ಯೋಗಿ ಆದಿತ್ಯನಾಥ್ ಸಿಎಂ ಆಗಿರುವುದರ ಹಿಂದಿನ ರಹಸ್ಯ ಬಿಚ್ಚಿಟ್ಟ ಅಮಿತ್ ಶಾ..!

ಕೇಂದ್ರ ಸಚಿವ ಅಮಿತ್ ಶಾ ಈಗ ಕೊನೆಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನಾಗಿ ಯೋಗಿ ಆದಿತ್ಯನಾಥ್ ಅವರನ್ನು ಆಯ್ಕೆ ಮಾಡಿದ್ದರ ಹಿಂದಿನ ರಹಸ್ಯವನ್ನು ವಿವರಿಸಿದ್ದಾರೆ. ಲಖನೌದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಅಮಿತ್ ಶಾ ಈ ವಿಚಾರವನ್ನು ಬಹಿರಂಗಪಡಿಸಿದರು. ಈ ವೇಳೆ ಸಿಎಂ ಯೋಗಿ ಆದಿತ್ಯನಾಥ್ ಕೂಡ ವೇದಿಕೆ ಮೇಲೆ ಉಪಸ್ಥಿತರಿದ್ದರು.

Last Updated : Jul 28, 2019, 04:13 PM IST
ಯೋಗಿ ಆದಿತ್ಯನಾಥ್ ಸಿಎಂ ಆಗಿರುವುದರ ಹಿಂದಿನ ರಹಸ್ಯ ಬಿಚ್ಚಿಟ್ಟ ಅಮಿತ್ ಶಾ..! title=
file photo

ಲಖನೌ: ಕೇಂದ್ರ ಸಚಿವ ಅಮಿತ್ ಶಾ ಈಗ ಕೊನೆಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನಾಗಿ ಯೋಗಿ ಆದಿತ್ಯನಾಥ್ ಅವರನ್ನು ಆಯ್ಕೆ ಮಾಡಿದ್ದರ ಹಿಂದಿನ ರಹಸ್ಯವನ್ನು ವಿವರಿಸಿದ್ದಾರೆ. ಲಖನೌದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಅಮಿತ್ ಶಾ ಈ ವಿಚಾರವನ್ನು ಬಹಿರಂಗಪಡಿಸಿದರು. ಈ ವೇಳೆ ಸಿಎಂ ಯೋಗಿ ಆದಿತ್ಯನಾಥ್ ಕೂಡ ವೇದಿಕೆ ಮೇಲೆ ಉಪಸ್ಥಿತರಿದ್ದರು.

65 ಸಾವಿರ ಕೋಟಿ ರೂಗಳ ಅಡಿಗಲ್ಲು ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ 'ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಯಾರೂ ಭಾವಿಸಿರಲಿಲ್ಲ. 'ಯೋಗಿ ಎಂದಿಗೂ ಪುರಸಭೆಯನ್ನು ನಡೆಸಲಿಲ್ಲ, ಯಾಕೆ ಅವರನ್ನು ಸಿಎಂ ಮಾಡುತ್ತಿದ್ದೀರಿ' ಎಂದು ಅನೇಕ ಜನರು ನನ್ನನ್ನುಕೇಳಿದರು. ಇದು ನಿಜ, ಅವರು ಪುರಸಭೆಯನ್ನು ಸಹ ನಡೆಸಲಿಲ್ಲ. ಅವರು ದೇವಾಲಯದ ಮುಖ್ಯಸ್ಥರಾಗಿದ್ದವರು" ಎಂದು ಹೇಳಿದರು.

ಇನ್ನು ಮುಂದುವರೆದು 'ನಾವು ಯಾಕೆ ಅವರಿಗೆ ಇಷ್ಟು ದೊಡ್ಡ ರಾಜ್ಯದ ಆಡಳಿತವನ್ನು ನೀಡುತ್ತಿದ್ದೇವೆ ಎಂದು ಜನರು ನನ್ನನ್ನು ಕೇಳಿದರು. ಅವರು ಕೆಲಸ ಆಧಾರಿತ ವ್ಯಕ್ತಿಯಾಗಿದ್ದರಿಂದ ಮೋದಿ ಮತ್ತು ನಾನು ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ನಿರ್ಧರಿಸಿದೆವು' ಎಂದು ಶಾ ವಿವರಿಸಿದರು. 

2017 ರಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿತು - ಈ ತೀರ್ಪು ಪ್ರಧಾನಿ ಮೋದಿಯವರ ಅಭಿವೃದ್ಧಿ ಭರವಸೆಗೆ ಜನಾದೇಶವಾಗಿದೆ. ಬಿಜೆಪಿ ಯಾವುದೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಚುನಾವಣೆಗೆ ಮುಂಚಿತವಾಗಿ ಕಣಕ್ಕಿಳಿಸದ ಕಾರಣ, ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡುವ ಬಗ್ಗೆ ಹೆಚ್ಚಿನ ಆಸಕ್ತಿ ಇತ್ತು. ಯೋಗಿ ಆದಿತ್ಯನಾಥ್ ಸಿಎಂ ಆಗಿ ಅಧಿಕಾರ ಸ್ವೀಕರಿಸುವ ಮೊದಲು ಪೂರ್ವ ಯುಪಿಯ ಗೋರಖ್‌ಪುರದ ಗೋರಖನಾಥ ದೇವಾಲಯದ ಮುಖ್ಯ ಅರ್ಚಕರಾಗಿದ್ದರು. 
 

Trending News