Coronavirus ಚಿಕಿತ್ಸೆಗೆ ಅಶ್ವಗಂಧ ರಾಮಬಾಣ ಸಾಬೀತಾಗುವ ಸಾಧ್ಯತೆ: ಸಂಶೋಧನೆ

ಅಶ್ವಗಂಧದಲ್ಲಿ ಕಂಡುಬರುವ ವಿಥಾನೋನ್ ಕಾಂಪೌಂಡ್ ಹಾಗೂ ಪ್ರಪೋಲಿಸ್ ನಲ್ಲಿರುವ ಕೈಫಿಕ್ ಆಸಿಡ್ ಫಿನೋಥೈಲ್ ಈಸ್ಟರ್, SARS-CoV2ನಲ್ಲಿರುವ Mpro ಎನ್ಜೈಮ್ ನ ಕಾರ್ಯಚಟುವಟಿಕೆಗಳನ್ನು ತಡೆಯುವ ಕ್ಷಮತೆ ಹೊಂದಿದೆ ಸಂಶೋಧನೆಯಿಂದ ತಿಳಿದುಬಂದಿದೆ.

Last Updated : May 21, 2020, 05:27 PM IST
Coronavirus ಚಿಕಿತ್ಸೆಗೆ ಅಶ್ವಗಂಧ ರಾಮಬಾಣ ಸಾಬೀತಾಗುವ ಸಾಧ್ಯತೆ: ಸಂಶೋಧನೆ title=

ನವದೆಹಲಿ: ಆಯುರ್ವೇದದಲ್ಲಿ ಪ್ರತಿ ಸಣ್ಣ ಕಾಯಿಲೆಗೂ ಪರಿಹಾರವಿದೆ. ಕ್ಯಾನ್ಸರ್ ನಿಂದ ಶಸ್ತ್ರಚಿಕಿತ್ಸೆಯವರೆಗೆ ಆಯುರ್ವೇದ ತನ್ನ ಪ್ರಭಾವ ತೋರಿಸುತ್ತದೆ. ಕರೋನಾದಂತಹ ಸಾಂಕ್ರಾಮಿಕ ರೋಗದಲ್ಲಿ ಇಲ್ಲಿಯವರೆಗೆ ಯಾವುದೇ ನಿಖರವಾದ ಚಿಕಿತ್ಸೆ ಕಂಡುಬಂದಿಲ್ಲ, ಆಯುರ್ವೇದವನ್ನು ಆಶ್ರಯಿಸಲಾಗುತ್ತಿದೆ. ಭಾರತದ ಈ ಪ್ರಾಚೀನ ವೈದ್ಯಕೀಯ ವ್ಯವಸ್ಥೆಯ ಸಹಾಯದಿಂದ ಕರೋನಾ ಚಿಕಿತ್ಸೆಯು ಸಾಧ್ಯ. ಹೀಗಂತ ನಾವು ನಿಮಗೆ ಹೇಳುತ್ತಿಲ್ಲ. ಆದರೆ ಇದು ಐಐಟಿ ದೆಹಲಿ ಮತ್ತು ಜಪಾನ್‌ನ ವಿಜ್ಞಾನಿಗಳ ಈ ಹಕ್ಕನ್ನು ಮಂಡಿಸಿದ್ದಾರೆ.

ಐಐಟಿ ದೆಹಲಿ ಮತ್ತು ಜಪಾನ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಇಂಡಸ್ಟ್ರಿಯಲ್ ಸೈನ್ಸ್ ಅಂಡ್ ಟೆಕ್ನಾಲಜಿ (ಎಐಎಸ್ಟಿ) ನಡೆಸಲಾಗಿರುವ ಸಂಶೋಧನೆಯಲ್ಲಿ ಅಶ್ವಗಂಧ ಮತ್ತು ಪ್ರೋಪೋಲಿಸ್ ಕರೋನಾಗೆ ಚಿಕಿತ್ಸೆ ನೀಡಲು ಸಹಾಯ ಮಾಡುವ ಅಂಶಗಳನ್ನು ಒಳಗೊಂಡಿವೆ ಎಂದು ಹೇಳಲಾಗಿದೆ.

