ನೀವು ಮೇಲ್ಜಾತಿಯ ಬಡವರೇ? ಶೇ.10 ಮೀಸಲಾತಿ ಪಡೆಯಲು ನಿಮ್ಮಲ್ಲಿ ಈ ಅರ್ಹತೆಗಳಿವೆಯೇ?

ಸೋಮವಾರದಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ ಸರ್ಕಾರದ ಉದ್ಯೋಗಗಳಲ್ಲಿ ಮೇಲ್ವರ್ಗದ ಜಾತಿಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಶೇ 10ರಷ್ಟು ಮೀಸಲಾತಿಯನ್ನು ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ.

Last Updated : Jan 7, 2019, 06:27 PM IST
ನೀವು ಮೇಲ್ಜಾತಿಯ ಬಡವರೇ? ಶೇ.10 ಮೀಸಲಾತಿ ಪಡೆಯಲು ನಿಮ್ಮಲ್ಲಿ ಈ ಅರ್ಹತೆಗಳಿವೆಯೇ?  title=

ನವದೆಹಲಿ: ಸೋಮವಾರದಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ ಸರ್ಕಾರದ ಉದ್ಯೋಗಗಳಲ್ಲಿ ಮೇಲ್ವರ್ಗದ ಜಾತಿಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಶೇ 10ರಷ್ಟು ಮೀಸಲಾತಿಯನ್ನು ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ.

ಏಪ್ರಿಲ್-ಮೇ ತಿಂಗಳ ಅವಧಿಯಲ್ಲಿ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆ ಇರುವುದರಿಂದ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ನಿರ್ಧಾರದ ಮೂಲಕ ಹಲವಾರು ಮೇಲ್ವರ್ಗದ ಜಾತಿಗಳ ಬೆಂಬಲ ಗಳಿಸಲಿದೆ ಎನ್ನುವ ರಾಜಕೀಯ ಲೆಕ್ಕಾಚಾರವು ಇದೆ.

ಈಗ ಸಾಮಾನ್ಯ ವರ್ಗದಲ್ಲಿ ಬರುವ ಆರ್ಥಿಕವಾಗಿ ಹಿಂದುಳಿದ ಸದಸ್ಯರಿಗೆ ಈ ಮಿಸಲಾತಿ ಸೌಲಭ್ಯ ಅನ್ವಯವಾಗಲಿದೆ ಎನ್ನಲಾಗಿದೆ.ಹಾಗಾದರೆ ಈಗ ಶೇ 10 ರಷ್ಟು ಮೀಸಲಾತಿಯನ್ನು  ಪಡೆಯ ಬೇಕಾದರೆ ಸರ್ಕಾರ ಕ್ಯಾಬಿನೆಟ್ ಸಭೆಯಲ್ಲಿ ಕೆಲವು ನಿರ್ಧಿಷ್ಟ ನಿಯಮಗಳನ್ನು ನಿಗಧಿಪಡಿಸಿದೆ,ಈ ನಿಯಮಗಳ ಅಡಿಯಲ್ಲಿ ಬರುವ ಸದಸ್ಯರು ಮಾತ್ರ ಈ ಮೀಸಲಾತಿಯ ಲಾಭವನ್ನು ಪಡೆಯಲಿದ್ದಾರೆ ಎನ್ನಲಾಗುತ್ತಿದೆ.ಹಾಗಾದರೆ ಆ ನಿಗದಿಪಡಿಸಿರುವ ನಿಯಮಗಳು ಈ ಕೆಳಗಿನಂತಿವೆ.

* ಐದು ಎಕರೆ ಗಿಂತ ಕಡಿಮೆ ಕೃಷಿ  ಭೂಮಿ 
* ನೀವು ವಾಸಿಸುತ್ತಿರುವ ಆಸ್ತಿಯು 1000 ಸ್ಕ್ವೇರ್ ಅಡಿ ಒಳಗಿರಬೇಕು 
* ನಿಮ್ಮ ವಾಸಸ್ತಾನದ ಪ್ಲಾಟ್ 100 ಯಾರ್ಡ್ ಗಿಂತಲೂ ಕಡಿಮೆ ಇರಬೇಕು(ಮುನಿಸಿಪಾಲಿಟಿ ಗುರುತಿಸಿರುವ)
* ನಿಮ್ಮ ವಾಸಸ್ತಾನದ ಪ್ಲಾಟ್ 200 ಯಾರ್ಡ್ ಗಿಂತಲೂ ಕಡಿಮೆ ಇರಬೇಕು(ಮುನಿಸಿಪಾಲಿಟಿ ಗುರುತಿಸದ)

ಈ ನಿರ್ಧಾರ ಪ್ರಮುಖವಾಗಿ ಈ ಹಿಂದೆ ಸಾಮಾನ್ಯ ವರ್ಗದಲ್ಲಿ ಬರುವ ಮೇಲ್ಜಾತಿ ಸದಸ್ಯರು ಆರ್ಥಿಕವಾಗಿ ಹಿಂದುಳಿದಿದ್ದರೆ ಅಂತವರಿಗೆ ಅನ್ವಯವಾಗಲಿದೆ.ಸುಪ್ರೀಂ ಕೋರ್ಟ್ ನ  ನಿಯಮದ ಪ್ರಕಾರ ಮೀಸಲಾತಿಯ ಮೀತಿ ಶೇ 50ಕ್ಕೆ ನಿಗದಿಯಾಗಿದೆ.

 

Trending News