ಎಲ್ಲಾ ನೌಕರರಿಗೆ ಸಿಹಿ ಸುದ್ದಿ; ನಿಮ್ಮ ವೇತನದಲ್ಲಿ 10% ಹೆಚ್ಚಳ ಸಾಧ್ಯತೆ!

ಕಳೆದ ವರ್ಷ ಉದ್ಯೋಗಿಗಳ ವೇತನದಲ್ಲಿ ಶೇ.9ರಷ್ಟು ಹೆಚ್ಚಳ ಮಾಡಲಾಗಿತ್ತು. ಆದರೆ 2019 ರಲ್ಲಿ ದೇಶದಲ್ಲಿ ವೇತನ ಹೆಚ್ಚಳವು ಶೇ.10 ಪ್ರತಿಶತದಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

Last Updated : Jan 18, 2019, 11:10 AM IST
ಎಲ್ಲಾ ನೌಕರರಿಗೆ ಸಿಹಿ ಸುದ್ದಿ; ನಿಮ್ಮ ವೇತನದಲ್ಲಿ 10% ಹೆಚ್ಚಳ ಸಾಧ್ಯತೆ! title=

ನವದೆಹಲಿ: ದೇಶದ ಎಲ್ಲಾ ಉದ್ಯೋಗಿಗಳಿಗೆ ಇದೊಂದು ಸಿಹಿ ಸುದ್ದಿ. ಈ ಆರ್ಥಿಕ ಸಾಲಿನಲ್ಲಿ ದೇಶದ ಎಲ್ಲಾ ನೌಕರರಿಗೆ ಶೇ.10 ರಷ್ಟು ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ. 

ಗ್ಲೋಬಲ್ ಕನ್ಸಲ್ಟಿಂಗ್ ಸಂಸ್ಥೆ ಕಾರ್ನ್ ಫೆರಿ ಪ್ರಕಾರ, ಭಾರತದ ಅಭಿವೃದ್ಧಿ ಮತ್ತು ಆರ್ಥಿಕತೆಯ ದೃಷ್ಟಿಯಿಂದ ಕಂಪೆನಿಗಳು ಉದ್ಯೋಗಿಗಳ ವೇತನವನ್ನು ಈ ವರ್ಷ ಶೇ.10ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಅಷ್ಟೇ ಅಲ್ಲದೆ, ಶೇ.10ರಷ್ಟು ವೇತನ ಹೆಚ್ಚಳವಾಗುತ್ತಿರುವುದು ಏಷ್ಯಾದಲ್ಲಿಯೇ ಭಾರತದಲ್ಲಿ ಮಾತ್ರ. 

ವರದಿಯ ಪ್ರಕಾರ, ಕಳೆದ ವರ್ಷ ಉದ್ಯೋಗಿಗಳ ವೇತನದಲ್ಲಿ ಶೇ.9ರಷ್ಟು ಹೆಚ್ಚಳ ಮಾಡಲಾಗಿತ್ತು. ಆದರೆ 2019 ರಲ್ಲಿ ದೇಶದಲ್ಲಿ ವೇತನ ಹೆಚ್ಚಳವು ಶೇ.10 ಪ್ರತಿಶತದಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.  ಕಾರ್ನೆಲ್ ಫೆರ್ರಿ ಇಂಡಿಯಾ ಸಿಎಂಡಿ ನವನೀತ್ ಸಿಂಗ್ ಅವರು ಹೇಳುವಂತೆ, ಒಟ್ಟಾರೆ ವೇತನ ಬೆಳವಣಿಗೆ ಮತ್ತು ಆರ್ಥಿಕ ಬೆಳವಣಿಗೆಯ ಸಾಮರ್ಥ್ಯದ ಮೇಲೆ ನಿಜವಾದ ವೇತನ ಬೆಳವಣಿಗೆಗೆ ಸಂಬಂಧಿಸಿದಂತೆ ಏಷ್ಯಾದಲ್ಲಿಯೇ ಭಾರತ ಅಗ್ರ ಸ್ಥಾನದಲ್ಲಿದೆ ಎಂದಿದ್ದಾರೆ.

ಏಷ್ಯಾದ ಉಳಿದ ಭಾಗಗಳಲ್ಲಿ ನೌಕರರ ವೇತನದಲ್ಲಿನ ಅಂದಾಜು ಹೆಚ್ಚಳ
ಏಷ್ಯಾದ ಇತರ ರಾಷ್ಟ್ರಗಳ ಉದ್ಯೋಗಿಗಳ ವೇತನವನ್ನು ಈ ವರ್ಷ 5.6 ರಷ್ಟು ಹೆಚ್ಚಿಸಬಹುದು ಎಂದು ವರದಿ ತಿಳಿಸಿದೆ. ಆದರೆ, ವೇತನ ಹೆಚ್ಚಳದಿಂದ ಹಣದುಬ್ಬರ ದರ ಕಡಿಮೆಯಾದರೆ, ಸ್ಥಿರ ಬೆಳವಣಿಗೆಯು ಶೇ. 2.6ರಷ್ಟು ಇರಲಿದೆ. ಏಷ್ಯಾದ ಇತರ ದೇಶಗಳಲ್ಲಿ ಚೀನಾದಲ್ಲಿ ಶೇ. 3.2, ಜಪಾನ್ನಲ್ಲಿ ಶೇ 0.10, ವಿಯೆಟ್ನಾಂನಲ್ಲಿ ಶೇ.4.80, ಸಿಂಗಾಪೂರ್ನಲ್ಲಿ ಶೇ.3 ಮತ್ತು ಇಂಡೋನೇಷ್ಯಾದಲ್ಲಿ ಶೇ. 3.70ರಷ್ಟು ವೇತನದಲ್ಲಿ ಹೆಚ್ಚಳವಾಗಲಿದೆ ಎಂದು ವರದಿ ಹೇಳಿದೆ. 

Trending News