ಅಯೋಧ್ಯಾ ಪ್ರಕರಣ: ಎಲ್ಲ ಮರುಪರಿಶೀಲನಾ ಅರ್ಜಿಗಳನ್ನು ತಿರಸ್ಕರಿಸಿದ ಸುಪ್ರೀಂ

ದೀರ್ಘ ಸಮಾಲೋಚನೆ ನಡೆಸಿರುವ ಐವರು ನ್ಯಾಯಮೂರ್ತಿಗಳು, ಅರ್ಜಿಗಳು ಓಪನ್ ಕೋರ್ಟ್ ನಲ್ಲಿ ವಿಚಾರಣೆಗೆ ಅರ್ಹವಾಗಿಲ್ಲ ಎಂದಿದ್ದಾರೆ.

Last Updated : Dec 12, 2019, 06:16 PM IST
ಅಯೋಧ್ಯಾ ಪ್ರಕರಣ: ಎಲ್ಲ ಮರುಪರಿಶೀಲನಾ ಅರ್ಜಿಗಳನ್ನು ತಿರಸ್ಕರಿಸಿದ ಸುಪ್ರೀಂ title=

ನವದೆಹಲಿ: ಅಯೋಧ್ಯಾ ಪ್ರಕರಣದಲ್ಲಿ ತೀರ್ಪನ್ನು ಪ್ರಶ್ನಿಸಿ ದಾಖಲಿಸಲಾಗಿದ್ದ ಎಲ್ಲ ಮರುಪರಿಶೀಲನಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಎಸ್. ಎ ಬೋಬ್ದೆ, ನ್ಯಾ.ಅಶೋಕ್ ಭೂಷಣ್, ನ್ಯಾ.ಡಿ.ವೈ. ಚಂದ್ರಚೂಡ್, ನ್ಯಾ. ಎಸ್. ಅಬ್ದುಲ್ ನಜೀರ್ ಹಾಗೂ ನ್ಯಾ.ಸಂಜೀವ್ ಖನ್ನಾ ಈ ಕುರಿತು ತೀರ್ಪು ಪ್ರಕಟಿಸಿದ್ದಾರೆ. ಈ ಎಲ್ಲ ಅರ್ಜಿಗಳು ನ್ಯಾಯಾಲಯದಲ್ಲಿ ಬಹಿರಂಗ ವಿಚಾರಣೆಗೆ ಯೋಗ್ಯವಾಗಿಲ್ಲ ಎಂದು ಐವರು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ನವೆಂಬರ್ 9ರಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ ತನ್ನ ಅಂತಿಮ ತೀರ್ಪು ಪ್ರಕಟಿಸಿದ್ದು, ತೀರ್ಪಿನಲ್ಲಿ ವಿವಾದಿತ ಭೂಮಿಯನ್ನು ರಾಮ ಮಂದಿರ ನಿರ್ಮಾಣಕ್ಕೆ ನೀಡಬೇಕು ಎಂದು ಹೇಳಿತ್ತು. ಜೊತೆಗೆ ಅಯೋಧ್ಯೆಯ ಬೇರೊಂದು ಸ್ಥಳದಲ್ಲಿ ಮಸೀದಿ ನಿರ್ಮಾಣಕ್ಕೆ ಮುಸ್ಲಿಂ ಪಕ್ಷಕಾರರಿಗೆ 5 ಎಕರೆ ಭೂಮಿ ನೀಡುವಂತೆ ನಿರ್ದೇಶನ ಜಾರಿಗೊಳಿಸಿತ್ತು. ಸುಪ್ರೀಂ ಕೋರ್ಟ್ ನ ಚೇಂಬರ್ ನಲ್ಲಿ ಮಧ್ಯಾಹ್ನ 1.40ಕ್ಕೆ ವಿಚಾರಣೆ ಆರಂಭಗೊಂಡಿತ್ತು. ನವೆಂಬರ್ 9ಕ್ಕೆ ಸರ್ವೋಚ್ಛ ನ್ಯಾಯಾಲಯ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಒಟ್ಟು 18 ಮರುಪರಿಶೀಲನಾ ಅರ್ಜಿಗಳು ದಾಖಲಾಗಿದ್ದವು. ಇವುಗಳಲ್ಲಿ ಬಹುತೇಕ ಅರ್ಜಿಗಳು ತೀರ್ಪಿನಿಂದ ಸಂತುಷ್ಟಗೊಳ್ಳದ ಮುಸ್ಲಿಂ ಪಕ್ಷದವರಿಂದ ಸಲ್ಲಿಕೆಯಾಗಿವೆ.

