Mission Make In India ಗೆ ಭಾರಿ ಬೂಸ್ಟ್ ನೀಡಿದ Modi ಸರ್ಕಾರ, 4 ಲಕ್ಷ ಉದ್ಯೋಗ ಸೃಷ್ಟಿ

Mission Make In India - ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ಅಧ್ಯಕ್ಷತೆಯಲ್ಲಿ ಏಪ್ರಿಲ್ 7 ರಂದು ನಡೆದ ಸಂಪುಟ ಸಭೆಯಲ್ಲಿ (Union Cabinet) ಈ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಗಿದೆ. ಪಿಎಲ್ಐ ಯೋಜನೆಯ ಮೂಲಕ 4 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸರ್ಕಾರ ನಿರೀಕ್ಷೆ ಹೊಂದಿದೆ.

Written by - Nitin Tabib | Last Updated : Apr 7, 2021, 08:58 PM IST
  • ಮೇಕ್ ಇನ್ ಇಂಡಿಯಾಗೆ ಭಾರಿ ಬೂಸ್ಟ್ ನೀಡಿದ ಮೋದಿ ಸರ್ಕಾರ.
  • AC, Led Lights ತಯಾರಕ ಕಂಪನಿಗಳಿಗೆ PLI ಅಡಿ 6,238 ಕೋಟಿ ರೂ.ಗಳ ಅನುದಾನ.
  • 4 ಲಕ್ಷ ನೇರ ಹಾಗೂ ಪರೋಕ್ಷ ಉದ್ಯೋಗ ಸೃಷ್ಟಿಯ ಗುರಿ.
Mission Make In India ಗೆ ಭಾರಿ ಬೂಸ್ಟ್ ನೀಡಿದ Modi ಸರ್ಕಾರ, 4 ಲಕ್ಷ ಉದ್ಯೋಗ ಸೃಷ್ಟಿ title=
Mission Make In India (File Photo)

ನವದೆಹಲಿ: Mission Make In Indiaಗೆ ಹೆಚ್ಚಿನ ಒತ್ತು ನೀಡಿರುವ ಕೇಂದ್ರ ಸರ್ಕಾರ,  ಹವಾನಿಯಂತ್ರಕಗಳು (Air Conditioner) ಮತ್ತು ಎಲ್ಇಡಿ ದೀಪಗಳಿಗಾಗಿ (LED Lights)ತಯಾರಿಕೆಗಾಗಿ 6,238 ಕೋಟಿ ರೂ.ಗಳ ಪ್ರಾಡಕ್ಟ್ ಲಿಂಕ್ಡ್ ಇನ್ಸೆಂಟಿವ್ (PLI Scheme) ಯೋಜನೆಗೆ ಅನುಮೋದನೆ ನೀಡಿದೆ. ಪಿಎಲ್ಐ ಯೋಜನೆಯಡಿ, ಎಸಿ ಮತ್ತು ಎಲ್ಇಡಿ ದೀಪಗಳ ತಯಾರಿಕೆಗೆ ಸಂಬಂಧಿಸಿದ ಕಂಪನಿಗಳು ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ತಯಾರಿಸಿದ ಸರಕುಗಳ ಹೆಚ್ಚಳದ ಮಾರಾಟಕ್ಕೆ 4% ರಿಂದ 6% ರಷ್ಟು ಪ್ರೋತ್ಸಾಹವನ್ನು ಪಡೆಯಲಿವೆ. ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 7 ರಂದು ನಡೆದ ಸಂಪುಟ ಸಭೆಯಲ್ಲಿ (Cabinet Decision) ಈ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಗಿದೆ. PLI Scheme ಮೂಲಕ 4 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಸರ್ಕಾರ ನಿರೀಕ್ಷಿಸುತ್ತಿದೆ.

