ನವದೆಹಲಿ: ಇನ್ನು ಕೆಲವೇ ವಾರಗಳಲ್ಲಿ ವಿಶ್ವದ ಖ್ಯಾತ ಮೆಸೆಂಜರ್ ಆಪ್ ವಾಟ್ಸ್ ಆಪ್ ಹಲವಾರು ಸ್ಮಾರ್ಟ್ ಫೋನ್ ಗಳಲ್ಲಿ ತನ್ನ ಕಾರ್ಯ ಸ್ಥಗಿತಗೊಳಿಸಲಿದೆ. ಇದಕ್ಕೆ ಸಂಬಂಧಿಸಿದಂತೆ ಸಂಸ್ಥೆ ತನ್ನ FAQ ಸೆಕ್ಷನ್ ಅಪ್ಡೇಟ್ ಮಾಡಿದ್ದು, ಕೆಲ ಅಂಡ್ರಾಯಿಡ್ ಹಾಗೂ ಐಓಎಸ್ ಗಳ ಪಟ್ಟಿ ಮಾಡಿದ್ದು, ಈ ಪ್ಲಾಟ್ ಫಾರ್ಮ್ ಗಳ ಮೇಲೆ ಫೆಬ್ರುವರಿ 1, 2020ರ ಬಳಿಕ ವಾಟ್ಸ್ ಆಪ್ ಕಾರ್ಯ ಮಾಡುವುದನ್ನು ನಿಲ್ಲಿಸಲಿದ್ದು, ಈ ಪ್ಲಾಟ್ ಫಾರ್ಮ್ ಗಳಿಗೆ ವಾಟ್ಸ್ ಆಪ್ ತನ್ನ ಸಪೋರ್ಟ್ ಸ್ಥಗಿತಗೊಳಿಸಲಿದೆ ಎಂದು ಸ್ಪಷ್ಟಪಡಿಸಿದೆ.
ವಾಟ್ಸ್ ಆಪ್ ನ FAQ ಸೆಕ್ಷನ್ ನಲ್ಲಿ ನೀಡಲಾಗಿರುವ ಮಾಹಿತಿ ಪ್ರಕಾರ, ಅಂಡ್ರಾಯಿಡ್ 2.3.7 ಆವೃತ್ತಿ ಬಳಸುವ ಅಂಡ್ರಾಯಿಡ್ ಫೋನ್ ಗಳು ಹಾಗೂ ಐಓಎಸ್ 8 ಸಂಚಾಲಿತವಾಗಿರುವ ಐಫೋನ್ ಗಳಿಗೆ ಮುಂದಿನ ವರ್ಷದಿಂದ ವಾಟ್ಸ್ ಆಪ್ ತನ್ನ ಸಪೋರ್ಟ್ ಸ್ಥಗಿತಗೊಳಿಸಲಿದೆ.
ಈ ಹಳೆ ಅಂಡ್ರಾಯಿಡ್ ಹಾಗೂ ಐಓಎಸ್ ಆಪರೇಟಿಂಗ್ ಸಿಸ್ಟಮ್ಸ್ ಗಳು ಹೊಸ ಖಾತೆ ತೆರೆಯಲೂ ಸಹ ವಿಫಲಗೊಳ್ಳಲಿದ್ದು, ಫೆಬ್ರುವರಿ 1, 2020ರ ಬಳಿಕ ಈ ಪ್ಲಾಟ್ ಫಾರಂಗಳಲ್ಲಿ ಚಾಲ್ತಿ ಇರುವ ಖಾತೆಗಳ ಪುನರ್ಪರೀಶೀಲನೆ ನಡೆಸಲಾಗುವುದು ಎಂಬುದರ ಮೇಲೆ FAQ ಒತ್ತು ನೀಡಿದೆ.
ಜೊತೆಗೆ ವಾಟ್ಸ್ ಆಪ್ ಡಿಸೆಂಬರ್ 31, 2019 ರ ಬಳಿಕ ವಾಟ್ಸ್ ಆಪ್ ಎಲ್ಲಾ ಆವೃತ್ತಿಯ ವಿಂಡೋಸ್ ಫೋನ್ ಗಳಿಗೆ ತನ್ನ ಸೇವೆ ಸ್ಥಗಿತಗೊಳಿಸಲಿದೆ. ಇದೇ ತಿಂಗಳಿನಲ್ಲಿ ವಿಂಡೋಸ್ ಕೂಡ ವಿಂಡೋಸ್ 10 ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಗೆ ತನ್ನ ಸಪೋರ್ಟ್ ಸ್ಥಗಿತಗೊಲಿಸಲಿರುವುದು ಇಲ್ಲಿ ಗಮನಾರ್ಹ. ಅಷ್ಟೇ ಅಲ್ಲ ಜುಲೈ 1, 2019 ರ ಬಳಿಕ ವಾಟ್ಸ್ ಆಪ್ ವಿಂಡೋಸ್ ಸ್ಟೋರ್ ನಲ್ಲಿ ಕಾಣಿಸದೆ ಇರಬಹುದು ಎಂದು ಮೈಕ್ರೋಸಾಫ್ಟ್ ಪ್ರಕಟಿಸಿರುವುದು ಇಲ್ಲಿ ಉಲ್ಲೇಖನೀಯ.
