ಹೋಳಿ ಹಬ್ಬದ ದಿನ ಮನೆಯಿಂದ ಹೊರಗೆ ಹೋಗಲು ಎಲ್ಲರೂ ಅಂಜುತ್ತಾರೆ. ಏಕೆಂದರೆ ಆ ಬಣ್ಣಗಳಿಂದ ಬಟ್ಟೆ ಕೊಳಕಾಗುತ್ತದೆ ಎಂಬ ಭಯ. ಈಗ ಆ ಭಯವನ್ನು ಬಿಟ್ಟು ಬಿಡಿ. ಹೋಲಿ ಬಣ್ಣಗಳನ್ನು ನಿಮ್ಮ ಬಟ್ಟೆಗಳಿಂದ ತೆಗೆದುಹಾಕುವುದಕ್ಕೆ ಇಲ್ಲಿದೆ ಕೆಲವು ಪರಿಹಾರ...
1. ಬ್ಲೀಚ್: ಬಟ್ಟೆಗಳು ಬಿಳಿಯಾಗಿದ್ದರೆ, ಅವುಗಳನ್ನು ಕ್ಲೋರಿನ್ ಅಲ್ಲದ ಬ್ಲೀಚ್ನೊಂದಿಗೆ ಬಿಸಿ ನೀರಿನಲ್ಲಿ ನೆನೆಸಿ. ಇತರ ಬತ್ತೆಗಳಲ್ಲಿನ ಬಣ್ಣಗಳು ಬಿಳಿ ಬಟ್ಟೆಗೆ ಅಂಟಿಕೊಳ್ಳುವುದನ್ನು ತಡೆಯಲು, ಬಿಳಿ ಬಟ್ಟೆಯನ್ನು ಪ್ರತ್ಯೇಕವಾಗಿ ನೆನೆಸಿ ಒಡೆದು, ಒಣಗಿಸಿ.
2. ಬಿಳಿ ವಿನೆಗರ್: ಅರ್ಧ ಕಪ್ ಬಿಳಿ ವಿನೆಗರ್ ಮತ್ತು 1 ಟೇಬಲ್ ಚಮಚ ಉತ್ತಮ ಗುಣಮಟ್ಟದ ವಾಶಿಂಗ್ ಪೌಡರ್ ಅನ್ನು 2-3 ಲೀಟರ್ ತಣ್ಣನೆಯ ನೀರಿಗೆ ಸೇರಿಸಿ ಅದರಲ್ಲಿ ಬಟ್ಟೆಯನ್ನು ನೆನೆಸಿ. ಇಲ್ಲಿ ಆಸಿಡ್ ನಿಮ್ಮ ಬಟ್ಟೆಯಲ್ಲಾಗಿದ್ದ ಬಣ್ಣವನ್ನು ತೆಗೆದುಹಾಕುತ್ತದೆ.
3. ವಿಂಡೋ ಕ್ಲೀನರ್: ಇದೇನಪ್ಪ ವಿಂಡೋ ಕ್ಲೀನರ್ ಅನ್ನು ಬಟ್ಟೆ ಒಗೆಯಲು ಬಳಸಲಾಗುತ್ತದೆಯೇ ಎಂದು ಅಚ್ಚರಿ ಪಡಬೇಡಿ. ಆದರೆ ಇಲ್ಲಿ ನೀವು ನಿಜವಾದ ಅಮೋನಿಯಾ-ಆಧಾರಿತ ಸ್ಪ್ರೇ-ಆನ್ ವಿಂಡೋ ಕ್ಲೀನರ್ ಬಳಸುತ್ತಿದ್ದೀರೆಯೇ ಎಂದು ಖಚಿತಪಡಿಸಿಕೊಳ್ಳಿ. ಬಣ್ಣದ ಕಳೆಯ ಮೇಲೆ ವಿಂಡೋ ಕ್ಲೀನರ್ ಸ್ಪ್ರೇ ಮಾಡಿ, 15-20 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ಅದನ್ನು ನಿಮ್ಮ ಕೈಗಳಿಂದ ನಯವಾಗಿ ಉಜ್ಜಿ,. ನಂತರ ಎಂದಿನಂತೆ ಬಟ್ಟೆ ಒಗೆದು ಒಣಗಿಸಿ.
4. ನಿಂಬೆ ರಸ: ನಿಂಬೆಯ ಆಮ್ಲೀಯ ಅಂಶವು ಕಲೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಕಲೆಯಾದ ಬಟ್ಟೆಗೆ ನಿಂಬೆ ರಸ ಹಾಕಿ 15 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ನಿಮ್ಮ ಕೈಗಳಿಂದ ಲಘುವಾಗಿ ಉಜ್ಜಿ ಎಂದಿನಂತೆ ಒಗೆಯಿರಿ.
5. ಮಿಥೈಲೇಟೆಡ್ ಸ್ಪಿರಿಟ್ಸ್ (ಅಲ್ಕೋಹಾಲ್): ಕಲೆಯಾದ ಬಟ್ಟೆಯ ಮೇಲೆ ಆಲ್ಕೊಹಾಲ್ (ಅಂಡವಿಲ್ಲದ) ಹಾಕಿ ಉಜ್ಜಿ, ಹರಿಯುವ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ನಂತರ ಇತರ ಬಟ್ಟೆಗಳಂತೆ ಒಗೆದು ಒಣಗಿಸಿ.