Punjab Congressನಲ್ಲಿ ಬಿರುಕು! ಸಿಧು ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸುವುದಾಗಿ ಘೋಷಿಸಿದ ಕ್ಯಾಪ್ಟನ್

Punjab Politics - ಕೇವಲ ಪಂಜಾಬ್ (Assembly Election) ಅಷ್ಟೇ ಅಲ್ಲ ಇಡೀ ದೇಶಕ್ಕೆ ಸಿಧು (Navajot Singh Sidhu) ಅಪಾಯಕಾರಿ ಎಂದು ಸಾಬೀತಾಗಿದ್ದಾರೆ ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ (Captain Amarinder Singh) ಅವರು ಹೇಳಿದ್ದಾರೆ. ಮೂರು ವಾರಗಳ ಹಿಂದೆಯೇ ತಾವು ಸಿಎಂ ಹುದ್ದೆಯನ್ನು ತ್ಯಜಿಸುವುದಾಗಿ ಹೇಳಿದ್ದು, ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಆಗ ತಮ್ಮನ್ನು ತಡೆದಿದ್ದರು ಎಂಬುದನ್ನು ಕ್ಯಾಪ್ಟನ್ ಬಹಿರಂಗಪಡಿಸಿದ್ದಾರೆ.

Written by - Nitin Tabib | Last Updated : Sep 23, 2021, 05:38 AM IST
  • ಪಂಜಾಬ್ ಕಾಂಗ್ರೆಸ್ ನಲ್ಲಿ ಇಬ್ಭಾಗದ ಸಂಕೇತ ನೀಡಿದ ಕ್ಯಾಪ್ಟನ್ ಅಮರಿಂದ ಸಿಂಗ್.
  • ಸಿಧು ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸುವುದಾಗಿ ಘೋಷಿಸಿದ ಕ್ಯಾಪ್ಟನ್
  • ದೇಶ ಹಾಗೂ ಪಂಜಾಬ್ ಗೆ ಸಿಧು ಅಪಾಯಕಾರಿ.
Punjab Congressನಲ್ಲಿ ಬಿರುಕು! ಸಿಧು ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸುವುದಾಗಿ ಘೋಷಿಸಿದ ಕ್ಯಾಪ್ಟನ್  title=
Punjab Assembly Polls 2022 (Captain Amarinder Sing - File Photo)

ನವದೆಹಲಿ - ಪಂಜಾಬ್ ಮಾಜಿ ಮುಖ್ಯಮಂತ್ರಿ (Punjab Former Chief Minister) ಕ್ಯಾಪ್ಟನ್ ಅಮರೀಂದರ್ ಸಿಂಗ್ ಬಂಡಾಯದ ಬಾವುಟ ಹಾರಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (Punjab Assembly Polls 2022) ಕಾಂಗ್ರೆಸ್ ರಾಜ್ಯಾಧ್ಯಕ್ಷ (PPCC President Navajot Singh Sidhu) ನವಜೋತ್ ಸಿಂಗ್ ಸಿಧು ವಿರುದ್ಧ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಘೋಷಿಸಿದ್ದಾರೆ. ದೇಶಕ್ಕೆ ದೊಡ್ಡ ಅಪಾಯಕಾರಿಯಾಗಿರುವ ಸಿದ್ದು ಅವರನ್ನು ಯಾವುದೇ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಮೂರು ವಾರಗಳ ಹಿಂದೆಯೇ ಮುಖ್ಯಮಂತ್ರಿ ಗದ್ದುಗೆ ತೊರೆಯಲು ಬಯಸಿದ್ದೆ
ಕ್ಯಾಪ್ಟನ್ ಅಮರಿಂದರ್ ಸಿಂಗ್ (Captain Amarinder Singh) ಅವರು ಸಿಧು ಪಂಜಾಬ್‌ಗೆ ಮಾತ್ರವಲ್ಲ ಇಡೀ ದೇಶಕ್ಕೆ ಅಪಾಯಕಾರಿಯಾಗಿದ್ದಾರೆ ಎಂದು ಹೇಳಿದ್ದಾರೆ. ಮೂರು ವಾರಗಳ ಹಿಂದೆ ತಾವು ಮುಖ್ಯಮಂತ್ರಿ ಕುರ್ಚಿಯನ್ನು ಬಿಡಲು ಬಯಸಿದ್ದಾಗಿ ಬಹಿರಂಗಪಡಿಸಿರುವ ಅವರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಮ್ಮನ್ನು ತಡೆದಿದ್ದರು ಎಂದು ಹೇಳಿದ್ದಾರೆ. ಚರಣ್ಜಿತ್ ಸಿಂಗ್ ಚನ್ನಿ ನೇತೃತ್ವದ ಸರ್ಕಾರದಲ್ಲಿ ಸಿಧು ಹಸ್ತಕ್ಷೇಪವನ್ನು ಖಂಡಿಸಿದ ಕ್ಯಾಪ್ಟನ್, ಸಿಧು ಸೂಪರ್ ಸಿಎಂ ಆಗಿದ್ದಾರೆ ಎಂದು ಹೇಳಿದ್ದಾರೆ.. ಇದರೊಂದಿಗೆ, ಅವರು ಕೆಸಿ ವೇಣುಗೋಪಾಲ್, ಅಜಯ್ ಮಾಕೆನ್ ಮತ್ತು ಸುರ್ಜೆವಾಲಾ ಅವರನ್ನು ಸಹ ಗುರಿಯಾಗಿಸಿದ್ದಾರೆ.