ಅಶ್ವಗಂಧದಲ್ಲಿ ಕಂಡುಬರುವ ವಿಥಾನೋನ್ ಕಾಂಪೌಂಡ್ ಹಾಗೂ ಪ್ರಪೋಲಿಸ್ ನಲ್ಲಿರುವ ಕೈಫಿಕ್ ಆಸಿಡ್ ಫಿನೋಥೈಲ್ ಈಸ್ಟರ್, SARS-CoV2ನಲ್ಲಿರುವ Mpro ಎನ್ಜೈಮ್ ನ ಕಾರ್ಯಚಟುವಟಿಕೆಗಳನ್ನು ತಡೆಯುವ ಸಾಮರ್ಥ್ಯ ಹೊಂದಿದೆ ಸಂಶೋಧನೆಯಿಂದ ತಿಳಿದುಬಂದಿದೆ. ಸಂಶೋಧನಾ ತಂಡದ ಪ್ರಕಾರ, ಅಶ್ವಗಂಧ ಮತ್ತು ಪ್ರೋಪೋಲಿಸ್ ಬಳಕೆಯು ಚಿಕಿತ್ಸೆಗೆ ಮಾತ್ರವಲ್ಲದೆ ಸೋಂಕನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ ಎನ್ನಲಾಗಿದೆ

ಐಐಟಿ ದೆಹಲಿಯ ಜೀವರಾಸಾಯನಿಕ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಸುಂದರ್, ಆಯುರ್ವೇದವನ್ನು ಭಾರತದಲ್ಲಿ ಸಾವಿರಾರು ವರ್ಷಗಳಿಂದ ಅಧ್ಯಯನ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಐಐಟಿ ದೆಹಲಿ ಮತ್ತು ಎಐಎಸ್ಟಿ ವಿಜ್ಞಾನಿಗಳು ಕಳೆದ ಒಂದು ದಶಕದಿಂದ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಆಯುರ್ವೇದದ ಸಾಂಪ್ರದಾಯಿಕ ಜ್ಞಾನ ಹಾಗೂ ಪ್ರಾಚೀನ ಚಿಕಿತ್ಸಾ ಪದ್ಧತಿಯ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. 

ಭಾರತದಲ್ಲಿ ಅಶ್ವಗಂಧ ಸೇರಿದಂತೆ ಹಲವು ಆಯುರ್ವೇದ ಔಷಧಿಗಳ ಮೇಲೆ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಇತ್ತೀಚೆಗೆ ಭಾರತ ಸರ್ಕಾರವು ಆಯುಷ್ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ವಿಶ್ವವಿದ್ಯಾಲಯ ಧನಸಹಾಯ ಆಯೋಗ ಮತ್ತು ಐಸಿಎಂಆರ್ ಸಹಾಯದಿಂದ ಅಶ್ವಗಂಧದ ಮೇಲೆ ಪ್ರಾಯೋಗಿಕ ಪರೀಕ್ಷೆಗಳನ್ನು ಪ್ರಾರಂಭಿಸಿದೆ. ಆಯುರ್ವೇದದ ಸಹಾಯದಿಂದ ಕರೋನದ ಚಿಕಿತ್ಸೆಯ ಈ ಪ್ರಯೋಗವು ಮಾನವರ ಮೇಲೆ ಯಶಸ್ವಿಯಾದರೆ, ಈ ಸಾಂಕ್ರಾಮಿಕ ಸಮಯದಲ್ಲಿ ಭಾರತ ಮತ್ತು ವಿಶ್ವದ ಎಲ್ಲಾ ದೇಶಗಳಿಗೆ ಇದು ವರದಾನ ಎಂಬಂತೆ ಸಾಬೀತಾಗಲಿದೆ.

Trending News