ಆದರೆ ಒಂದು ವೇಳೆ ನಿಮ್ಮ ಬಳಿ ವಿಂಡೋಸ್ ಸ್ಮಾರ್ಟ್ ಫೋನ್ ಇದ್ದು, ನೀವು ನಿಮ್ಮ ಹಳೆ ಚಾಟ್ ಗಳನ್ನು ಉಳಿಸಿಕೊಳ್ಳಲು ಇಚ್ಚಿಸುತ್ತಿದ್ದರೆ, ಡಿಸೆಂಬರ್ 31ರ ಬಳಿಕ ನಿಮಗೆ 'ಸೇವ್ ಯುವರ್ ಚಾಟ್' ಆಯ್ಕೆ ಲಭ್ಯವಾಗಿರಲಿದೆ. ಇದಕ್ಕಾಗಿ ನೀವು ಉಳಿಸಿಕೊಳ್ಳಲು ಬಯಸುತ್ತಿರುವ ಚಾಟ್ ಓಪನ್ ಮಾಡಿ, ಗ್ರೂಪ್ ಇನ್ಫೋ ಮೇಲೆ ಟ್ಯಾಪ್ ಮಾಡಿ. ಬಳಿಕ ಎಕ್ಸ್ಪೋರ್ಟ್ ಚಾಟ್ ಮೇಲೆ ಕ್ಲಿಕ್ಕಿಸಿ. ನಂತರ ನಿಮಗೆ ನಿಮ್ಮ ಸಂಭಾಷಣೆಯನ್ನು ವಿಡಿಯೋ ಸಹಿತ ಅಥವಾ ರಹಿತವಾಗಿ ಡೌನ್ಲೋಡ್ ಮಾಡಿಕೊಳ್ಳಲು ಆಯ್ಕೆ ಲಭ್ಯವಾಗಲಿದೆ.
ಫೆಸ್ ಬುಕ್ ಒಡೆತನದ ಈ ಮೆಸೆಂಜರ್ ಆಪ್ ಈ ಕೆಳಗೆ ನಮೂದಿಸಲಾದ ಓಎಸ್ ಗಳ ಮೇಲೆ ತನ್ನ ಕಾರ್ಯ ಎಂದಿನಂತೆ ಮುಂದುವರೆಸಲಿದೆ.
- ಜಿಯೋ ಫೋನ್ ಹಾಗೂ ಜಿಯೋ ಫೋನ್ 2 ಸೇರಿದಂತೆ KaiOS 2.5.1+ OS
- ಓಎಸ್ 4.0.3+ ಸಂಚಾಲಿತ ಅಂಡ್ರಾಯಿಡ್ ಫೋನ್ ಗಳು
- iOS 9+ ಸಂಚಾಲಿತ ಐಫೋನ್ ಗಳು
ಯಾವ ಸ್ಮಾರ್ಟ್ ಫೋನ್ ಗಳಿಗೆ ಸಪೋರ್ಟ್ ಸೇವೆ ಸ್ಥಗಿತ
- Android versions 2.3.7 ಮತ್ತು ಹಳೆ ಆವೃತ್ತಿಯ ಸ್ಮಾರ್ಟ್ ಫೋನ್ ಗಳು
- iOS 8 ಮತ್ತು ಹಳೆ ಆವೃತ್ತಿಯ ಸ್ಮಾರ್ಟ್ ಫೋನ್ ಗಳು
- 31 December, 2019ರ ಬಳಿಕ ಎಲ್ಲ ಆವೃತ್ತಿಯ ವಿಂಡೋಸ್ ಫೋನ್ ಗಳು
ಸದ್ಯ ಶೀಘ್ರವೇ ಸಂದೇಶಗಳನ್ನು ರವಾನಿಸುವ ಈ ಆಪ್ ತನ್ನ ಬಹು ನಿರೀಕ್ಷಿತ 'ಡಾರ್ಕ್ ಮೋಡ್' ವೈಶಿಷ್ಟ್ಯ ಪರಿಚಯಿಸಲು ಭರದಿಂದ ಸಿದ್ಧತೆ ನಡೆಸಿದೆ.