ದೆಹಲಿಯಲ್ಲಿ ಕಾಣೆಯಾದ ಐಎಎಸ್ ಅಧಿಕಾರಿ

ಪೊಲೀಸರಿಗೆ ಸಿಸಿಟಿವಿ ಫೂಟೇಜ್ ನಲ್ಲೂ ಯಾವ ಸುಳಿವೂ ಸಿಕ್ಕಿಲ್ಲ.  

Last Updated : Dec 14, 2017, 12:25 PM IST
ದೆಹಲಿಯಲ್ಲಿ ಕಾಣೆಯಾದ ಐಎಎಸ್ ಅಧಿಕಾರಿ title=

ನವ ದೆಹಲಿ: ದೆಹಲಿಯ ದ್ವಾರಕಾದಲ್ಲಿನ ನಿವಾಸದಿಂದ ಸೋಮವಾರ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ ಬಳಿಕ ದೆಹಲಿಯ ಐಎಎಸ್ ಅಧಿಕಾರಿಯೊಬ್ಬರು ಕಾಣೆಯಾಗಿದ್ದಾರೆ. ಇಂಡಿಯನ್ ಸಿವಿಲ್ ಅಕೌಂಟ್ ಸರ್ವಿಸಸ್ನ ಅಧಿಕಾರಿಯಾಗಿದ್ದ ಜಿತೇಂದ್ರ ಕುಮಾರ್ ಝಾ ಅವರು ಸೋಮವಾರ ಬೆಳಗ್ಗೆ ದ್ವಾರಕಾ ಸೆಕ್ಟರ್ 9 ರಲ್ಲಿ ಶಿವಲಿ ಅಪಾರ್ಟ್ಮೆಂಟ್ನಲ್ಲಿನ ತಮ್ಮ ನಿವಾಸದಿಂದ ತೆರಳಿದ ನಂತರ ಅವರು ಮನೆಗೆ ಹಿಂದಿರುಗಿಲ್ಲ. ಅಲ್ಲದೆ ಇದುವರೆಗೂ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.

ಇದರ ನಂತರ, ಆಘಾತದ ಸ್ಥಿತಿಯಲ್ಲಿದ್ದ ಅವರ ಪತ್ನಿ ಬಿಹಾರದ ಸುಪೌಲ್ನಲ್ಲಿ ವಾಸಿಸುತ್ತಿರುವ ತಮ್ಮ ಅತ್ತೆ-ಮಾವನಿಗೆ ಕರೆ ಮಾಡಿ ವಿಷಯ ತಿಳಿಸಿದರು. ಪೊಲೀಸರು ಸಿ.ಸಿ.ಟಿ.ವಿ ದೃಶ್ಯಗಳನ್ನು ಸ್ಕ್ಯಾನ್ ಮಾಡಿದರು. ಆದರೆ ಅದರಲ್ಲಿ ಯಾವುದೇ ಸುಳಿವು ಸಿಗಲಿಲ್ಲ ಎಂದು ಪ್ರಭಾತ್ ಖಬರ್ ವರದಿ ಮಾಡಿದ್ದಾರೆ.

ಝಾ ಅವರ ಪತ್ನಿ ಪ್ರಕಾರ, ಕಳೆದ ಕೆಲವು ದಿನಗಳಿಂದ ಆತ ತೊಂದರೆಗೀಡಾಗಿರುತ್ತಾನೆ. ಆದರೆ ಅದರ ಕಾರಣವನ್ನು ಎಂದಿಗೂ ಹಂಚಿಕೊಂಡಿಲ್ಲ. ಅವರು ಮೊದಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಲ್ಲಿ ಕರ್ತವ್ಯ ನಿರ್ವಹಿಸಿದ್ದರು ಎಂದು ತಿಳಿದುಬಂದಿದೆ.

ಝಾ 2006 ರಲ್ಲಿ ವಿವಾಹವಾದರು, ಇವರಿಗೆ ಒಬ್ಬ ಮಗ ಮತ್ತು ಮಗಳಿದ್ದಾಳೆ.

Trending News