ಚುನಾವಣಾ ಪ್ರಚಾರದಿಂದ 72 ಗಂಟೆಗಳ ನಿಷೇಧ; ಸಾಧ್ವಿ ಪ್ರಗ್ಯಾರಿಂದ ಇಂದು ಟೆಂಪಲ್ ರನ್

ಗುರುವಾರ ಬೆಳಿಗ್ಗೆ ರಿವೇರಾ ಪಟ್ಟಣದಲ್ಲಿರುವ ತಮ್ಮ ನಿವಾಸದಲ್ಲಿ ಸಾರ್ವಜನಿಕರನ್ನು ಭೇಟಿಯಾದ ಸಾಧ್ವಿ, ಭೂಪಾಲದ ಕರ್ಫ್ಯೂ ವಾಲಿ ಮಾತಾ ಮಂದಿರಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

Last Updated : May 2, 2019, 10:32 AM IST
ಚುನಾವಣಾ ಪ್ರಚಾರದಿಂದ 72 ಗಂಟೆಗಳ ನಿಷೇಧ; ಸಾಧ್ವಿ ಪ್ರಗ್ಯಾರಿಂದ ಇಂದು ಟೆಂಪಲ್ ರನ್ title=
file photo

ನವದೆಹಲಿ: ಬಿಜೆಪಿಯ ಭೋಪಾಲ್ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಗುರುವಾರದಿಂದ 72 ಗಂಟೆಗಳ ಕಾಲ ಚುನಾವಣಾ ಪ್ರಚಾರ ನಡೆಸುವಂತಿಲ್ಲ ಎಂದು ಚುನಾವಣಾ ಆಯೋಗ ನಿಷೇಧ ಹೇರಿದ ಬೆನ್ನಲ್ಲೇ ಸಾಧ್ವಿ ಪ್ರಗ್ಯಾ ಅವರು ಇಂದು ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ.

ಗುರುವಾರ ಬೆಳಿಗ್ಗೆ ರಿವೇರಾ ಪಟ್ಟಣದಲ್ಲಿರುವ ತಮ್ಮ ನಿವಾಸದಲ್ಲಿ ಸಾರ್ವಜನಿಕರನ್ನು ಭೇಟಿಯಾದ ಸಾಧ್ವಿ, ಭೂಪಾಲದ ಕರ್ಫ್ಯೂ ವಾಲಿ ಮಾತಾ ಮಂದಿರಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ಮಹಾರಾಷ್ಟ್ರ ಉಗ್ರ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಹೇಮಂತ್‌ ಕರ್ಕರೆ ಬಗ್ಗೆ ಹಾಗೂ ಬಾಬರಿ ಮಸೀದಿ ಧ್ವಂಸಗೊಳಿಸಿದ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ನಿಷೇಧ ಹೇರಿದೆ.

Trending News