ಸೆಕ್ಷನ್ 144ರ ಉಲ್ಲಂಘನೆ; AMUನ 1,200 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು

ಅನುಮತಿ ಇಲ್ಲದೆ ಕ್ಯಾಂಡಲ್ ಮೆರವಣಿಗೆ ನಡೆಸಿದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (AMU) 1200 ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Last Updated : Dec 26, 2019, 12:02 PM IST
ಸೆಕ್ಷನ್ 144ರ ಉಲ್ಲಂಘನೆ; AMUನ 1,200 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು title=

ಅಲಿಗಢ: ಅಲಿಗಢದಲ್ಲಿ ಸೆಕ್ಷನ್ 144 ಉಲ್ಲಂಘನೆಯ ಪ್ರಕರಣದಲ್ಲಿ ಯುಪಿ ಪೊಲೀಸರು ಪ್ರಮುಖ ಕ್ರಮ ಕೈಗೊಂಡಿದ್ದು, ಅನುಮತಿ ಇಲ್ಲದೆ ಕ್ಯಾಂಡಲ್ ಮೆರವಣಿಗೆ ನಡೆಸಿದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (AMU) 1200 ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಾಸ್ತವವಾಗಿ, ಮೂರು ದಿನಗಳ ಹಿಂದೆ, ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರುದ್ಧ ಎಎಂಯು ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಕೈಗೊಂಡಿದ್ದ ಸಂದರ್ಭದಲ್ಲಿ ಪೊಲೀಸರು ಕೈಗೊಂಡ ಕ್ರಮದ ವಿರುದ್ಧ ಪ್ರತಿಭಟಿಸಲು ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಇತರರು ಅನುಮತಿಯಿಲ್ಲದೆ ಕ್ಯಾಂಡಲ್ ಮೆರವಣಿಗೆ ನಡೆಸಿದರು. ಈ ಹಿನ್ನೆಲೆಯಲ್ಲಿ ಅನುಮತಿ ಇಲ್ಲದೆ ಕ್ಯಾಂಡಲ್ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಪೊಲೀಸ್ ಸಿವಿಲ್ ಲೈನ್ಸ್‌ನಲ್ಲಿ ಸೆಕ್ಷನ್ 188, 341 ಐಪಿಸಿ ಅಡಿಯಲ್ಲಿ 1200 ಜನರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ಸಿಒ ಸಿವಿಲ್ ಲೈನ್ ಅನಿಲ್ ಸಮನಿಯಾ ಹೇಳಿದ್ದಾರೆ.

ಏನಿದು ಪ್ರಕರಣ?
ಸಿಎಎ ವಿರುದ್ಧ ಪ್ರತಿಭಟಿಸಿದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ಡಿಸೆಂಬರ್ 23 ರಂದು ಸಂಜೆ 5 ಗಂಟೆಗೆ ಶಿಕ್ಷಕರೊಂದಿಗೆ ಕ್ಯಾಂಡಲ್ ಮೆರವಣಿಗೆ ನಡೆಸಲಾಯಿತು. ನಗರದ ಚುಂಗಿ ಗೇಟ್‌ನಿಂದ ಬಾಬೆ ಸಯೀದ್ ಗೇಟ್‌ವರೆಗೆ ಕ್ಯಾಂಡಲ್ ಮೆರವಣಿಗೆಯನ್ನು ನಡೆಸಲಾಯಿತು. ಈ ಪ್ರದರ್ಶನದಲ್ಲಿ ಸಾವಿರಾರು ಎಎಂಯು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.

ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ರಾಷ್ಟ್ರಪತಿಯವರನ್ನು ಉದ್ದೇಶಿಸಿ ಸಿಎಎಯನ್ನು ತಕ್ಷಣ ರದ್ದುಗೊಳಿಸುವಂತೆ ಒತ್ತಾಯಿಸಿದರು. ಇದಲ್ಲದೆ, ಶಾಂತಿಯುತವಾಗಿ ಪ್ರದರ್ಶನ ನೀಡಿದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ವಿಧ್ವಂಸಕ ಕೃತ್ಯ ಎಸಗಿದ್ದಕ್ಕಾಗಿ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಜೊತೆಗೆ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಕುಲಪತಿ ಮತ್ತು ರಿಜಿಸ್ಟ್ರಾರ್ ಅವರನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದರು. 

ಇನ್ನು ಮೆರವಣಿಗೆಯಲ್ಲಿ ಭಾಗಿಯಾಗಿದ್ದವರ ವಿರುದ್ಧ ಪ್ರಕರಣ ದಾಖಲಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಿಒ ಸಿವಿಲ್ ಲೈನ್ ಅನಿಲ್ ಸಮನಿಯಾ, ನಗರದಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದರೂ ಜನರು ಮೆರವಣಿಗೆಯನ್ನು ಕೈಗೊಳ್ಳುವ ಮೂಲಕ ಸೆಕ್ಷನ್ 144 ಅನ್ನು ಉಲ್ಲಂಘಿಸಿದ್ದಾರೆ. ಇದಕ್ಕಾಗಿ ನಾವು 1200 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದಿದ್ದಾರೆ.

ಏತನ್ಮಧ್ಯೆ, ಮೀರತ್‌ನಲ್ಲಿ 400 ಶಸ್ತ್ರಾಸ್ತ್ರ ಪರವಾನಗಿಗಳ ನವೀಕರಣವನ್ನು ನಿಷೇಧಿಸಲಾಗಿದೆ. ಸಿಎಎ ವಿರುದ್ಧದ ಪ್ರದರ್ಶನಗಳಲ್ಲಿ  ಪರವಾನಗಿ ಪಡೆದ ಶಸ್ತ್ರಾಸ್ತ್ರಗಳನ್ನು ಬಳಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಇದಲ್ಲದೆ, ಆಡಳಿತ ಪರವಾನಗಿ ಶಸ್ತ್ರಾಸ್ತ್ರ ಮಾಲೀಕರಿಂದ ಪ್ರತಿ ಗುಂಡಿನ ಖಾತೆಯನ್ನು ಸಹ ಕೇಳುತ್ತಿದೆ.

Trending News