ಕೇಂದ್ರ ಕ್ಯಾಬಿನೆಟ್ ಸಭೆ ತೆಗೆದುಕೊಂಡ ನಿರ್ಧಾರದ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ವಲಯ ಆಧಾರಿತ ಸಮಸ್ಯೆಗಳನ್ನು ತೆಗೆದುಹಾಕುವ ಮೂಲಕ ಭಾರತದಲ್ಲಿ ಉತ್ಪಾದನೆಯನ್ನು ಜಾಗತಿಕವಾಗಿ ಸ್ಪರ್ಧಾತ್ಮಕಗೊಳಿಸುವುದು ಪಿಎಲ್ಐ ಯೋಜನೆಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. ಈ ಯೋಜನೆಯು ಜಾಗತಿಕ ಹೂಡಿಕೆಯನ್ನು ತರಲಿದೆ ಮತ್ತು ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ರಫ್ತು ಹೆಚ್ಚಿಸಲಿದೆ. ಎಂದು ಅವರು ಹೇಳಿದ್ದಾರೆ.

ಕಂಪನಿಗಳ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯಲಿದೆ?
>> ಉತ್ಪಾದನಾ ಘಟಕಗಳು ಅಥವಾ ಸಬ್‌ಅಸೆಂಬ್ಲಿಂಗ್, ಭಾರತದಲ್ಲಿ ಇನ್ನೂ ಪೂರ್ಣ ಸಾಮರ್ಥ್ಯಕ್ಕೆ ಉತ್ಪಾದಿಸಲಾಗದ ಉಪಕರಣಗಳ ಇನ್ಸೆಂಟೀವ್ ಆಧಾರದ ಮೇಲೆ ಪಿಎಲ್‌ಐ ಯೋಜನೆಗಾಗಿ ಕಂಪನಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಸೆಮಬ್ಲಿಂಗ್ ಗಾಗಿ  ಯಾವುದೇ ಪ್ರೋತ್ಸಾಹ ಧನ ನೀಡಲಾಗುವುದಿಲ್ಲ.

>>ಪೂರ್ವ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸುವ ಕಂಪನಿಗಳು ಯೋಜನೆಯ ಲಾಭವನ್ನು ಪಡೆಯಲಿವೆ. ಕಂದು ಕ್ಷೇತ್ರ ಮತ್ತು ಹಸಿರು ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಕಂಪನಿಗಳನ್ನು ಸಹ ಈ ಯೋಜನೆಗೆ ಅರ್ಹವೆಂದು ಪರಿಗಣಿಸಲಾಗುತ್ತದೆ. ಭಾರತ ಸರ್ಕಾರದ ಇತರ ಯಾವುದೇ ಪಿಎಲ್ಐ ಯೋಜನೆಯನ್ನು ಪಡೆಯುವ ಯಾವುದೇ ಕಂಪನಿಯು ಮತ್ತೆ ಸಮನಾದ ಉತ್ಪನ್ನಕ್ಕೆ ಲಾಭ ಪಡೆಯಲು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

>>ಈ ಯೋಜನೆಯನ್ನು ಇಡೀ ದೇಶದಲ್ಲಿ ಜಾರಿಗೆ ತರಲಾಗುವುದು. MSME ಕಂಪನಿಗಳು ಸೇರಿದಂತೆ ದೇಶ ಮತ್ತು ವಿದೇಶಗಳಲ್ಲಿನ ಅನೇಕ ಕಂಪನಿಗಳು ಈ ಯೋಜನೆಯ ಲಾಭ ಪಡೆಯುವ ನಿರೀಕ್ಷೆಯಿದೆ ಎಂದು ಸರ್ಕಾರ (Modi Cabinet) ಹೇಳಿದೆ.

>>ಈ ಕಂಪನಿಗಳು ದೇಶೀಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಕಡ್ಡಾಯವಾದ ಬಿಐಎಸ್ ಮತ್ತು ಬಿಇಇ ಮಾನದಂಡಗಳನ್ನು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಅನ್ವಯವಾಗುವ ಮಾನದಂಡಗಳನ್ನು ಪೂರೈಸಬೇಕಾಗಲಿದೆ. ಈ ಯೋಜನೆಯಲ್ಲಿ, ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ ಹೂಡಿಕೆ ಮತ್ತು ತಂತ್ರಜ್ಞಾನದ ಉನ್ನತಿಗೆ ಸಹಾಯ ಮಾಡಲಿವೆ.

