತಿಹಾರಿಯಲ್ಲಿ ಭೀಕರ ದೋಣಿ ದುರಂತ, 22 ಜನರು ನೀರುಪಾಲು, ಒಂದು ಶವ ಪತ್ತೆ  title=
Bihar Boat Capsized (Representational Image)

Bihar Boat Accident - ಬಿಹಾರದ (Bihar) ಮೋತಿಹಾರಿಯಲ್ಲಿ (Motihari) ಭಾನುವಾರ ಬೆಳಗ್ಗೆ 10 ಗಂಟೆಗೆ ಒಂದು ದೊಡ್ಡ ಅಪಘಾತ ಸಂಭವಿಸಿದೆ. ಜಿಲ್ಲೆಯ ಚಿರಾಯ ಬ್ಲಾಕ್ ನ ಸಿಕರ್ಹಾನಾ ನದಿಯಲ್ಲಿ 25 ಜನರ ತುಂಬಿದ್ದ ದೋಣಿಯೊಂದು (Boat Capsized)  ಮುಳುಗಿದೆ. ಈ ದೋಣಿ ದುರಂತದಲ್ಲಿ 20 ಜನರು ನಾಪತ್ತೆಯಾಗಿದ್ದಾರೆ.

ಇದನ್ನೂ ಓದಿ-ಮೃತ ವಿವಾಹಿತ ಮಹಿಳೆಯರು, ಮಕ್ಕಳು, ಸಾಧುಗಳು ಈ ದಿನಾಂಕಗಳಲ್ಲಿ ಶ್ರಾದ್ಧ ಮಾಡಬೇಕು, ಆತ್ಮಕ್ಕೆ ಶಾಂತಿ

ಓರ್ವ ವ್ಯಕ್ತಿಯ ಶವವನ್ನು ಹೊರತೆಗೆಯಲಾಗಿದೆ. ಇದೇ ವೇಳೆ ಈ ದುರಂತದಲ್ಲಿ (Boat Accident) ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೋಣಿಯಲ್ಲಿದ್ದ ಎಲ್ಲರೂ ಹುಲ್ಲು ತರಲು ಹೋಗುತ್ತಿದ್ದರು. ಮಹಿಳೆ ಮುನ್ನಾ ದೇವಿ ಸೇರಿದಂತೆ ಇಬ್ಬರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ಇತರರಿಗಾಗಿ ಹುಡುಕಾಟ ನಡೆಯುತ್ತಿದೆ.

ಇದನ್ನೂ ಓದಿ-Weird News: ಐ-ಡ್ರಾಪ್ ಎಂದು ತಿಳಿದು ಗರ್ಲ್ ಫ್ರೆಂಡ್ ಕಣ್ಣಿಗೆ ಗ್ಲೂ ಹಾಕಿದ ಭೂಪ, ಮುಂದೇನಾಯ್ತು?

ದೋಣಿ ನೀರಿನಲ್ಲಿ ಮುಳುಗುತ್ತಿದ್ದಂತೆ ಭಾರಿ ಕೋಲಾಹಲ ಸೃಷ್ಟಿಯಾಗಿದೆ.  ಸ್ಥಳೀಯ ಜನರ ಸಹಾಯದಿಂದ ಹೆಣ್ಣು ಮಗುವಿನ ಶವವನ್ನು ಹೊರತೆಗೆಯಲಾಗಿದೆ. ನಾಲ್ವರು ಮಹಿಳೆಯರು ಗಾಯಗೊಂಡಿದ್ದಾರೆ. NDRF ಹಾಗೂ ಜಿಲ್ಲಾಡಳಿತ ತಂಡಗಳು ಸ್ಥಳಕ್ಕೆ ಧಾವಿಸಿವೆ. SDRF ತಂಡ ಇನ್ನೂ ಘಟನಾ ಸ್ಥಳಕ್ಕೆ ತಲುಪಬೇಕಿದೆ. ಈಜು ಪರಿಣಿತರು ಕಾಣೆಯಾದವರನ್ನು ಹುಡುಕುತ್ತಿದ್ದಾರೆ. ನಾಪತ್ತೆಯಾದವರ ಕುಟುಂಬಗಳ ಸ್ಥಿತಿ ತೀರಾ ಹದಗೆಟ್ಟಿದೆ. ಸ್ಥಳದಲ್ಲಿ ಭಾರೀ ಜನಸಂದಣಿ  ಉಂಟಾಗಿದೆ.

ಇದನ್ನೂ ಓದಿ-ಭಾರತದಲ್ಲಿ Vivo X70 ಸರಣಿ ಬಿಡುಗಡೆ! ಈ ಫೋನ್‌ನಲ್ಲಿ 12GB RAM ಸೇರಿ ಹಲವು ವೈಶಿಷ್ಟ್ಯಗಳು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News