ಚನ್ನಿ ಅನುಭವ ಇಲ್ಲದ ಸಿಎಂ
ಅಮರೀಂದರ್ ಸಿಂಗ್ ಕೇವಲ ಸಿಧು ಮಾತ್ರವಲ್ಲದೆ ಪಂಜಾಬ್ ನ ಹೊಸ ಮುಖ್ಯಮಂತ್ರಿಯಾಗಿ ನೇಮಕಗೊಂಡ ಚರಣಜಿತ್ ಚನ್ನಿ ಅವರನ್ನು ಗುರಿಯಾಗಿಸಿದ್ದಾರೆ. ಪಂಜಾಬ್ ನೆರೆಯ ಪಾಕಿಸ್ತಾನದೊಂದಿಗೆ 600 ಕಿಮೀ ಗಡಿಯನ್ನು ಹಂಚಿಕೊಂಡಿರುವುದರಿಂದ ಚನ್ನಿ ಅವರಿಗೆ ಗೃಹ ಇಲಾಖೆಯನ್ನು ನಿರ್ವಹಿಸುವಲ್ಲಿ ಯಾವುದೇ ಅನುಭವವಿಲ್ಲ ಮತ್ತು ಇದು ತುಂಬಾ ಚಿಂತಾಜನಕ ಸಂಗತಿಯಾಗಿದೆ ಎಂದು ಹೇಳಿದ್ದಾರೆ. ಏಕೆಂದರೆ ಕಳೆದ ಕೆಲ ವರ್ಷಗಳಿಂದ ಸ್ಥಿತಿ ತುಂಬಾ ಗಂಭೀರವಾಗುತ್ತಿದೆ ಎಂದು ಕ್ಯಾಪ್ಟನ್ ಹೇಳಿದ್ದಾರೆ. 

ಇದನ್ನೂ ಓದಿ-Viral Video : ಮದುವೆ ಮಂಟಪದಲ್ಲೇ ವರನೆದುರೇ ಬೇರೊಬ್ಬನಿಗೆ ಹಾರ ಹಾಕಿದ ವಧು..!

ಇದೇ ವೇಳೆ ಸಿಧು ಅವರನ್ನು ನಾಟಕಕಾರ ಎಂದು ಕರೆದ ಕ್ಯಾಪ್ಟನ್ ಅಮರಿಂದರ್, ರಾಹುಲ್ (Rahul Gandhi) - ಪ್ರಿಯಾಂಕಾ (Priyaka Gandhi) ಇನ್ನೂ ಅನುಭವ ಹೊಂದಿಲ್ಲ, ಸಲಹೆಗಾರರು ಅವರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ-RBI Rule : ನಿಮ್ಮ ಬಳಿಯೂ ಟೇಪ್ ಅಂಟಿಸಿರುವ ನೋಟುಗಳಿವೆಯೇ? ಹಾಗಿದ್ದರೆ ಇಲ್ಲಿ ಬಳಸಿ, ಪೂರ್ತಿ ಹಣ ಪಡೆಯಿರಿ

ಈ ಸಂದರ್ಭದಲ್ಲಿ ಸಾಮರ್ಥ್ಯವನ್ನು ಹೇಳಿಕೊಂಡ ಕ್ಯಾಪ್ಟನ್, ನಾನು ಸೈನಿಕ ಮತ್ತು ನನಗೆ ಹೇಗೆ ಕೆಲಸ ಮಾಡಬೇಕೆಂದು ತಿಳಿದಿದೆ ಎಂದು ಹೇಳಿದ್ದಾರೆ. ಅವರು ಏಳು ಬಾರಿ ವಿಧಾನ ಸಭೆ ಮತ್ತು ಎರಡು ಬಾರಿ ಸಂಸತ್ತನ್ನು ತಲುಪಿರುವುದಾಗಿ ಹೇಳಿದ್ದಾರೆ. ಇದರಿಂದ ಎಲ್ಲವೂ ಒಳ್ಳೆಯದಾಗಲಿದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ ನಿರ್ಧಾರವನ್ನು ಪ್ರಶ್ನಿಸಿದ ಅಮರೀಂದರ್, ನಮ್ಮ ಧರ್ಮದಲ್ಲಿ ಪ್ರತಿಯೊಬ್ಬರನ್ನು ಸಮಾನ ದೃಷ್ಟಿಯಿಂದ ನೋಡಲಾಗುತ್ತದೆ ಮತ್ತು ಒಬ್ಬನು ತನ್ನ ಜಾತಿಯನ್ನು ನೋಡಿ ತೀರ್ಪು ನೀಡಬಾರದು, ಆದರೆ ಅವನ ಸಾಮರ್ಥ್ಯವನ್ನು ನೋಡಬೇಕು ಎಂದು ಹೇಳಿದ್ದಾರೆ. ಪಂಜಾಬ್‌ನ ಮೊದಲ ದಲಿತ  ಸಿಎಂ ಚರಣ್ಜಿತ್ ಚನ್ನಿ ಕಡೆಗೆ ಅವರ ಇಂಗಿತವಿತ್ತು.

ಇದನ್ನೂ ಓದಿ-Compensation For Covid Deaths: ಕೊರೊನಾದಿಂದಾದ ಸಾವುಗಳಿಗೆ ಸರ್ಕಾರದಿಂದ ಪರಿಹಾರ ನಿಗದಿ, ಸಂತ್ರಸ್ತ ಕುಟುಂಬಕ್ಕೆ ಸಿಗಲಿದೆ 50 ಸಾವಿರ ರೂ. ಪರಿಹಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News