ನವದೆಹಲಿ : ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ 2022 ರ ಐದನೇ ಹಂತದಲ್ಲಿ ಇಂದು 12 ಜಿಲ್ಲೆಗಳ 61 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇವುಗಳಲ್ಲಿ ಪ್ರಮುಖ ಕ್ಷೇತ್ರಗಳೆಂದರೆ ಅಯೋಧ್ಯೆ, ಅಮೇಥಿ, ತಿಲೋಯ್, ಸಲೂನ್ (SC), ಜಗದೀಶ್‌ಪುರ (SC) ಮತ್ತು ಚಿತ್ರಕೂಟ ಸೇರಿವೆ.
ವರದಿಗಳ ಪ್ರಕಾರ, ಐದನೇ ಹಂತ(UP 5th poll voting)ದಲ್ಲಿ 692 ಅಭ್ಯರ್ಥಿಗಳಿಗೆ 2.24 ಕೋಟಿ ಜನರು ಮತ ಹಾಕಲಿದ್ದಾರೆ.
ಇದನ್ನೂ ಓದಿ : ಉಕ್ರೇನ್‌ನಿಂದ ಭಾರತಕ್ಕೆ ಆಗಮಿಸಿದ 2ನೇ ವಿಮಾನ: ಯುದ್ಧಭೂಮಿಯಿಂದ ತಾಯ್ನಾಡಿಗೆ ಮರಳಿದ 250 ಜನ
ವಿಶೇಷವೆಂದರೆ, ಮತದಾನ(Voting) ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ.
ಐದನೇ ಹಂತದಲ್ಲಿ ಮತದಾನ ನಡೆಯಲಿರುವ ಕೆಲವು ಜಿಲ್ಲೆಗಳೆಂದರೆ - ಸುಲ್ತಾನ್‌ಪುರ, ಚಿತ್ರಕೂಟ, ಪ್ರತಾಪ್‌ಗಢ, ಕೌಶಂಬಿ, ಪ್ರಯಾಗ್‌ರಾಜ್, ಬರಾಬಕಿ, ಬಹ್ರೈಚ್, ಶ್ರಾವಸ್ತಿ, ಗೊಂಡಾ, ಅಯೋಧ್ಯೆ(Ayodhya), ಅಮೇಥಿ ಮತ್ತು ರಾಯ್‌ಬರೇಲಿ.
ಐದನೇ ಹಂತದ ಕೆಲವು ಪ್ರಮುಖ ಅಭ್ಯರ್ಥಿಗಳೆಂದರೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ(Keshav Prasad Maurya) ಅವರು ಸಿರತು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ, ಜನಸತ್ತಾ ದಳದ ನಾಯಕ ರಘುರಾಜ್ ಪ್ರತಾಪ್ ಸಿಂಗ್ ಮತ್ತು ಕೇಂದ್ರ ಸಚಿವ ಅನುಪ್ರಿಯಾ ಪಟೇಲ್ ಅವರ ತಾಯಿ ಮತ್ತು ಅಪ್ನಾ ದಳ (ಕೆ) ನಾಯಕ ಕೃಷ್ಣ ಪಟೇಲ್.
ಇದನ್ನೂ ಓದಿ : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 11,499 ಹೊಸ ಕೋವಿಡ್ -19 ಪ್ರಕರಣಗಳು ದಾಖಲು
ಒಟ್ಟು 231 ಸ್ಥಾನಗಳಿಗೆ ಮೊದಲ ನಾಲ್ಕು ಹಂತದ ಮತದಾನ ಈಗಾಗಲೇ ಮುಕ್ತಾಯವಾಗಿದೆ. ಕೊನೆಯ ಎರಡು ಹಂತಗಳು ಮಾರ್ಚ್ 3 ಮತ್ತು 7 ರಂದು ನಡೆಯಲಿದ್ದು, 2022 ರ ವಿಧಾನಸಭಾ ಚುನಾವಣೆ(UP Assembly Election 2022)ಯ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.