ನಿರ್ಮೋಹಿ ಅಖಾಡ ಕೂಡ ಸರ್ವೋಚ್ಛ ನ್ಯಾಯಾಲಯದಲ್ಲಿ ಮರುಪರಿಶೀಲನಾ ಅರ್ಜಿ ದಾಖಲಿಸಿತ್ತು
ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮೋಹಿ ಅಖಾಡಾ ಕೂಡ ಮರುಪರಿಶೀಲನಾ ಅರ್ಜಿ ದಾಖಲಿಸಿತ್ತು. ಅರ್ಜಿಯಲ್ಲಿ ನಿರ್ಮೋಹಿ ಅಖಾಡ ಶೈಬಿಯತ್ ರೈಟ್ಸ್, ಕಬ್ಜಾ ಹಾಗೂ ಲಿಮಿಟೇಶನ್ ಬಗ್ಗೆ ತೀರ್ಪಿನ ನಿಷ್ಕರ್ಷಗಳು ಸರಿಯಾಗಿಲ್ಲ ಎನ್ನಲಾಗಿದ್ದು, ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಮನವಿ ಮಾಡಲಾಗಿತ್ತು. ಹಿಂದಿನ ಮುಖ್ಯ ನಾಯಾಧೀಶರಾಗಿದ್ದ ರಂಜನ್ ಗೊಗೊಯಿ ಅವರ ಅಧ್ಯಕ್ಷತೆಯಲ್ಲಿನ 5 ನ್ಯಾಯಾಧೀಶರ ಪೀಠ ಸರ್ವಾನುಮತದಿಂದ ಎಲ್ಲ 2.77 ಎಕರೆ ವಿವಾದಿತ ಭೂಮಿಯನ್ನು ರಾಮಲಲ್ಲಾಗೆ ನೀಡಿದೆ ಎಂಬುದನ್ನು ಖಚಿತಪಡಿಸಬೇಕು ಎಂದು ಕೋರಲಾಗಿತ್ತು. ಸರ್ವೋಚ್ಛ ನ್ಯಾಯಾಲಯ ಈ ಕುರಿತು ಕೇಂದ್ರ ಸರ್ಕಾರಕ್ಕೆ ನಿರ್ದೇಶನಗಳನ್ನು ಜಾರಿಗೊಳಿಸಿ ಉತ್ತರ ಪ್ರದೇಶದ ಸೆಂಟ್ರಲ್ ಸುನ್ನಿ ವಕ್ಫ್ ಬೋರ್ಡ್ ಗೆ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕಾಗಿ 5 ಎಕರೆ ಭೂಪ್ರದೇಶ ನೀಡುವಂತೆ ಹೇಳಿದೆ.

