ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ವಂಚನೆ; ಅನರ್ಹ ರೈತರ ಖಾತೆ ಸೇರಿತು ಮೂರು ಸಾವಿರ ಕೋಟಿ

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ನಿಧಿಯು 42 ಲಕ್ಷಕ್ಕೂ ಹೆಚ್ಚು ಅನರ್ಹ ರೈತರ ಖಾತೆ ಸೇರಿದೆ ಎಂಬ ಅಂಶ ಬೆಳೆಕಿಗೆ ಬಂದಿದೆ. ಇದರಿಂದ ಸರ್ಕಾರಕ್ಕೆ  3 ಸಾವಿರ ಕೋಟಿ ರೂಪಾಯಿಗಳಷ್ಟು ನಷ್ಟ ಸಂಭವಿಸಿದೆ.   

Written by - Ranjitha R K | Last Updated : Jul 20, 2021, 05:02 PM IST
  • ಅನರ್ಹ ರೈತರ ಖಾತೆಗೆ ನಿಧಿ ವರ್ಗಾವಣೆ
  • ಅಸ್ಸಾಂನಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆ
  • ಸಂಸತ್ತಿನಲ್ಲಿ ಮಾಹಿತಿ ನೀಡಿದ ಸರ್ಕಾರ
ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ವಂಚನೆ; ಅನರ್ಹ ರೈತರ ಖಾತೆ ಸೇರಿತು ಮೂರು ಸಾವಿರ ಕೋಟಿ  title=
ಅನರ್ಹ ರೈತರ ಖಾತೆಗೆ ನಿಧಿ ವರ್ಗಾವಣೆ (file photo)

ನವದೆಹಲಿ : ದೇಶದ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತಂದಿರುವ ಯೋಜನೆ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮನ್ ನಿಧಿ (Kisan samman nidhi). ಈ ಯೋಜನೆ ಮೂಲಕ ರೈತರ ಖಾತೆಗೆ ವರ್ಷಕ್ಕೆ ಆರು ಸಾವಿರ ರೂಪಾಯಿಗಳನ್ನು ಸರ್ಕಾರ ಹಾಕುತ್ತದೆ. ಇಲ್ಲಿಯವರೆಗೆ ಯೋಜನೆಯ ಅಡಿಯಲ್ಲಿ 8 ಕಂತುಗಳನ್ನು ರೈತರ ಖಾತೆಗೆ ಹಾಕಲಾಗಿದೆ. ಆದರೆ, ಈ ಯೋಜನೆಯ ನಿಧಿಯು 42 ಲಕ್ಷಕ್ಕೂ ಹೆಚ್ಚು ಅನರ್ಹ ರೈತರ ಖಾತೆ ಸೇರಿದೆ ಎಂಬ ಅಂಶ ಬೆಳೆಕಿಗೆ ಬಂದಿದೆ. ಇದರಿಂದ ಸರ್ಕಾರಕ್ಕೆ  3 ಸಾವಿರ ಕೋಟಿ ರೂಪಾಯಿಗಳಷ್ಟು ನಷ್ಟ ಸಂಭವಿಸಿದೆ. 

ಸಂಸತ್ತಿನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಅನರ್ಹ ರೈತರ ಖಾತೆ ಸೇರಿರುವ ಹಣವನ್ನು ವಸೂಲಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಲಾಗಿದೆ. ಅಸ್ಸಾಂನಲ್ಲಿ (Assam) ಈ ರೀತಿಯ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬಂದಿವೆ. ಅಲ್ಲಿ 554 ಕೋಟಿ ರೂ.ಗಳಿಗಿಂತ ಹಣ  8 ಲಕ್ಷ 35 ಸಾವಿರಕ್ಕೂ ಹೆಚ್ಚು ಅನರ್ಹ ರೈತರ ಖಾತೆ ಸೇರಿವೆ. ಪಂಜಾಬ್ (Punjab) ಎರಡನೇ ಸ್ಥಾನದಲ್ಲಿದ್ದು, ಸುಮಾರು 437 ಕೋಟಿ ರೂ.ಗಳನ್ನು ಅನರ್ಹ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಅದೇ ರೀತಿ ಮಹಾರಾಷ್ಟ್ರ (Maharastra) ಮೂರನೇ ಸ್ಥಾನದಲ್ಲಿದ್ದು, ಅನರ್ಹ ರೈತರ ಖಾತೆಗಳಿಗೆ 357 ಕೋಟಿ ರೂ. ಸಂದಾಯವಾಗಿದೆ.

ಇದನ್ನೂ ಓದಿ : New Wage Code: ಖಾಸಗಿ ಕಂಪನಿ ಉದ್ಯೋಗಿಗಳಿಗೆ ಇಲ್ಲಿದೆ ಸಿಹಿಸುದ್ದಿ!

ರೈತರ ವಿಳಾಸ ರೈತರ ಆಧಾರ್ (Aadhaar), ಪಿಎಂಎಸ್, ಆದಾಯ ತೆರಿಗೆ ಡೇಟಾ ಬೇಸ್ ಪರಿಶೀಲನೆಯ ಸಂದರ್ಭದಲ್ಲಿ ಈ ವಂಚನೆ ಕೃಷಿ ಸಚಿವಾಲಯದ ಗಮನಕ್ಕೆ ಬಂದಿದೆ. 42 ಲಕ್ಷಕ್ಕೂ ಹೆಚ್ಚು ಜನರು ಕಿಸಾನ್ ಸಮ್ಮನ್ ನಿಧಿಗೆ (PM Kisan) ಅನರ್ಹರಾಗಿದ್ದು, ಈ ಪೈಕಿ ಕೆಲವು ರೈತರಂತೂ ಆದಾಯ ತೆರಿಗೆ ವ್ಯಾಪ್ತಿಗೆ ಬರುವವರು ಎನ್ನಲಾಗಿದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಅಡಿಯಲ್ಲಿ, ಸರ್ಕಾರವು ದೇಶಾದ್ಯಂತದ ಸಣ್ಣ ರೈತರಿಗೆ ಎರಡು ಸಾವಿರ ರೂಪಾಯಿಗಳನ್ನು  ಮೂರು ಕಂತುಗಳಲ್ಲಿ ಪ್ರತಿ ವರ್ಷ 6000 ರೂಪಾಯಿಗಳನ್ನು ನೀಡುತ್ತದೆ. ಇದು ಕಡಿಮೆ ಭೂಮಿಯನ್ನು ಹೊಂದಿರುವ ಬಡ ರೈತರಿಗೆ ಪ್ರಯೋಜನ ನೀಡುವ ಉದ್ದೇಶದಿಂದ ಜಾರಿಗೆ ತಂದಿರುವ ಯೋಜನೆಯಾಗಿದೆ. 

ಇದನ್ನೂ ಓದಿ : ಈ ಬ್ಯಾಂಕ್ ನಲ್ಲಿ ಖಾತೆ ತೆರೆದರೆ ಉಚಿತವಾಗಿ ಸಿಗಲಿದೆ ಒಂದು ಕೋಟಿಯ ವಿಮೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News