ಭೋಪಾಲ್: ಭಾರೀ ಮಳೆಯ ನಡುವೆಯೂ ಹೊತ್ತಿ ಉರಿದ ಕಟ್ಟಡ

ಪತ್ರಿಕಾ ಕಾಂಪ್ಲೆಕ್ಸ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡು ಧಗಧಗ ಉರಿದ ಘಟನೆ ಭೂಪಾಲ್'ನ ವಾಣಿಜ್ಯ ಪ್ರದೇಶವಾದ ಎಂ.ಪಿ.ನಗರದಲ್ಲಿ ನಡೆದಿದೆ. 

Last Updated : Jul 17, 2018, 02:03 PM IST
ಭೋಪಾಲ್: ಭಾರೀ ಮಳೆಯ ನಡುವೆಯೂ ಹೊತ್ತಿ ಉರಿದ ಕಟ್ಟಡ title=

ಭೋಪಾಲ್: ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಜ್ಯದ ಜನತೆ ಪರದಾಡುತ್ತಿದ್ದರೆ, ಮತ್ತೊಂದೆಡೆ ಪತ್ರಿಕಾ ಕಾಂಪ್ಲೆಕ್ಸ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡು ಧಗಧಗ ಉರಿದ ಘಟನೆ ಭೂಪಾಲ್'ನ ವಾಣಿಜ್ಯ ಪ್ರದೇಶವಾದ ಎಂ.ಪಿ.ನಗರದಲ್ಲಿ ನಡೆದಿದೆ. 

ಮುನ್ಸಿಪಲ್ ಪತ್ರಿಕಾ ಸಂಕೀರ್ಣದ ಖಾಸಗಿ ಕಂಪೆನಿಯ ಕಚೇರಿಯಲ್ಲಿ ಕಾಣಿಸಿಕೊಂಡ ಬೆಂಕಿ, ಮಳೆಯ ನಡುವೆಯೇ ಇಡೀ ಕಟ್ಟಡವನ್ನು ಆವರಿಸಿತು. ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ 12 ಅಗ್ನಿಶಾಮಕ ವಾಹನಗಳು ಒಂದು ಗಂಟೆಗೂ ಹೆಚ್ಚು ಕಾಲದ ಪರಿಶ್ರಮದ ನಂತರ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. 

ವರದಿಗಳ ಪ್ರಕಾರ, ಬೆಂಕಿ ಅವಘಡದಿಂದಾಗಿ ಖಾಸಗಿ ಕಂಪನಿಗೆ ಲಕ್ಷಾಂತರ ರೂ. ನಷ್ಟವಾಗಿದೆ ಎನ್ನಲಾಗಿದೆ. 

Trending News