'ಧರ್ಮದ ಆಧಾರದ ಮೇಲೆ ಮಾಡಿದ ಕಾನೂನು' : ಸಿಎಎ ಬಗ್ಗೆ ಓವೈಸಿ ಟೀಕೆ

Asaduddin Owaisi: ಪೌರತ್ವ ತಿದ್ದುಪಡಿ ಕಾಯ್ದೆ ಅಂದರೆ ಸಿಎಎಗೆ ಸಂಬಂಧಿಸಿದಂತೆ ದೇಶದಲ್ಲಿ ಮತ್ತೊಮ್ಮೆ ಚರ್ಚೆ ಶುರುವಾಗಿದೆ. ಸಿಎಎ ವಿಚಾರದಲ್ಲಿ ಅಸಾದುದ್ದೀನ್ ಓವೈಸಿ ಮತ್ತೊಮ್ಮೆ ಕೇಂದ್ರ ಸರ್ಕಾರದ ಮೇಲೆ ಕೆಂಡಕಾರಿದ್ದಾರೆ. 

Written by - Chetana Devarmani | Last Updated : Jan 3, 2024, 08:41 PM IST
  • ಪೌರತ್ವ ತಿದ್ದುಪಡಿ ಕಾಯ್ದೆ
  • ಧರ್ಮದ ಆಧಾರದ ಮೇಲೆ ಮಾಡಿದ ಕಾನೂನು
  • ಅಸಾದುದ್ದೀನ್ ಓವೈಸಿ ಕಿಡಿ
'ಧರ್ಮದ ಆಧಾರದ ಮೇಲೆ ಮಾಡಿದ ಕಾನೂನು' : ಸಿಎಎ ಬಗ್ಗೆ ಓವೈಸಿ ಟೀಕೆ  title=
ಅಸಾದುದ್ದೀನ್ ಓವೈಸಿ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಅಂದರೆ ಸಿಎಎಗೆ ಸಂಬಂಧಿಸಿದಂತೆ ದೇಶದಲ್ಲಿ ಮತ್ತೊಮ್ಮೆ ಚರ್ಚೆ ಶುರುವಾಗಿದೆ. ಸಿಎಎ ವಿಚಾರದಲ್ಲಿ ಅಸಾದುದ್ದೀನ್ ಓವೈಸಿ ಮತ್ತೊಮ್ಮೆ ಕೇಂದ್ರ ಸರ್ಕಾರದ ಮೇಲೆ ಕೆಂಡಕಾರಿದ್ದಾರೆ. ಸಿಎಎ ಸಂವಿಧಾನ ವಿರೋಧಿ, ಇದನ್ನು ಧರ್ಮದ ಆಧಾರದ ಮೇಲೆ ಮಾಡಲಾಗಿದೆ ಎಂದು ಓವೈಸಿ ಹೇಳಿದ್ದಾರೆ. 

ಇದನ್ನೂ ಓದಿ : ರಾಮಲಲ್ಲಾಗೆ ಜಲಾಭಿಷೇಕ ಮಾಡಲು ಇರಾನ್‌ನಿಂದ ನೀರು ಕಳಿಸಿದ ಮುಸ್ಲಿಂ ಮಹಿಳೆ 

ಪೌರತ್ವ ತಿದ್ದುಪಡಿ ಕಾಯ್ದೆಯ ನಿಯಮಗಳನ್ನು 2024 ರ ಲೋಕಸಭಾ ಚುನಾವಣೆಯ ಮೊದಲು ಅನುಷ್ಠಾನಗೊಳಿಸಲಾಗುವುದು ಎಂದು ಕೆಲವು ವರದಿಗಳಲ್ಲಿ ಹೇಳಲಾಗಿದೆ. ಇಡೀ ದೇಶದಲ್ಲಿ ಈ ವಿಷಯದ ಬಗ್ಗೆ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಇದರಿಂದ ಮುಸ್ಲಿಮರಿಗೆ ತುಂಬಾ ಅನ್ಯಾಯವಾಗಲಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. 2019 ರಲ್ಲಿ ಜಾರಿಗೆ ಬಂದ ಕಾನೂನು ಸಂವಿಧಾನ ವಿರೋಧಿಯಾಗಿದೆ ಏಕೆಂದರೆ ಅದನ್ನು ಧರ್ಮದ ಆಧಾರದ ಮೇಲೆ ಮಾಡಲಾಗಿದೆ ಎಂದಿದ್ದಾರೆ. 

ಎನ್‌ಪಿಆರ್-ಎನ್‌ಆರ್‌ಸಿ ಜೊತೆಗೆ ಸಿಎಎ ಓದಬೇಕು ಮತ್ತು ಅರ್ಥಮಾಡಿಕೊಳ್ಳಬೇಕು ಎಂದು ಓವೈಸಿ ಹೇಳಿದರು. ಇದು ನಿಮ್ಮ ಪೌರತ್ವವನ್ನು ಸಾಬೀತುಪಡಿಸಲು ಷರತ್ತುಗಳನ್ನು ಹಾಕುತ್ತದೆ. ಹೀಗಾದರೆ ಭಾರತದ ಮುಸ್ಲಿಮರು, ದಲಿತರು ಮತ್ತು ಬಡವರಿಗೆ ಘೋರ ಅನ್ಯಾಯವಾಗುತ್ತದೆ ಎಂದರು.

ಚುನಾವಣೆಗಳಲ್ಲಿ ಲಾಭ ಪಡೆಯಲು ಕೋಮು ಧ್ರುವೀಕರಣಕ್ಕೆ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳಬಹುದು. ಇದು ಚುನಾವಣಾ ಲಾಭಕ್ಕಾಗಿ ಎಂದಿದ್ದಾರೆ.

ಇದನ್ನೂ ಓದಿ : ಲೋಹ್ರಿ ಹಬ್ಬದಲ್ಲಿ ಬೆಂಕಿಯನ್ನು ಏಕೆ ಬೆಳಗಿಸಲಾಗುತ್ತದೆ..? 

;

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News