Big news: ನೀವು ಇನ್ನು ಮುಂದೆ ಸರ್ಕಾರಿ ಅಂಗಡಿಗಳಿಂದ ಪಡಿತರ ಸಿಗುವುದಿಲ್ಲ..! ಕಾರಣ ಇಲ್ಲಿದೆ

ಪಡಿತರ ಚೀಟಿ ಹೊಂದಿರುವವರಿಗೆ ಮತ್ತು ಸರ್ಕಾರಿ ಪಡಿತರ ಅಂಗಡಿಗಳಿಂದ ಪಡಿತರ ತೆಗೆದುಕೊಳ್ಳುವವರಿಗೆ ಒಂದು ಮಹತ್ವದ ಘೋಷಣೆ ಹೊರಬಿದ್ದಿದೆ.

Last Updated : Aug 23, 2021, 07:58 PM IST
  • ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಅಂಗಡಿಯಿಂದ ಪಡಿತರ ತೆಗೆದುಕೊಳ್ಳುವ ಅರ್ಹ ಜನರಿಗೆ ಗುಣಮಟ್ಟದಲ್ಲಿ ಬದಲಾವಣೆಗಳನ್ನು ಮಾಡುತ್ತಿದೆ.
  • ಮಾನದಂಡವನ್ನು ಬದಲಾಯಿಸುವ ಸ್ವರೂಪವು ಬಹುತೇಕ ಅಂತಿಮಗೊಂಡಿದೆ. ಈ ನಿಟ್ಟಿನಲ್ಲಿ ರಾಜ್ಯಗಳೊಂದಿಗೆ ಹಲವು ಸುತ್ತಿನ ಸಭೆಗಳನ್ನು ಸಹ ನಡೆಸಲಾಗಿದೆ.
Big news: ನೀವು ಇನ್ನು ಮುಂದೆ ಸರ್ಕಾರಿ ಅಂಗಡಿಗಳಿಂದ ಪಡಿತರ ಸಿಗುವುದಿಲ್ಲ..! ಕಾರಣ ಇಲ್ಲಿದೆ  title=
ಸಾಂದರ್ಭಿಕ ಚಿತ್ರ

ನವದೆಹಲಿ: ಪಡಿತರ ಚೀಟಿ ಹೊಂದಿರುವವರಿಗೆ ಮತ್ತು ಸರ್ಕಾರಿ ಪಡಿತರ ಅಂಗಡಿಗಳಿಂದ ಪಡಿತರ ತೆಗೆದುಕೊಳ್ಳುವವರಿಗೆ ಒಂದು ಮಹತ್ವದ ಘೋಷಣೆ ಹೊರಬಿದ್ದಿದೆ.

ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಅಂಗಡಿಯಿಂದ ಪಡಿತರ ತೆಗೆದುಕೊಳ್ಳುವ ಅರ್ಹ ಜನರಿಗೆ ಗುಣಮಟ್ಟದಲ್ಲಿ ಬದಲಾವಣೆಗಳನ್ನು ಮಾಡುತ್ತಿದೆ. ಮಾನದಂಡವನ್ನು ಬದಲಾಯಿಸುವ ಸ್ವರೂಪವು ಬಹುತೇಕ ಅಂತಿಮಗೊಂಡಿದೆ. ಈ ನಿಟ್ಟಿನಲ್ಲಿ ರಾಜ್ಯಗಳೊಂದಿಗೆ ಹಲವು ಸುತ್ತಿನ ಸಭೆಗಳನ್ನು ಸಹ ನಡೆಸಲಾಗಿದೆ.

ಇದನ್ನೂ ಓದಿ: Ration card : ಪಡಿತರ ಚೀಟಿಯಲ್ಲಿ ನಿಮ್ಮ ಮನೆಯ ಹೊಸ ಸದಸ್ಯರ ಹೆಸರನ್ನು ಸೇರಿಸಿಬೇಕೆ? ಹಾಗಿದ್ರೆ ಇಲ್ಲಿ ನೋಡಿ!

