ಬಾಬ್ರಿ ಮಸೀದಿ-ರಾಮಜನ್ಮಭೂಮಿ ವಿವಾದ : ಫೆಬ್ರವರಿ 8, 2018 ಕ್ಕೆ ವಿಚಾರಣೆ ಮುಂದೂಡಿದ ಸುಪ್ರಿಂಕೋರ್ಟ್

ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದ ಅಂತಿಮ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಫೆಬ್ರವರಿ 8, 2018 ಕ್ಕೆ ಮುಂದೂಡಿದೆ.

Last Updated : Dec 5, 2017, 04:47 PM IST
ಬಾಬ್ರಿ ಮಸೀದಿ-ರಾಮಜನ್ಮಭೂಮಿ ವಿವಾದ : ಫೆಬ್ರವರಿ 8, 2018 ಕ್ಕೆ ವಿಚಾರಣೆ ಮುಂದೂಡಿದ   ಸುಪ್ರಿಂಕೋರ್ಟ್ title=

ನವ ದೆಹಲಿ : ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದ ಅಂತಿಮ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಫೆಬ್ರವರಿ 8, 2018 ಕ್ಕೆ ಮುಂದೂಡಿದೆ.

ರಾಜಕೀಯ ಅಂಶಗಳನ್ನು ಮತ್ತು ಪ್ರಭಾವವನ್ನು ಪರಿಗಣನೆಗೆ ತೆಗೆದುಕೊಳ್ಳುವ ಮೂಲಕ ಜುಲೈ 2019ರಲ್ಲಿ ವಿಚಾರಣೆ ನಡೆಸಬೇಕೆಂದು ಹಿರಿಯ ಕೌನ್ಸಿಲ್ ಕಪಿಲ್ ಸಿಬಲ್ ನ್ಯಾಯಾಲಯವನ್ನು ಕೇಳಿಕೊಂಡ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಲಾಗಿದೆ. 

ಮತ್ತೊಂದೆಡೆ, ಅಯೋಧ್ಯಾ ವಿಚಾರಣೆ ಕುರಿತಾಗಿ ಹೇಳಿಕೆ ನೀಡಿರುವ ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ವಾಸಿಮ್ ರಿಜ್ವಿ, "ನಾವು ದಾಖಲೆಗಳಲ್ಲಿ ಪ್ರಸ್ತಾಪಿಸಿದ ಸೂತ್ರವನ್ನು ಸುಪ್ರೀಂ ಕೋರ್ಟ್ ಪರಿಗಣಿಸಿರುವುದು ಒಳ್ಳೆಯ ಸುದ್ದಿ" ಎಂದಿದ್ದಾರೆ. 

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ. ಅಶೋಕ್‌ ಭೂಷಣ್‌, ನ್ಯಾ. ಅಬ್ದುಲ್‌ ನಜೀರ್‌ ಅವರನ್ನು ಒಳಗೊಂಡ ವಿಶೇಷ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತ್ತು. 

ಅಯೋಧ್ಯೆಯಲ್ಲಿರುವ 2.77 ಎಕರೆ ವಿವಾದಿತ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೊಹಿ ಅಕರ ಮತ್ತು ರಾಮ್ ಲಲ್ಲಾ ನಡುವೆ ಭಾಗ ಮಾಡುವಂತೆ ಅಲಹಾಬಾದ್ ಹೈಕೋರ್ಟ್ 2010ರಲ್ಲಿ ತೀರ್ಪು ನೀಡಿತ್ತು.

ಈ ಮಧ್ಯೆ, ಉತ್ತರ ಪ್ರದೇಶದ ಶಿಯಾ ಕೇಂದ್ರ ವಕ್ಫ್ ಮಂಡಳಿಯ ಅಡಿಯಲ್ಲಿ ಮುಸಲ್ಮಾನರ ಗುಂಪೊಂದು, ವಿವಾದಿತ ಅಯೋಧ್ಯೆಯ ಭೂಮಿಯಿಂದ ಸ್ವಲ್ಪ ದೂರದಲ್ಲಿ ಮುಸಲ್ಮಾನರು ಹೆಚ್ಚಾಗಿರುವ ಪ್ರದೇಶದಲ್ಲಿ ಮಸೀದಿ ನಿರ್ಮಿಸಲು ಅವಕಾಶ ನೀಡಬೇಕೆಂದು ಅಲಹಾಬಾದ್ ಕೋರ್ಟ್ ಮೊರೆ ಹೋಗಿತ್ತು.

ಆದರೆ ಇದರ ಮಧ್ಯಪ್ರವೇಶವನ್ನು ಅಖಿಲ ಭಾರತ ಸುನ್ನಿ ವಕ್ಫ್ ಮಂಡಳಿ ವಿರೋಧಿಸಿತ್ತು. 1946ರಲ್ಲಿ ಶಿಯಾ ಮತ್ತು ಸುನ್ನಿಯ ಎರಡು ಗುಂಪುಗಳ ನಡುವೆ ನ್ಯಾಯಾಂಗ ತೀರ್ಮಾನವನ್ನು ಮಾಡಲಾಗಿದ್ದು ಅದರಂತೆ ಅದು ಮಸೀದಿ ನಿರ್ಮಾಣಕ್ಕೆ ಇರುವ ಜಾಗವೆಂದು ಹೇಳಲಾಯಿತು. ಸುನ್ನಿಗೆ ಸೇರಿದ ಸ್ಥಳದಲ್ಲಿದ್ದ ಮಸೀದಿಯನ್ನು 1992, ಡಿಸೆಂಬರ್ 6ರಂದು ಕೆಡವಿ ಹಾಕಲಾಯಿತು ಎಂದು ಸುನ್ನಿ ವಕ್ಫ್ ಮಂಡಳಿ ಹೇಳುತ್ತಿದೆ.

ಇತ್ತೀಚೆಗಷ್ಟೇ ಈ ಬಗ್ಗೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ ಕೆಲ ನಾಗರಿಕ ಹಕ್ಕುಗಳ ಹೋರಾಟಗಾರರು, ಅಯೋಧ್ಯೆ ವಿವಾದವನ್ನು ಕೇವಲ ಆಸ್ತಿ ವಿವಾದ ಎಂದು ಪರಿಗಣಿಸದೆ, ದೇಶದ ಜಾತ್ಯತೀತ ರಚನೆಯ ಮೇಲೆ ಸುದೀರ್ಘ ಪ್ರಭಾವ ಬೀರುವ ಗಂಭೀರ ವಿಚಾರವಾಗಿ ಪರಿಗಣಿಸಿ, ನ್ಯಾಯಾಲಯ ಮಧ್ಯ ಪ್ರವೇಶ ಮಾಡಬೇಕೆಂದು ಮನವಿ ಮಾಡಿದ್ದಾರೆ.

ಈ ಮುನ್ನ ಸುಪ್ರೀಂ ಕೋರ್ಟ್‌ ನೀಡಿದ್ದ ನಿರ್ದೇಶನದಂತೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರಕಾರ ಸಂಬಂಧಪಟ್ಟ ದಾಖಲೆಗಳ ಇಂಗ್ಲಿಷ್‌ ಅನುವಾದ ಪ್ರತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದೆ.

Trending News