Women Fell In Well In Kushinagar: ಉತ್ತರ ಪ್ರದೇಶದ ಕುಶಿನಗರದಲ್ಲಿ ಭಾರೀ ಅಪಘಾತ ಸಂಭವಿಸಿದೆ. ವಾಸ್ತವವಾಗಿ, ಇಲ್ಲಿ ಅರಿಶಿನ ಸಮಾರಂಭದ ಸಮಯದಲ್ಲಿ, ಕೆಲವು ಮಹಿಳೆಯರು ಬಾವಿಗೆ ಬಿದ್ದಿದ್ದಾರೆ. ಈ ಅಪಘಾತದಲ್ಲಿ 11 ಮಹಿಳೆಯರು ಸಾವನ್ನಪ್ಪಿದ್ದಾರೆ.
ಮಹಿಳೆಯರು ಬಾವಿಯಲ್ಲಿ ಬಿದ್ದಿದ್ದು ಹೇಗೆ?
ವಾಸ್ತವವಾಗಿ, ಅರಿಶಿನ ಶಾಸ್ತ್ರಕ್ಕಾಗಿ ಮಹಿಳೆಯರು ಬಾವಿಯ ಮೇಲೆ ಜಾಲಿಯಲ್ಲಿ ನಿಂತಿದ್ದರು. ಬಾವಿಯಲ್ಲಿದ್ದ ಕಬ್ಬಿಣದ ಜಾಲಿ ಒಡೆದಿದ್ದರಿಂದ ಮಹಿಳೆಯರು ಏಕಾಏಕಿ ಬಾವಿಗೆ ಬಿದ್ದಿದ್ದು (Women Fell In Well), 11 ಮಹಿಳೆಯರು ಮೃತಪಟ್ಟಿದ್ದಾರೆ. ಮೃತರ ಕುಟುಂಬದವರ ರೋದನ ಮುಗಿಲುಮುಟ್ಟಿದೆ. ಈ ಭೀಕರ ಅಪಘಾತವು ಕುಶಿನಗರದ ನೆಬುವಾ ನೌರಂಗಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ನೌರಂಗಿಯಾ ಸ್ಕೂಲ್ ಟೋಲಾದಲ್ಲಿ ಸಂಭವಿಸಿದೆ.
ಇದನ್ನೂ ಓದಿ- ಗ್ಯಾರಂಟಿ ಇಲ್ಲದೇ ಇಲ್ಲಿ 5 ಲಕ್ಷ ಸಾಲ ದೊರೆಯಲಿದೆ: ಅರ್ಜಿ ಸಲ್ಲಿಸುವುದು ಹೇಗೆಂದು ತಿಳಿಯಿರಿ
ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ:
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಎಲ್ಲಾ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಗಾಯಾಳುಗಳನ್ನು ಆಸ್ಪತ್ರೆಗೆ (Hospital) ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಅಪಘಾತದ ಬಗ್ಗೆ ಸಿಎಂ ಯೋಗಿ ಸಂತಾಪ ವ್ಯಕ್ತಪಡಿಸಿದ್ದಾರೆ:
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕುಶಿನಗರದ ನೆಬುವಾ ನೌರಂಗಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾವಿಗೆ ಬಿದ್ದು ಅಪಘಾತದಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಸೂಚಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿ ರಕ್ಷಣಾ ಮತ್ತು ಪರಿಹಾರ ಕಾರ್ಯ ಆರಂಭಿಸಿ ಅಪಘಾತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತದ ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ- ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ, 40 kmph ವೇಗ: ಸರ್ಕಾರದ ಹೊಸ ರಸ್ತೆ ಸುರಕ್ಷತಾ ನಿಯಮಗಳು ಇಲ್ಲಿವೆ
ಅರಿಶಿನ ಶಾಸ್ತ್ರಕ್ಕೆಂದು ತೆರಳಿದ್ದಾಗ ಬಾವಿಯಲ್ಲಿ ಬಿದ್ದು 11 ಮಂದಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಕುಶಿನಗರ ಡಿಎಂ ತಿಳಿಸಿದ್ದಾರೆ. ಮೃತರ ಸಂಬಂಧಿಕರಿಗೆ 4 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದವರು ಘೋಷಿಸಿದ್ದಾರೆ.
UP | 11 people died & two are seriously injured after they accidentally fell into a well. During a wedding program, some people were sitting on a slab of a well and due to heavy load the slab broke. An ex-gratia of Rs 4 lakh will be given to the kin of the deceased: DM Kushinagar pic.twitter.com/6PHeVYATp0
— ANI UP/Uttarakhand (@ANINewsUP) February 16, 2022
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.