ಜನಸಾಮಾನ್ಯರಿಗೆ ಮತ್ತೊಮ್ಮೆ ಹಾಲು ಮಾರಾಟ ಕಂಪನಿ ಬರೆ ಎಳೆದಿದೆ. ಪೆಟ್ರೋಲ್ ಮತ್ತು ಡೀಸೆಲ್ ಹಣದುಬ್ಬರ ಏರಿಕೆಯ ನಂತರ ಇದೀಗ ಹಾಲಿನ ದರವೂ ನಿರಂತರವಾಗಿ ಏರಿಕೆಯಾಗುತ್ತಿದೆ. ಪ್ರಸ್ತುತ ಅಮುಲ್ ಹಾಲಿನ ದರ ಮತ್ತೆ ಏರಿಕೆಯಾಗಿದೆ.ಅಮುಲ್ ಹಾಲಿನ ದರ ಲೀಟರ್ ಗೆ 2 ರೂ.ಏರಿಕೆ ಕಂಡಿದ್ದು, ಪರಿಷ್ಕೃತ ಬೆಲೆಗಳು ಆಗಸ್ಟ್ 17 ರಿಂದ ಜಾರಿಗೆ ಬರಲಿದೆ. ಅಂದರೆ ನಾಳೆಯಿಂದ ಅಮುಲ್ ಮಿಲ್ಕ್ ಗೆ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ.
ಇದನ್ನೂ ಓದಿ: ರಾಷ್ಟ್ರಪಿತ ಗಾಂಧಿಗಾಗಿ ನಿರ್ಮಾಣವಾದ ದೇವಾಲಯ: ಇಲ್ಲಿ ಭಾರತ ಮಾತೆಗೂ ನಡೆಯುತ್ತೆ ಪೂಜೆ
ಹೊಸ ದರಗಳೇನು ಗೊತ್ತಾ? ಅಮುಲ್ ಕಂಪನಿ ನೀಡಿರುವ ಮಾಹಿತಿಯ ಪ್ರಕಾರ ಅಹಮದಾಬಾದ್, ಗುಜರಾತ್, ದೆಹಲಿ, NCR, ಮುಂಬೈ ಮತ್ತು ಪಶ್ಚಿಮ ಬಂಗಾಳದಲ್ಲಿ ಹೊಸ ದರಗಳು ಅನ್ವಯವಾಗಲಿದೆ. 500 ಗ್ರಾಂ ಅಮುಲ್ ಗೋಲ್ಡ್‌ನ ಹೊಸ ಬೆಲೆ ಈಗ 31 ರೂ ಆಗಿದ್ದರೆ, 500 ಗ್ರಾಂ ಅಮುಲ್ ತಾಜಾ ಹೊಸ ಬೆಲೆ 25 ರೂ ಆಗಲಿದೆ ಎಂದು ಕಂಪನಿ ತಿಳಿಸಿದೆ. ಇದಲ್ಲದೇ ಅಮುಲ್ ಶಾಕಿತ್ ಹಾಲಿನ ಹೊಸ ದರ 500 ಗ್ರಾಂಗೆ 28 ರೂ. ಆಗಲಿದೆ. ಹಾಲಿನ ನಿರ್ವಹಣಾ ವೆಚ್ಚ ಮತ್ತು ಉತ್ಪಾದನಾ ವೆಚ್ಚದ ಹೆಚ್ಚಳದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ.
ಈ ಹಿಂದೆ ಮಾರ್ಚ್ 1, 2022 ರಂದು ಅಮುಲ್ ಹಾಲಿನ ದರವನ್ನು ಲೀಟರ್‌ಗೆ 2 ರೂಪಾಯಿಗಳಷ್ಟು ಹೆಚ್ಚು ಮಾಡಲಾಗಿತ್ತು. ಆ ಸಮಯದಲ್ಲಿಯೂ, ಕಂಪನಿಯು ಪೆಟ್ರೋಲ್ ಮತ್ತು ಡೀಸೆಲ್‌ನ ಹಣದುಬ್ಬರ ಏರುತ್ತಿರುವ ಕಾರಣವನ್ನು ಬೆಲೆಯನ್ನು ಹೆಚ್ಚಿಸುವ ಹಿಂದಿನ ಕಾರಣವೆಂದು ಉಲ್ಲೇಖಿಸಿತ್ತು.
ಕಂಪನಿಯು ಈ ಕುರಿತು ಹೇಳಿಕೆಯನ್ನು ನೀಡಿದ್ದು, ಹಾಲಿನ ಒಟ್ಟಾರೆ ಕಾರ್ಯಾಚರಣೆ ಮತ್ತು ಉತ್ಪಾದನೆಯ ವೆಚ್ಚದಲ್ಲಿ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಪಶು ಆಹಾರದ ಬೆಲೆ ಸುಮಾರು 20 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: ಹಿರೋಯಿನ್ ಗಳನ್ನೇ ಮೀರಿಸುತ್ತಾರೆ ಈ ಬಿಸಿನೆಸ್ ಮ್ಯಾನ್ ಗಳ ಪತ್ನಿಯರು
‘ವೆಚ್ಚದ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸದಸ್ಯ ಸಂಘಗಳೂ ಹಿಂದಿನ ವರ್ಷಕ್ಕೆ ಹೋಲಿಸಿದರೆ ರೈತರ ಬೆಲೆಯನ್ನು ಶೇ.8-9ರಷ್ಟು ಹೆಚ್ಚಿಸಿವೆ’ ಎಂದು ಅಮುಲ್ ಹೇಳಿಕೆಯಲ್ಲಿ ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.