ಬೆಂಗಳೂರಿಗೆ ಈಗ ಮನೆ ಖರೀದಿ ಹೂಡಿಕೆಯಲ್ಲಿ ನಂಬರ್ 1 ಸ್ಥಾನ..!

ಭಾರತದ ಐಟಿ ರಾಜಧಾನಿ ಬೆಂಗಳೂರು ಈಗ ಮನೆ ಖರೀದಿದಾರರಲ್ಲಿ ಪ್ರಮುಖ ಹೂಡಿಕೆಯ ಆಯ್ಕೆಯಾಗಿದೆ ಎಂದು ಟ್ರ್ಯಾಕ್ 2 ಮೀಡಿಯಾ ರಿಸರ್ಚ್ ವರದಿ ಮಾಡಿದೆ. ಬೆಂಗಳೂರಿನ ನಂತರದ ಸ್ಥಾನವನ್ನು ಮುಂಬೈ ಪಡೆದಿದೆ.

Last Updated : Jan 26, 2019, 04:20 PM IST
ಬೆಂಗಳೂರಿಗೆ ಈಗ ಮನೆ ಖರೀದಿ ಹೂಡಿಕೆಯಲ್ಲಿ ನಂಬರ್ 1 ಸ್ಥಾನ..!   title=

ನವದೆಹಲಿ: ಭಾರತದ ಐಟಿ ರಾಜಧಾನಿ ಬೆಂಗಳೂರು ಈಗ ಮನೆ ಖರೀದಿದಾರರಲ್ಲಿ ಪ್ರಮುಖ ಹೂಡಿಕೆಯ ಆಯ್ಕೆಯಾಗಿದೆ ಎಂದು ಟ್ರ್ಯಾಕ್ 2 ಮೀಡಿಯಾ ರಿಸರ್ಚ್ ವರದಿ ಮಾಡಿದೆ. ಬೆಂಗಳೂರಿನ ನಂತರದ ಸ್ಥಾನವನ್ನು ಮುಂಬೈ ಪಡೆದಿದೆ.

ಬೆಸ್ಟ್ ಪ್ರಾಕ್ಟೀಸಸ್ ರಿಪೋರ್ಟ್ 2019" ಪ್ರಕಾರ, ನಗರದ ಕಾಸ್ಮೋಪಾಲಿಟನ್ ಲಕ್ಷಣ, ಐಟಿ ಸಂಬಂಧಿತ ಸೇವೆಗಳು ಮತ್ತು ರಿಯಲ್ ಎಸ್ಟೇಟ್ ಡೆವಲಪರ್ ಗಳಿಂದ ಒದಗುವ ಸಕಾಲಿಕ ವಿತರಣೆ ಮತ್ತು ಗುಣಮಟ್ಟ ನಿರ್ವಹಣೆ ಹಾಗೂ ಇಲ್ಲಿ ಒದಗುವ ಉದ್ಯೋಗಾವಕಾಶಗಳು ಮನೆ ಖರೀದಿದಾರರಿಗೆ ಬೆಂಗಳೂರು ನಗರವನ್ನು ಆಯ್ಕೆ ಮಾಡುವಲ್ಲಿನ ಪ್ರಮುಖ ಕಾರಣಗಳು ಎಂದು ವರದಿ ತಿಳಿಸಿದೆ. ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದ ದಕ್ಷಿಣ ಭಾರತದ ಇತರ ನಗರಗಳೆಂದರೆ: ಹೈದರಾಬಾದ್ (3), ಚೆನ್ನೈ (7) ಮತ್ತು ಕೊಯಮತ್ತೂರು (10)ಗಳಾಗಿವೆ.ಗ್ರಾಹಕರ ಆಯ್ಕೆ ಸೂಚ್ಯಂಕದಲ್ಲಿ ಮುಂಬೈ ಎರಡನೇ ಸ್ಥಾನದಲ್ಲಿದೆ, ಗುರುಗ್ರಾಮ ನಾಲ್ಕನೆಯ ಸ್ಥಾನದಲ್ಲಿದ್ದಾರೆ. ಪುಣೆ (5), ಕೋಲ್ಕತ್ತಾ (6), ಅಹಮದಾಬಾದ್ (8) ಮತ್ತು ಚಂಡೀಗಢ (9) ಮೊದಲಾದವು ಟಾಪ್ 10 ರಲ್ಲಿರುವ ಇತರ ನಗರಗಳಾಗಿವೆ.

ಈ ವರದಿ ಪ್ರಕಾರ, ಬೆಂಗಳೂರ ಮೂಲದ ಶೋಭಾ ಲಿಮಿಟೆಡ್ ಅತ್ಯುತ್ತಮ ಅಭ್ಯಾಸಗಳ ಪ್ರಕಾರ, ಗೋಡ್ರೆಜ್ ಪ್ರಾಪರ್ಟೀಸ್ ಮತ್ತು ಎಂಬಸಿ ಗ್ರೂಪ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿವೆ.ಕಂಪನಿಗಳ ಹಣಕಾಸಿನ ನಿರ್ವಹಣೆ, ಯೋಜನೆಗಳ ನಿರ್ವಹಣೆ, ಮಾರುಕಟ್ಟೆ ಆಳ, ಗ್ರಾಹಕ ಸಂಪರ್ಕ, ಪಾರದರ್ಶಕತೆ, ಕ್ರಿಯಾತ್ಮಕ ವೃತ್ತಿಪರತೆ, ಆರೈಕೆ, ಉದ್ಯೋಗಾವಕಾಶ, ಸಂವಹನ ಇವೆಲ್ಲ ಸಂಗತಿಗಳನ್ನು ಸಮೀಕ್ಷೆಯಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.

Trending News