Anti-Coronavirus Vaccine Booster Dose: ಇಂದಿನಿಂದ ಪ್ರಿಕಾಶನ್ ಡೋಸ್ ಗಾಗಿ ಅಪಾಯಿಂಟ್ಮೆಂಟ್ ಪ್ರಕ್ರಿಯೆ ಆರಂಭ

Anti-Covid-19 Vaccine Precaution Dose - ಜನವರಿ 10 ರಿಂದ ಪ್ರಾರಂಭವಾಗುವ ಕರೋನಾ (Coronavirus) ಲಸಿಕೆ ಪ್ರಿಕಾಶನ್ ಡೋಸ್‌ಗಾಗಿ (Covid-19 Precaution Dose) ಇಂದಿನಿಂದ ಅಂದರೆ ಶನಿವಾರದಂದು ಅಪಾಯಿಂಟ್‌ಮೆಂಟ್‌ಗಳ ಬುಕಿಂಗ್ ಪ್ರಾರಂಭವಾಗುತ್ತಿದೆ. ಮುನ್ನೆಚ್ಚರಿಕೆ ಡೋಸ್ ತೆಗೆದುಕೊಳ್ಳುವವರು ಕೋವಿನ್ ಪೋರ್ಟಲ್ ಅಥವಾ ಆ್ಯಪ್ ಮೂಲಕ ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.

Written by - Nitin Tabib | Last Updated : Jan 8, 2022, 10:21 AM IST
  • ಜನವರಿ 10 ರಿಂದ ದೇಶಾದ್ಯಂತ ಬೂಸ್ಟರ್ ಡೋಸ್ ಲಸಿಕಾ ಅಭಿಯಾನ ಆರಂಭ.
  • ಇಂದಿನಿಂದ ಅಪಾಯಿಂಟ್ಮೆಂಟ್ ಬುಕಿಂಗ್ ಆರಂಭ.
  • ಕೇಂದ್ರದಿಂದ ಶೀಘ್ರದಲ್ಲಿಯೇ ವೇಳಾಪಟ್ಟಿ ಬಿಡುಗಡೆ.
Anti-Coronavirus Vaccine Booster Dose: ಇಂದಿನಿಂದ ಪ್ರಿಕಾಶನ್ ಡೋಸ್ ಗಾಗಿ ಅಪಾಯಿಂಟ್ಮೆಂಟ್ ಪ್ರಕ್ರಿಯೆ ಆರಂಭ title=
Anti-Coronavirus Vaccine Booster Dose (File Photo)

Anti-Covid-19 Vaccine Precaution Dose - ಜನವರಿ 10 ರಿಂದ ಪ್ರಾರಂಭವಾಗುವ ಕರೋನಾ (Coronavirus) ಲಸಿಕೆ ಪ್ರಿಕಾಶನ್ ಡೋಸ್‌ಗಾಗಿ (Covid-19 Precaution Dose) ಇಂದಿನಿಂದ ಅಂದರೆ ಶನಿವಾರದಂದು ಅಪಾಯಿಂಟ್‌ಮೆಂಟ್‌ಗಳ ಬುಕಿಂಗ್ ಪ್ರಾರಂಭವಾಗುತ್ತಿದೆ. ಮುನ್ನೆಚ್ಚರಿಕೆ ಡೋಸ್ ತೆಗೆದುಕೊಳ್ಳುವವರು ಕೋವಿನ್ ಪೋರ್ಟಲ್ ಅಥವಾ ಆ್ಯಪ್ ಮೂಲಕ ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.

ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ 60 ವರ್ಷಕ್ಕಿಂತ ಮೇಲ್ಪಟ್ಟವರು ಯಾವುದೇ ಕೋವಿಡ್ -19 ಲಸಿಕೆ ಕೇಂದ್ರಕ್ಕೆ ನೇರವಾಗಿ ಭೇಟಿ ನೀಡುವ ಮೂಲಕ ಅಪಾಯಿಂಟ್‌ಮೆಂಟ್ ಕಾಯ್ದಿರಿಸಬಹುದು ಎಂದು ಶುಕ್ರವಾರದಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಆರೋಗ್ಯ ಸಚಿವಾಲಯ ಹೊರಡಿಸಿದ ಹೇಳಿಕೆಯನ್ನು ಉಲ್ಲೇಖಿಸಿರುವ ಸುದ್ದಿ ಸಂಸ್ಥೆ ಎಎನ್‌ಐ, 'ವೇಳಾಪಟ್ಟಿಯನ್ನು ಜನವರಿ 8 ರಂದು ಬಿಡುಗಡೆ ಮಾಡಲಾಗುವುದು. ಆನ್‌ಸೈಟ್ ನೇಮಕಾತಿಯ ಸೌಲಭ್ಯವು ಜನವರಿ 10 ರಿಂದ ಲಸಿಕೆಯೊಂದಿಗೆ ಪ್ರಾರಂಭವಾಗುತ್ತದೆ' ಎಂದು ಹೇಳಿದೆ.

