Bank Strike For Two Days: ನಾಲ್ಕು ದಿನಗಳವರೆಗೆ ಬಂದ್ ಇರಲಿದೆ ಬ್ಯಾಂಕ್

Bank Strike For Two Days: ತಮ್ಮ ಬೇಡಿಕೆಗಳೊಂದಿಗೆ ಮುಂದಿನ ತಿಂಗಳು ಎರಡು ದಿನಗಳ ಕಾಲ ಮುಷ್ಕರ ನಡೆಸಲು ಬ್ಯಾಂಕ್ ಒಕ್ಕೂಟಗಳು ನಿರ್ಧರಿಸಿದೆ. ಈ ಮುಷ್ಕರದಿಂದಾಗಿ ಬ್ಯಾಂಕುಗಳು ನಾಲ್ಕು ದಿನಗಳವರೆಗೆ ಮುಚ್ಚಲ್ಪಡುತ್ತವೆ. ಬ್ಯಾಂಕುಗಳು ಯಾವಾಗ ಮುಚ್ಚಲ್ಪಡುತ್ತವೆ ಎಂದು ತಿಳಿಯಿರಿ ...

Written by - Yashaswini V | Last Updated : Feb 10, 2021, 01:03 PM IST
  • ಮಾರ್ಚ್ ಮಧ್ಯದಲ್ಲಿ ಸತತ ನಾಲ್ಕು ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ
  • ಕಳೆದ ನಾಲ್ಕು ವರ್ಷಗಳಲ್ಲಿ 14 ಸಾರ್ವಜನಿಕ ವಲಯದ ಬ್ಯಾಂಕುಗಳು ವಿಲೀನಗೊಂಡಿವೆ
  • ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಹೂಡಿಕೆ ಕಾರ್ಯಕ್ರಮದಡಿ ಖಾಸಗೀಕರಣಗೊಳಿಸುವುದಾಗಿ ಘೋಷಿಸಿದ್ದಾರೆ
Bank Strike For Two Days: ನಾಲ್ಕು ದಿನಗಳವರೆಗೆ ಬಂದ್ ಇರಲಿದೆ ಬ್ಯಾಂಕ್ title=
Bank Strike For Two Days

Bank Strike For Two Days: ಬ್ಯಾಂಕ್ ಉದ್ಯೋಗಿಗಳ  (Bank Employees)  ಒಂಬತ್ತು ಸಂಸ್ಥೆಗಳ ಉನ್ನತ ಸಂಸ್ಥೆಯಾದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಮುಂದಿನ ತಿಂಗಳಲ್ಲಿ ಎರಡು ದಿನಗಳ ಕಾಲ ಮುಷ್ಕರವನ್ನು ಘೋಷಿಸಿದೆ. ಈ ಮುಷ್ಕರ ನಡೆದರೆ, ಮಾರ್ಚ್ ಮಧ್ಯದಲ್ಲಿ ಸತತ ನಾಲ್ಕು ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಏಕೆಂದರೆ ಮಾರ್ಚ್ 13 ತಿಂಗಳ ಎರಡನೇ ಶನಿವಾರದ ರಜಾದಿನವಾಗಿದೆ ಮತ್ತು ಮಾರ್ಚ್ 14 ಭಾನುವಾರವಾಗಿದೆ. ಮಾರ್ಚ್ 15 ರಿಂದ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿದೆ. ಅಂದರೆ ಮಾರ್ಚ್ 15 ಸೋಮವಾರ ಮತ್ತು ಮಾರ್ಚ್ 16 ಮಂಗಳವಾರದಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಹಾಗಾಗಿ ಸಾಲು ಸಾಲು ನಾಲ್ಕು ದಿನಗಳವರೆಗೆ ಬ್ಯಾಂಕ್ ರಜೆ ಇರಲಿದೆ.

ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳ (ಪಿಎಸ್‌ಯು ಬ್ಯಾಂಕುಗಳ ಖಾಸಗೀಕರಣ) ಉದ್ದೇಶಿತ ಖಾಸಗೀಕರಣದ ವಿರುದ್ಧ ಪ್ರತಿಭಟಿಸಲು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್‌ಬಿಯು) ಈ ಮುಷ್ಕರಕ್ಕೆ ಕರೆ ನೀಡಿದೆ.

