ರಾಷ್ಟ್ರ ರಾಜಧಾನಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗಿಫ್ಟ್: 8400 ಕೋಟಿ ಮೌಲ್ಯದ 2 ಮೆಟ್ರೋ ಕಾರಿಡಾರ್’ಗೆ ಅನುಮೋದನೆ

ಸಭೆಯ ನಂತರ ಸಚಿವ ಅನುರಾಗ್ ಠಾಕೂರ್ ಮಾತನಾಡಿ, ಇಂದು ಸಚಿವ ಸಂಪುಟ 2 ಹೊಸ ಮೆಟ್ರೋ ಕಾರಿಡಾರ್‌’ಗಳಿಗೆ ಅನುಮೋದನೆ ನೀಡಿದೆ. ಮೊದಲನೆಯದು ಲಜಪತ್‌ನಗರದಿಂದ ಸಾಕೇತ್ ಜಿ ಬ್ಲಾಕ್‌’ಗೆ ಮತ್ತು ಎರಡನೆಯದು ಇಂದ್ರಲೋಕದಿಂದ ಇಂದ್ರಪ್ರಸ್ಥದವರೆಗೆ ಮೆಟ್ರೋ ಕಾರಿಡಾರ್ ಅನ್ನು ಅನುಮೋದಿಸಲಾಗಿದೆ.

Written by - Bhavishya Shetty | Last Updated : Mar 13, 2024, 06:14 PM IST
    • ದೆಹಲಿಯಲ್ಲಿ ಇನ್ನೂ ಎರಡು ಹೊಸ ಮೆಟ್ರೋ ಕಾರಿಡಾರ್‌’ಗಳ ನಿರ್ಮಾಣವಾಗಲಿದೆ
    • ದೆಹಲಿ ಮೆಟ್ರೋದ ಹಂತ-IV ಯೋಜನೆಯ ಎರಡು ಹೊಸ ಕಾರಿಡಾರ್‌ಗಳಿಗೆ ಅನುಮೋದನೆ
    • ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ
ರಾಷ್ಟ್ರ ರಾಜಧಾನಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗಿಫ್ಟ್: 8400 ಕೋಟಿ ಮೌಲ್ಯದ 2 ಮೆಟ್ರೋ ಕಾರಿಡಾರ್’ಗೆ ಅನುಮೋದನೆ  title=
Metro Corridor

Metro Corridor in Delhi: ದೆಹಲಿಯಲ್ಲಿ ಇನ್ನೂ ಎರಡು ಹೊಸ ಮೆಟ್ರೋ ಕಾರಿಡಾರ್‌’ಗಳ ನಿರ್ಮಾಣವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಅಂದು ಕಸ ಹೆಕ್ಕಿ ಜೀವನ ನಡೆಸುತ್ತಿದ್ದಾತ ಇಂದು ಕ್ರಿಕೆಟ್ ಲೋಕಕ್ಕೇ ‘ಬಾಸ್’: ಇತಿಹಾಸದಲ್ಲಿ ತ್ರಿಶತಕ ಬಾರಿಸಿದ ಮೊದಲ ಕ್ರಿಕೆಟಿಗನೀತ!

ಸಭೆಯ ನಂತರ ಸಚಿವ ಅನುರಾಗ್ ಠಾಕೂರ್ ಮಾತನಾಡಿ, ಇಂದು ಸಚಿವ ಸಂಪುಟ 2 ಹೊಸ ಮೆಟ್ರೋ ಕಾರಿಡಾರ್‌’ಗಳಿಗೆ ಅನುಮೋದನೆ ನೀಡಿದೆ. ಮೊದಲನೆಯದು ಲಜಪತ್‌ನಗರದಿಂದ ಸಾಕೇತ್ ಜಿ ಬ್ಲಾಕ್‌’ಗೆ ಮತ್ತು ಎರಡನೆಯದು ಇಂದ್ರಲೋಕದಿಂದ ಇಂದ್ರಪ್ರಸ್ಥದವರೆಗೆ ಮೆಟ್ರೋ ಕಾರಿಡಾರ್ ಅನ್ನು ಅನುಮೋದಿಸಲಾಗಿದೆ. ಇದಕ್ಕೆ 8400 ಕೋಟಿ ರೂ. ಮೀಸಲಿರಿಸಲಾಗಿದೆ. 2029 ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ದೆಹಲಿ ಮೆಟ್ರೋದ ಹಂತ-IV ಯೋಜನೆಯ ಎರಡು ಹೊಸ ಕಾರಿಡಾರ್‌ಗಳಿಗೆ ಅನುಮೋದನೆ ನೀಡಿದೆ, ಇದು ರಾಷ್ಟ್ರ ರಾಜಧಾನಿಯಲ್ಲಿ ಮೆಟ್ರೋ ಸಂಪರ್ಕವನ್ನು ಇನ್ನಷ್ಟು ಸುಧಾರಿಸುವ ನಿರೀಕ್ಷೆಯಿದೆ. ಇಂದ್ರಲೋಕದಿಂದ ಇಂದ್ರಪ್ರಸ್ಥದವರೆಗೆ 12.377 ಕಿಮೀ ಮೆಟ್ರೋ ಕಾರಿಡಾರ್ ಮತ್ತು ಲಜಪತ್ ನಗರದಿಂದ ಸಾಕೇತ್ ಜಿ ಬ್ಲಾಕ್ ವರೆಗೆ 8.385 ಕಿಮೀ ಮೆಟ್ರೋ ಕಾರಿಡಾರ್ ನಿರ್ಮಾಣವಾಗಲಿದೆ.

ಇದನ್ನೂ ಓದಿ:  “ಕೊಹ್ಲಿಯನ್ನು ಮೀರಿ ಹೋಗುವ ಸಮಯವಲ್ಲ”- ಮೌನ ಮುರಿದ ಪಾಕ್ ಕ್ರಿಕೆಟಿಗ

ಯೋಜನೆಯ ವೆಚ್ಚ ಮತ್ತು ನಿಧಿ

ದೆಹಲಿ ಮೆಟ್ರೋದ ಹಂತ-IV ಯೋಜನೆಯ ಈ ಎರಡು ಕಾರಿಡಾರ್‌ಗಳ ಒಟ್ಟು ಯೋಜನಾ ವೆಚ್ಚ 8,399 ಕೋಟಿ ರೂಪಾಯಿಗಳಾಗಿದ್ದು, ಇದನ್ನು ಭಾರತ ಸರ್ಕಾರ, ದೆಹಲಿ ಸರ್ಕಾರ ಮತ್ತು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ತೆಗೆದುಕೊಳ್ಳಲಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News