ನವದೆಹಲಿ: ಬಹು ನಿರೀಕ್ಷಿತ ಕ್ಯಾಬಿನೆಟ್ ಪುನರ್ರಚನೆಗೆ ಮುಂಚಿತವಾಗಿ, ರಾಜಸ್ಥಾನದ ಮಂತ್ರಿ ಮಂಡಳಿಯ ಎಲ್ಲಾ ಸಚಿವರು ಶನಿವಾರ (ನವೆಂಬರ್ 20, 2021) ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.ಭಾನುವಾರ ನಡೆಯಲಿರುವ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಸಭೆಗೆ ಮುನ್ನ ಈ ಬೆಳವಣಿಗೆ ನಡೆದಿದೆ.
ಇದಕ್ಕೂ ಮುನ್ನ ಮೂವರು ಪ್ರಮುಖ ಸಚಿವರು - ಕಂದಾಯ ಸಚಿವ ಹರೀಶ್ ಚೌಧರಿ, ವೈದ್ಯಕೀಯ ಮತ್ತು ಆರೋಗ್ಯ ಸಚಿವ ಡಾ ರಘು ಶರ್ಮಾ ಮತ್ತು ಶಿಕ್ಷಣ ಸಚಿವ ಗೋವಿಂದ್ ಸಿಂಗ್ ದೋತಾಸ್ರಾ ಅವರು ತಮ್ಮ ರಾಜೀನಾಮೆಯನ್ನು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ನೀಡಿದ್ದರು.
ಇದನ್ನೂ ಓದಿ: ಗ್ಯಾಸ್ ಕನೆಕ್ಷನ್ ನಿಯಮದಲ್ಲಿ ಬದಲಾವಣೆ, ಸಬ್ಸಿಡಿಗೆ ಸಂಬಂಧಿಸಿದ ಹೊಸ ರೂಲ್ಸ್ ತಿಳಿಯಿರಿ
ಸಭೆಯಲ್ಲಿ ಎಲ್ಲ ಸಚಿವರು ರಾಜೀನಾಮೆ ನೀಡಿದ್ದಾರೆ ಎಂದು ಪ್ರತಾಪ್ ಸಿಂಹ ಖಚರಿಯಾವಾಸ್ ದೃಢಪಡಿಸಿದ್ದಾರೆ.ಖಚರಿಯಾವಾಸ್ ಪ್ರಕಾರ, ಶುಕ್ರವಾರ ಸಂಪುಟಕ್ಕೆ ರಾಜೀನಾಮೆ ನೀಡಿದ ಗೋವಿಂದ್ ಸಿಂಗ್ ದೋತಸ್ರಾ ಅವರು ಸಭೆಯ ಆರಂಭದಲ್ಲಿ ಪ್ರಸ್ತಾಪವನ್ನು ಮಂಡಿಸಿದರು ಮತ್ತು ನಂತರ ಎಲ್ಲಾ ಸಚಿವರು ರಾಜೀನಾಮೆ ನೀಡಿದರು.
ಇದನ್ನೂ ಓದಿ : SBI Alert : ತಪ್ಪಿ ನೀವೇನಾದರೂ ಮಾಡಿಬಿಟ್ಟರೆ ಈ ಕೆಲಸ, ಖಾಲಿಯಾಗಿ ಬಿಡುತ್ತದೆ ನಿಮ್ಮ ಅಕೌಂಟ್
'ಭಾನುವಾರ ಪಿಸಿಸಿ ಕಚೇರಿಗೆ ಹೋಗುವಂತೆ ನಮಗೆ ತಿಳಿಸಲಾಗಿದೆ, ಅಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ಮತ್ತು ಪಿಸಿಸಿ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಾಸ್ರಾ ಅವರು ಹೆಚ್ಚಿನ ಸೂಚನೆಗಳನ್ನು ನೀಡುತ್ತಾರೆ" ಎಂದು ಖಚರಿಯಾವಾಸ್ ಪಿಟಿಐಗೆ ತಿಳಿಸಿದರು.ಭಾನುವಾರ ಸಂಜೆ 4 ಗಂಟೆಗೆ ನೂತನ ಸಂಪುಟ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.