ಮಂಗಳವಾರ ನಡೆದ ಸಭೆಯಲ್ಲಿ ಬ್ಯಾಂಕ್ ಮುಷ್ಕರ ನಡೆಸಲು ನಿರ್ಧಾರ :
ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ  (AIBEA) ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಅವರು ಮಂಗಳವಾರ ಯುಎಫ್‌ಬಿಯು ಸಭೆಯಲ್ಲಿ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ನಿರ್ಧಾರವನ್ನು ವಿರೋಧಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. "ಕೇಂದ್ರ ಸರ್ಕಾರದ (Central Government) ಬಜೆಟ್ನಲ್ಲಿನ ಘೋಷಣೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಅವರು ಹೇಳಿದರು. ಇದರಲ್ಲಿ ಐಡಿಬಿಐ ಬ್ಯಾಂಕ್ ಮತ್ತು ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳ ಖಾಸಗೀಕರಣ, ಎಲ್‌ಐಸಿಯಲ್ಲಿ ಹೂಡಿಕೆ, ಸಾಮಾನ್ಯ ವಿಮಾ ಕಂಪನಿಯ ಖಾಸಗೀಕರಣ, ವಿಮಾ ಕ್ಷೇತ್ರದಲ್ಲಿ ಶೇ 74 ರಷ್ಟು ಎಫ್‌ಡಿಐ ಅನುಮೋದನೆ ಮತ್ತು ಪಿಎಸ್ಯುಗಳಲ್ಲಿ ಪಾಲು ಮಾರಾಟ ಸೇರಿವೆ.'

ಇದನ್ನೂ ಓದಿ - ಕೇವಲ 6 ತಿಂಗಳವರೆಗೆ ಎಫ್‌ಡಿ ಮಾಡಿದರೂ ಈ ಬ್ಯಾಂಕುಗಳಲ್ಲಿ ಸಿಗುತ್ತಿದೆ ಉತ್ತಮ ಲಾಭ

ವೆಂಕಟಾಚಲಂ ಪ್ರಕಾರ, ಸರ್ಕಾರದ ಈ ಕ್ರಮಗಳು ನೌಕರರ ಹಿತಾಸಕ್ತಿಗೆ ವಿರುದ್ಧವಾಗಿವೆ. ಈ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಸಿದ್ದು ಅದನ್ನು ವಿರೋಧಿಸುವ ಅವಶ್ಯಕತೆಯಿದೆ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದರು. 

ಎಐಬಿಒಸಿ ಪ್ರಧಾನ ಕಾರ್ಯದರ್ಶಿ ಸೌಮ್ಯಾ ದತ್ತಾ ಮಾತನಾಡಿ, ಸರ್ಕಾರದ ನಿರ್ಧಾರಕ್ಕೆ ವಿರುದ್ಧವಾಗಿ ಮಾರ್ಚ್ 15 ಮತ್ತು 16 ರಂದು ಎರಡು ದಿನಗಳ ಮುಷ್ಕರಕ್ಕೆ (Bank Strike) ಕರೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ - ಬದಲಾಗಲಿದೆಯೇ Credit Score ತಿಳಿಯುವ ವಿಧಾನ, Salary ಬದಲು ಈ ವಿಷಯ ಕೇಂದ್ರೀಕರಿಸಬಹುದು

ಎರಡು ಬ್ಯಾಂಕುಗಳ ಖಾಸಗೀಕರಣವನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ :
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಕಳೆದ ವಾರ ಸಾಮಾನ್ಯ ಬಜೆಟ್ ಮಂಡಿಸಿದರು ಮತ್ತು ತಮ್ಮ ಬಜೆಟ್ ಭಾಷಣದಲ್ಲಿ ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಹೂಡಿಕೆ ಕಾರ್ಯಕ್ರಮದಡಿ ಖಾಸಗೀಕರಣಗೊಳಿಸುವುದಾಗಿ ಘೋಷಿಸಿದ್ದಾರೆ. ಇದಕ್ಕೂ ಮೊದಲು 2019 ರಲ್ಲಿ ಐಡಿಬಿಐ ಬ್ಯಾಂಕಿನಲ್ಲಿರುವ ತನ್ನ ಬಹುಪಾಲು ಪಾಲನ್ನು ಎಲ್‌ಐಸಿ (LIC) ಗೆ ಮಾರಾಟ ಮಾಡುವ ಮೂಲಕ ಸರ್ಕಾರ ಅದನ್ನು ಖಾಸಗೀಕರಣಗೊಳಿಸಿದೆ. ಅಲ್ಲದೆ ಕಳೆದ ನಾಲ್ಕು ವರ್ಷಗಳಲ್ಲಿ 14 ಸಾರ್ವಜನಿಕ ವಲಯದ ಬ್ಯಾಂಕುಗಳು ವಿಲೀನಗೊಂಡಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News