'ಆಜಾದ್ ಸಮಾಜ ಪಕ್ಷ' ಘೋಷಿಸಿದ ಭೀಮ್ ಸೇನಾ ಮುಖ್ಯಸ್ಥ ಚಂದ್ರಶೇಖರ್ ಆಜಾದ್

ಭೀಮ್ ಸೇನಾ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಭಾನುವಾರ (ಮಾರ್ಚ್ 15, 2020) ತಮ್ಮ ಹೊಸ ರಾಜಕೀಯ ಪಕ್ಷವನ್ನು ಅಧಿಕೃತವಾಗಿ ಘೋಷಿಸಿದರು. ಪಕ್ಷವನ್ನು 'ಆಜಾದ್ ಸಮಾಜ ಪಕ್ಷ' ಎಂದು ಕರೆಯಲಾಗುವುದು.

Last Updated : Mar 15, 2020, 06:55 PM IST
 'ಆಜಾದ್ ಸಮಾಜ ಪಕ್ಷ' ಘೋಷಿಸಿದ ಭೀಮ್ ಸೇನಾ ಮುಖ್ಯಸ್ಥ ಚಂದ್ರಶೇಖರ್ ಆಜಾದ್  title=
Photo courtesy: ANI

ನವದೆಹಲಿ: ಭೀಮ್ ಸೇನಾ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಭಾನುವಾರ (ಮಾರ್ಚ್ 15, 2020) ತಮ್ಮ ಹೊಸ ರಾಜಕೀಯ ಪಕ್ಷವನ್ನು ಅಧಿಕೃತವಾಗಿ ಘೋಷಿಸಿದರು. ಪಕ್ಷವನ್ನು 'ಆಜಾದ್ ಸಮಾಜ ಪಕ್ಷ' ಎಂದು ಕರೆಯಲಾಗುವುದು.

ಈಗ ಅವರ ರಾಜಕೀಯ ಪಕ್ಷದ ಘೋಷನೆಯಿಂದಾಗಿ ಉತ್ತರ ಪ್ರದೇಶದ 2022 ರ ವಿಧಾನಸಭಾ ಚುನಾವಣೆ ಇನ್ನಷ್ಟು ಆಸಕ್ತಿದಾಯಕವಾಗಿದೆ ಏಕೆಂದರೆ ಈಗಾಗಲೇ ಅಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ), ಕಾಂಗ್ರೆಸ್, ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಸರ್ಕಾರ ರಚನೆಗೆ ಹೋರಾಡಲಿವೆ.ಚಂದ್ರಶೇಖರ್ ಆಜಾದ್ ಚಾಲನೆ ನೀಡಿದ ಪಕ್ಷಕ್ಕೆ ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್ ಮತ್ತು ರಾಷ್ಟ್ರೀಯ ಲೋಕ ದಳದ (ಆರ್‌ಎಲ್‌ಡಿ) 98 ನಾಯಕರು ಸೇರಿದರು.

ಇದೇ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಚಂದ್ರಶೇಖರ್ ಆಜಾದ್ ' ಸಾಹೇಬ್  ಕಾನ್ಶಿ ರಾಮ್ ನಿಮ್ಮ ಮಿಷನ್ ಅಪೂರ್ಣವಾಗಿದೆ, ಆಜಾದ್ ಸಮಾಜ ಪಕ್ಷವು ಅದನ್ನು ಪೂರ್ಣಗೊಳಿಸುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ,ದಲಿತರ ಹಕ್ಕುಗಳಿಗಾಗಿ ಹೋರಾಡುವುದರಲ್ಲಿ ಹೆಸರುವಾಸಿಯಾದ ಚಂದ್ರಶೇಖರ್ ಅವರು ಮಾರ್ಚ್ 15 ರ ದಿನಾಂಕವನ್ನು ತಮ್ಮ ಪಕ್ಷದ ಹೆಸರನ್ನು ಘೋಷಿಸಲು ನಿರ್ಧರಿಸಿದರು, ಏಕೆಂದರೆ ಇದು ಕನ್ಶಿ ರಾಮ್ ಅವರ ಜನ್ಮದಿನ. ಅವರು ಪ್ರಮುಖ ನಾಯಕರಾಗಿದ್ದರು ಮತ್ತು 90 ರ ದಶಕದಲ್ಲಿ ದೇಶದ ದಲಿತರ ಧ್ವನಿಯಾಗಿದ್ದಲ್ಲದೆ ಮುಂದೆ ಬಹುಜನ ಸಮಾಜ ಪಕ್ಷದ ಸ್ಥಾಪನೆಗೆ ಕಾರಣಕರ್ತರಾಗಿದ್ದರು.

ಈ ಹಿಂದೆ ಕೊರೊನಾ ವೈರಸ್ ಹಿನ್ನಲೆಯಲ್ಲಿ ಸಾಮೂಹಿಕ ಸಭೆ ನಡೆಸಲು ಉತ್ತರ ಪ್ರದೇಶದ ನೋಯ್ಡಾದಲ್ಲಿ ಚಂದ್ರಶೇಖರ್ ಅವರಿಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ನಂತರ, ಕಾರ್ಯಕ್ರಮವನ್ನು ಆಯೋಜಿಸಲು ಕಾರ್ಮಿಕರ ಒತ್ತಾಯದ ಹಿನ್ನೆಲೆಯಲ್ಲಿ ಪೊಲೀಸರು ಈ ಕಾರ್ಯಕ್ರಮಕ್ಕೆ ಅವಕಾಶ ನೀಡಿದರು.

Trending News