ಇಲಾಖೆಯ ಪ್ರಕಾರ, ಪ್ರಸ್ತುತ, ದೇಶಾದ್ಯಂತ 80 ಕೋಟಿ ಜನರು ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆಯ (NFSA) ಲಾಭವನ್ನು ಪಡೆಯುತ್ತಿದ್ದಾರೆ. ಅವರಲ್ಲಿ, ಆರ್ಥಿಕವಾಗಿ ಏಳಿಗೆ ಹೊಂದಿದ ಅನೇಕರಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ಸಾರ್ವಜನಿಕ ವಿತರಣಾ ಸಚಿವಾಲಯವು ಮಾನದಂಡಗಳಲ್ಲಿ ಬದಲಾವಣೆಗಳನ್ನು ತರಲಿದೆ ಎನ್ನಲಾಗಿದೆ.

ಇದನ್ನೂ ಓದಿ: Ration card : ಪಡಿತರ ಚೀಟಿದಾರರಿಗೆ 4 ತಿಂಗಳ ಉಚಿತ ಪಡಿತರದ ಜೊತೆಗೆ ಈ ಪ್ರಯೋಜನ : ಶೀಘ್ರದಲ್ಲೇ ಈ ಕೆಲಸ ಮಾಡಿ

ಈ ನಿಟ್ಟಿನಲ್ಲಿ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿ ಸುಧಾಂಶು ಪಾಂಡೆ, ಕಳೆದ ಆರು ತಿಂಗಳಿನಿಂದ ರಾಜ್ಯಗಳಲ್ಲಿ ಮಾನದಂಡಗಳ ಬದಲಾವಣೆಗೆ ಸಂಬಂಧಿಸಿದಂತೆ ಸಭೆ ನಡೆಸಲಾಗುತ್ತಿದೆ ಎಂದು ಹೇಳಿದರು.ರಾಜ್ಯಗಳು ನೀಡಿದ ಸಲಹೆಗಳನ್ನು ಸೇರಿಸಿಕೊಂಡು ಹೊಸ ಮಾನದಂಡಗಳನ್ನು ತಯಾರಿಸಲಾಗುತ್ತಿದೆ.ಈ ಮಾನದಂಡಗಳನ್ನು ಈ ತಿಂಗಳು ಅಂತಿಮಗೊಳಿಸಲಾಗುವುದು. ಹೊಸ ಮಾನದಂಡದ ಅನುಷ್ಠಾನದ ನಂತರ, ಅರ್ಹ ವ್ಯಕ್ತಿಗಳು ಮಾತ್ರ ಪ್ರಯೋಜನವನ್ನು ಪಡೆಯುತ್ತಾರೆ. ನಿರ್ಗತಿಕರನ್ನು ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಪ್ರಕಾರ, 'ಒಂದು ರಾಷ್ಟ್ರ, ಒಂದು ಪಡಿತರ ಚೀಟಿ (ONORC) ಯೋಜನೆ 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಡಿಸೆಂಬರ್ 2020 ರವರೆಗೆ ಜಾರಿಗೆ ಬಂದಿದೆ. ಸುಮಾರು 69 ಕೋಟಿ ಫಲಾನುಭವಿಗಳು ಅಂದರೆ NFSA ಅಡಿಯಲ್ಲಿ ಬರುವ ಜನಸಂಖ್ಯೆಯ ಶೇ 86 ರಷ್ಟು ಜನರು ಈ ಯೋಜನೆಯ ಲಾಭವನ್ನು ಅನುಭವಿಸಿದ್ದಾರೆ.ಪ್ರತಿ ತಿಂಗಳು ಸುಮಾರು 1.5 ಕೋಟಿ ಜನರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆರಳುವ ಮೂಲಕ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.

ಇದನ್ನೂ ಓದಿ : SBI Loan Offers: ಎಸ್‌ಬಿಐ ಕಾರ್, ಗೋಲ್ಡ್ ಲೋನ್‌ನಲ್ಲಿ ಸಿಗುತ್ತಿದೆ ಬಂಪರ್ ಕೊಡುಗೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News