ನೀರಿನಲ್ಲಿ ಮುಳುಗುತ್ತಿದ್ದ ತಾಯಿ-ಮಗುವನ್ನು ರಕ್ಷಿಸಿದ 11 ವರ್ಷದ ದಿಟ್ಟ ಬಾಲಕ!

ದಡದಲ್ಲಿ ಕುಳಿತಿದ್ದ 11 ವರ್ಷದ ಬಾಲಕ ಉತ್ತಮ್ ತತಿ ಕೊಂಚವೂ ತಡ ಮಾಡದೆ ಕೂಡಲೇ ನೀರಿಗೆ ಜಿಗಿದು ತಾಯಿ ಮತ್ತು ಒಂದು ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾನೆ.

Last Updated : Jul 9, 2019, 06:06 PM IST
ನೀರಿನಲ್ಲಿ ಮುಳುಗುತ್ತಿದ್ದ ತಾಯಿ-ಮಗುವನ್ನು ರಕ್ಷಿಸಿದ 11 ವರ್ಷದ ದಿಟ್ಟ ಬಾಲಕ! title=

ಸೋನಿತ್‌ಪುರ: ನೀರಿನಲ್ಲಿ ಮುಳುಗುತ್ತಿದ್ದ ತಾಯಿ ಮತ್ತು ಮಗುವನ್ನು 11 ವರ್ಷದ ಬಾಲಕನೊಬ್ಬ ರಕ್ಷಿಸಿದ ಘಟನೆ ಅಸ್ಸಾಂನ ಸೋನಿತ್‌ಪುರ ಜಿಲ್ಲೆಯಲ್ಲಿ ನಡೆದಿದೆ. 

ಮಹಿಳೆಯೊಬ್ಬಳು ತನ್ನ ಮಗುವಿನೊಂದಿಗೆ ನದಿ ದಾಟುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಆರಂಭದಲ್ಲಿ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಿತ್ತಾದರೂ, ಇದ್ದಕ್ಕಿದ್ದಂತೆ ನೀರಿನ ಪ್ರಮಾಣ ಹೆಚ್ಚಾದ್ದರಿಂದ ನದಿ ದಾಟಲಾಗದೆ ಮುಲುಗುತ್ತಿದ್ದರು ಎನ್ನಲಾಗಿದೆ.

ದಡದಲ್ಲಿ ಕುಳಿತಿದ್ದ 11 ವರ್ಷದ ಬಾಲಕ ಉತ್ತಮ್ ತತಿ ಕೊಂಚವೂ ತಡ ಮಾಡದೆ ಕೂಡಲೇ ನೀರಿಗೆ ಜಿಗಿದು ತಾಯಿ ಮತ್ತು ಒಂದು ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾನೆ. ಆದರೆ ಮತ್ತೊಂದು ಮಗು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ ಎಂದು ಎಎನ್ಐ ವರದಿ ಮಾಡಿದೆ.

"ಮಿಸಾಮರಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಡುವ ಧಾಂಖೋನಾ ಗ್ರಾಮದವನಾದ ತತಿ, ಅತ್ಯಂತ ಧೈರ್ಯವನ್ನು ಮೆರೆದಿದ್ದಾನೆ. ಈತನ ಶೌರ್ಯ ಕಾರ್ಯವನ್ನು ಮೆಚ್ಚಿ  ರಾಷ್ಟ್ರಮಟ್ಟದಲ್ಲಿ ಗುರುತಿಸಲು ರಾಜ್ಯ ಸರ್ಕಾರವು ಆತನ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡಲು ಪ್ರಯತ್ನಿಸುತ್ತದೆ "ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಲಖಿ ಜ್ಯೋತಿ ದಾಸ್ ಹೇಳಿದ್ದಾರೆ.

Trending News