'1857ರ ಬಳಿಕ ಮೂರ್ತಿಗಳು ಹೊರಾಂಗಣದ್ದವು.  22-23 ಡಿಸೆಂಬರ್ 1949ರಲ್ಲಿ ಇವುಗಳನ್ನು ಬಲವಂತವಾಗಿ ಜಾಗವನ್ನು ಅತಿಕ್ರಮಿಸಿ ಅಲ್ಲಿಗೆ ತಂದು ಇಡಲಾಗಿದ್ದು, ಈ ಮೂರ್ತಿಗಳು ಒಳಾಂಗಣದಲ್ಲಿ ಎಂದಿಗೂ ಇರಲಿಲ್ಲ' ಎಂದು ಮರುಪರಿಶೀಲನಾ ಅರ್ಜಿಯಲ್ಲಿ ಹೇಳಲಾಗಿತ್ತು. ಅಷ್ಟೇ ಅಲ್ಲ 'ಮುಸ್ಲಿಂ ಪಕ್ಷದ ವಿರುದ್ಧವಾಗಿ ಆದೇಶ ನೀಡಲಾಗಿದೆ' ಎಂದು ವಾದಿಸಲಾಗಿದೆ.

'ಸ್ವಾಮಿತ್ವದ ಉದ್ದೇಶದಿಂದ ಬ್ರಿಟಿಷರಿಂದ ತಯಾರಿಸಲ್ಪಟ್ಟ ರೆಲಿಂಗ್ ವಿಸಂಗತಿಗಳಿಂದ ಕೂಡಿದೆ ಮತ್ತು ಹಿಂದೂಗಳು ಇದರ ಕಬಳಿಕೆಗೆ ಅಥವಾ ಸ್ವಾಮಿತ್ವ ಬೇಡಿಕೆ ಇಡುತ್ತಾರೆ ಎಂಬುದು ತಿಳಿದುಕೊಳ್ಳುವುದು ತಪ್ಪು' ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲ ಈ ಅರ್ಜಿಯಲ್ಲಿ ಭಾರತೀಯ ಪುರಾತತ್ವ ಸಂಸ್ಥೆಯ ವರದಿಯ ಮರ್ಯಾದೆಯನ್ನು ಸಹ ಬಹಿರಂಗಗೊಳಿಸಲಾಗಿದೆ. ಅರ್ಜಿ ಪ್ರಕಾರ 'ಪ್ರಸ್ತುತ ಜಾಗದಲ್ಲಿ ಒಂದು ದೇವಸ್ಥಾನವನ್ನು ಕೆಡವಿ, ಆ ಜಾಗದಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಿಲ್ಲ' ಎಂಬ ನಿಷ್ಕರ್ಷಕ್ಕೆ ASI ಕೂಡ ತಲುಪಿದ್ದು, ಕೇವಲ ಸಂಭವನೀಯತೆಯ ಆಧಾರದ ಮೇಲೆ 1528-1886ರ ಮಧ್ಯೆ ಮುಸ್ಲಿಮರು ಅಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದರು ಎಂಬ ನಿಷ್ಕರ್ಷಕ್ಕೆ ಬರುವುದು ಉಚಿತವಲ್ಲ. ಏಕೆಂದರೆ ಆ ಕಾಲದಲ್ಲಿ ಈ ಸ್ಥಳ ಮುಘಲ್ ಹಾಗೂ ಬಳಿಕ ನವಾಬರ ಶಾಸನದ ಆಧೀನಕ್ಕೆ ಇತ್ತು.

ಇದಕ್ಕೆ ಸಂಬಂಧಿಸಿದಂತೆ ಮೊದಲ ಮರುಪರಿಶೀಲನಾ ಅರ್ಜಿಯನ್ನು ಡಿಸೆಂಬರ್ 2ಕ್ಕೆ ಮೌಲಾನಾ ಸೈಯದ್ ಅಷಾದ್ ರಶೀದ್ ದಾಖಲಿಸಿದ್ದರು. ರಶೀದ್ ಮೂಲಭೂತವಾದಿ ಎಂ ಸಿದ್ದಿಕ್  ಹಾಗೂ ಉತ್ತರ ಪ್ರದೇಶದ ಜಮಿಯತ್ ಉಲಮಾ-ಎ-ಹಿಂದ್ ಅಧ್ಯಕ್ಷರಾಗಿದ್ದಾರೆ.

Trending News