ಇಂದಿನಿಂದ ಡಿ. 26 ರವರೆಗೂ ಬ್ಯಾಂಕ್ ರಜೆ, ಈ ದಿನ ಮಾತ್ರ ತೆರೆದಿರುತ್ತೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ಬ್ಯಾಂಕ್ ಆಫೀಸರ್ಸ್ ಯೂನಿಯನ್ ಇಂದು ಮುಷ್ಕರಕ್ಕೆ ಕರೆ ನೀಡಿದೆ.

Last Updated : Dec 21, 2018, 08:53 AM IST
ಇಂದಿನಿಂದ ಡಿ. 26 ರವರೆಗೂ ಬ್ಯಾಂಕ್ ರಜೆ, ಈ ದಿನ ಮಾತ್ರ ತೆರೆದಿರುತ್ತೆ title=

ಬೆಂಗಳೂರು: ರಾಷ್ಟ್ರವ್ಯಾಪಿ ಬ್ಯಾಂಕ್ ನೌಕರರ ಮುಷ್ಕರ ಹಾಗೂ ಹಬ್ಬದ ಹಿನ್ನೆಲೆಯಲ್ಲಿ ಡಿಸೆಂಬರ್ 21ರಿಂದ 26ರ ವರೆಗೆ ಒಟ್ಟು ಐದು ದಿನಗಳ ಕಾಲ ಬ್ಯಾಂಕುಗಳಿಗೆ ರಜೆ ಇರಲಿದೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ಬ್ಯಾಂಕ್ ಆಫೀಸರ್ಸ್ ಯೂನಿಯನ್ ಇಂದು(ಡಿ.21) ಮುಷ್ಕರಕ್ಕೆ ಕರೆ ನೀಡಿದೆ. 

ಆರು ದಿನಗಳಲ್ಲಿ ಒಂದೇ ಒಂದು ದಿನ ತೆರೆಯಲಿದೆ ಬ್ಯಾಂಕ್:
ಡಿಸೆಂಬರ್ 21 ರಿಂದ 26 ರ ನಡುವೆ ಒಂದೇ ಒಂದು ದಿನ ಬ್ಯಾಂಕ್ ಕಾರ್ಯ ನಿರ್ವಹಿಸಲಿದೆ. ಡಿ.21 ರಂದು ಬ್ಯಾಂಕ್ ಮುಷ್ಕರವಿದೆ. ಡಿ. 22 ತಿಂಗಳ ನಾಲ್ಕನೇ ಶನಿವಾರವಾದ ಕಾರಣ ಬ್ಯಾಂಕ್ ರಜೆ, ಡಿಸೆಂಬರ್ 23 ಭಾನುವಾರ. ಡಿಸೆಂಬರ್ 25 ಕ್ರಿಸ್ಮಸ್ ಮತ್ತು ಡಿಸೆಂಬರ್ 26 ರಂದು ಬ್ಯಾಂಕ್​ ಒಕ್ಕೂಟಗಳ ಮಹಾ ವೇದಿಕೆಯಿಂದ ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಆರು ದಿನಗಳಲ್ಲಿ ಒಂದೇ ಒಂದು ದಿನ ಅಂದರೆ ಡಿ. 24 ಸೋಮವಾರ ಮಾತ್ರ ಬ್ಯಾಂಕ್ ಕಾರ್ಯನಿರ್ವಹಿಸಲಿದೆ. ಈ ಸಂದರ್ಭದಲ್ಲಿ ಅಂದು ಬ್ಯಾಂಕಿನಲ್ಲಿ ಜನಸಂದಣಿ ಹೆಚ್ಚಿರುವ ನಿರೀಕ್ಷೆ ಇದೆ. ಡಿಸೆಂಬರ್ 27 ರಿಂದ, ಮತ್ತೆ ಬ್ಯಾಂಕುಗಳಲ್ಲಿ ಕೆಲಸ ಪ್ರಾರಂಭವಾಗುತ್ತದೆ.

ಡಿ. 21ರಂದು, ವೇತನ ತಾರತಮ್ಯ ಸೇರಿದಂತೆ, ವಿವಿಧ ಬೇಡಿಕೆಗಳನ್ನಿಟ್ಟು ಮುಷ್ಕರಕ್ಕೆ ಕರೆನೀಡಲಾಗಿದೆ. ಡಿ. 26ರಂದು ವಿಜಯಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಮತ್ತು ದೇನಾ ಬ್ಯಾಂಕ್ ವಿಲೀನ ವಿರೋಧಿಸಿ ಬಂದ್ ಗೆ ಕರೆನೀಡಲಾಗಿದೆ.

Trending News