ಇದನ್ನೂ ಓದಿ-ದೆಹಲಿಯಲ್ಲಿ ದೈನಂದಿನ 17,335 ಕೊರೊನಾ ಪ್ರಕರಣಗಳ ದಾಖಲು..!

ಒಮಿಕ್ರಾನ್ (Omicron) ರೂಪಾಂತರವು ವೇಗವಾಗಿ ಹರಡುತ್ತಿರುವ ಮಧ್ಯೆ ಕೇಂದ್ರ ಸರ್ಕಾರವು ಕೋವಿಡ್ (Covid-19) ಲಸಿಕೆಯ ಮುನ್ನೆಚ್ಚರಿಕೆಯ ಪ್ರಮಾಣವನ್ನು ಪರಿಚಯಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 25 ರಂದು ಘೋಷಿಸಿದ್ದರು. ಬೂಸ್ಟರ್ ಡೋಸ್ ಮೊದಲ ಲಸಿಕೆಯ ಎರಡೂ ಡೋಸ್‌ಗಳಿಗಿಂತ ಭಿನ್ನವಾಗಿರುವುದಿಲ್ಲ ಎಂದು ಕೇಂದ್ರ ಸರ್ಕಾರ ಈಗಾಗಲೇ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅಧಿಸೂಚನೆ ಹೊರಡಿಸುವ ಮೂಲಕ ತಿಳಿಸಿದೆ.

ಇದನ್ನೂ ಓದಿ-Covid-19 Booster Dose ಗಾಗಿ ಪ್ರತ್ಯೇಕ ನೋಂದಣಿ ಅಗತ್ಯವೇ? ಇಲ್ಲಿದೆ ವಿವರ

ದೇಶಾದ್ಯಂತ ಕೊರೊನಾ ವೈರಸ್ ನ ಮೂರನೇ ಅಲೆ ಉಲ್ಭಣಿಸುತ್ತಿರುವುದರ ನಡುವೆಯೇ ಭಾರತದ ವ್ಯಾಕ್ಸಿನೆಶನ್ ಅಭಿಯಾನ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದೆ. ಕಳೆದ ವರ್ಷ ಜನವರಿ 16 ರಂದು ಆರಂಭಗೊಂಡ ಮಹಾಲಸಿಕಾ ಅಭಿಯಾನದಲ್ಲಿ ಇದುವರೆಗೆ ಭಾರತದಲ್ಲಿ 150 ಕೋಟಿ ಲಸಿಕೆಯ ಡೋಸ್ ಗಳನ್ನು ವಿತರಿಸಲಾಗಿದೆ. ಕೇಂದ್ರ ಆರೋಗ್ಯ ಇಲಾಖೆಯ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ದೇಶಾದ್ಯಂತ ಇರುವ ಒಟ್ಟು 94 ಕೋಟಿ ಅರ್ಹ ವಯಸ್ಕರರಲ್ಲಿ ಶೇ.91ರಷ್ಟು ಜನರು ಲಸಿಕೆಯ ಮೊದಲ ಡೋಸ್ ಪಡೆದಿದ್ದರೆ, ಶೇ.66 ರಷ್ಟು ವಯಸ್ಕರರು ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದಿದ್ದಾರೆ. ಇನ್ನೊಂದೆಡೆ 15 ರಿಂದ 18 ವಯೋಮಾನದ ಶೇ.22 ರಷ್ಟು ಮಕ್ಕಳಿಗೆ ಲಸಿಕೆಯ ಮೊದಲ ಪ್ರಮಾಣ ನೀಡಲಾಗಿದೆ. 

ಇದನ್ನೂ ಓದಿ-ಮುಂಬೈನಲ್ಲಿ 24 ಗಂಟೆಗಳಲ್ಲಿ 20,971 ಹೊಸ ಪ್ರಕರಣಗಳು, 6 ಸಾವು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News