ಇದನ್ನೂ ಓದಿ-RBI MPC Meeting 2021: Payments Bank ಗಳಲ್ಲಿನ ಡಿಪಾಸಿಟ್ ಲಿಮಿಟ್ 1 ರಿಂದ 2 ಲಕ್ಷ ರೂ.ಗಳಿಗೆ ಏರಿಕೆ ಮಾಡಿದ RBI

ಐದು ವರ್ಷಗಳಲ್ಲಿ 7920 ಕೋಟಿ ರೂ.ಗಳ ಹೂಡಿಕೆ 
ಒಂದು ಅಂದಾಜಿನ ಪ್ರಕಾರ, ಪಿಎಲ್ಐ ಯೋಜನೆಯ ಮೂಲಕ ಮುಂದಿನ ಐದು ವರ್ಷಗಳ ಅವಧಿಯಲ್ಲಿ 7920 ಕೋಟಿ ರೂ.ಗಳ ಇನ್ಕ್ರಿಮೆಂಟಲ್ ಹೂಡಿಕೆ, 1.68 ಲಕ್ಷ ಕೊರೋ ಇನ್ಕ್ರೀಮೆಂಟಲ್ ಪ್ರೊಡಕ್ಷನ್, 64,400 ಕೋಟಿ ರೂ. ಮೌಲ್ಯದ ವಸ್ತುಗಳ ರಫ್ತು ಹಾಗೂ 49,300 ಕೋಟಿ ರೂ. ಮೌಲ್ಯದ ನೇರ ಮತ್ತು ಪರೋಕ್ಷ ಆದಾಯ ಸಾಧಿಸಲಾಗುವುದು. ಇದಲ್ಲದೆ ಸುಮಾರು 4 ಲಕ್ಷ ನೇರ ಹಾಗೂ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ.

ಇದನ್ನೂ ಓದಿ- RBI Monetary Policy: RBIನ ಈ ನಿರ್ಧಾರದಿಂದ FD ಹೂಡಿಕೆದಾರರಿಗೆ ಲಾಭ

ಈ ಕುರಿತು ಮಾತನಾಡಿರುವ ಕೇಂದ್ರ ವಾಣಿಜ್ಯ ಸಚಿವ ಈ ಸ್ಕೀಮ್ ಮೂಲಕ ಎಸಿ ಸೆಗ್ಮೆಂಟ್ ನಲ್ಲಿ ವ್ಯಾಲ್ಯೂ ಅಡಿಶನ್ ಶೇ.25 ರಿಂದ ಹೆಚ್ಚಾಗಿ ಶೇ.75 ತಲುಪಲಿದೆ ಹಾಗೂ LED LIGHTS ವಿಭಾಗದಲ್ಲಿ ಇದು ಶೇ.40 ರಿಂದ ಶೇ.45ಕ್ಕೆ ಏರಿಕೆಯಾಗಲಿದೆ. PLI ಲಾಭ ಪಡೆಯುವ 13 ಸೆಕ್ಟರ್ ಗಳು ಮುಂದಿನ ಐದು ವರ್ಷಗಳಲ್ಲಿ ಸುಮಾರು 35 ಲಕ್ಧ ಕೋಟಿ ರೂ.ಗಳ ಹೆಚ್ಚುವರಿ ಉತ್ಪಾದನೆಯನ್ನು ಕೈಗೊಳ್ಳಲಿವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-RTGS ಮತ್ತು NEFT ಮಾಡಲು ಬ್ಯಾಂಕ್ ಅವಶ್ಯಕತೆ ಇಲ್ಲ , ಇನ್ನು ಮೊಬೈಲ್ ವಾಲೆಟ್ ಆಗಲಿದೆ ATM

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News