Alert To NPS Subscribers: ಪೆನ್ಷನ್ ಫಂಡ್ ರೆಗ್ಯುಲೆಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ (PFRDA), ನ್ಯಾಷನಲ್ ಪೆನ್ಷನ್ ಸಿಸ್ಟಂ ನಲ್ಲಿ ಪೆನ್ಷನ್ ಫಂಡ್ ಗಳ ಮೂಲಕ ಚಾರ್ಜ್ ಮಾಡಲಾಗುವ ಇನ್ವೆಸ್ಟ್ಮೆಂಟ್ ಮ್ಯಾನೇಜ್ಮೆಂಟ್ ಶುಲ್ಕದಲ್ಲಿ (Investment Management Fees) ಏರಿಕೆ ಮಾಡಿದೆ. ಈ ಶುಲ್ಕ ಏರಿಕೆ ಏಪ್ರಿಲ್ 1, 2021ರಿಂದ ಜಾರಿಗೆ ಬಂದಿದೆ. ಈ ಮೊದಲು ಒಟ್ಟು ಅಸೆಟ್ ನ ಶೇ.0.01ರಷ್ಟಿದ್ದ ಶುಲ್ಕ ಇದೀಗ ಏರಿಕೆಯಾಗಲಿದೆ. ಆದರೆ ಅದರ ಗಡಿ ಪೆನ್ಷನ್ ಫಂಡ್ ನ ಟೋಟಲ್ ಅಸೆಟ್ ಅಂಡರ್ ಮ್ಯಾನೇಜ್ಮೆಂಟ್ ನ ಶೇ.0.09 ರಷ್ಟು ಇಡಲಾಗುವುದು ಮತ್ತು ಇದು ಪೆನ್ಷನ್ ಫಂಡ್ (Pension Fund)ನ ಒಟ್ಟು ಅಸೆಟ್ ನ ಅಂಡರ್ ಮ್ಯಾನೇಜ್ಮೆಂಟ್ ಮೇಲೆ ಆಧಾರಿತವಾಗಿರಲಿದೆ. ಫಂಡ್ಸ್ ಗಳಿಗಾಗಿ ತಿದ್ದುಪಡಿ ಮಾಡಲಾಗಿರುವ ರಚನೆಗಳ ಅಡಿ ಈ AUMಗಳ ಮ್ಯಾನೇಜ್ಮೆಂಟ್ ಶುಲ್ಕ ವಿವಿಧ ಸ್ಲ್ಯಾಬ್ ಅಥವಾ ಚಪ್ಪಡಿಗಳಲ್ಲಿ ಅನ್ವಯಿಸಲಿದೆ.
ಈ ಚಪ್ಪಡಿಗಳ ಪ್ರಕಾರ 10 ಸಾವಿರ ಕೋಟಿ ರೂ.ವರೆಗಿನ AMUsಗಳಿಗೆ ಗರಿಷ್ಟ ಇನ್ವೆಸ್ಟ್ಮೆಂಟ್ ಮ್ಯಾನೇಜ್ಮೆಂಟ್ ಶುಲ್ಕ ಶೇ.0.09ರಷ್ಟು ಆಗಲಿದೆ. 10,001 - 50,000 ಕೋಟಿ ರೂ.ಗಳ ವರೆಗಿನ ಶುಲ್ಕ ಶೇ.0.06ಕ್ಕೆ ಸೀಮಿತವಾಗಲಿದೆ. 50,001 - 1,50,000 ಕೋಟಿ ರೂ.ಗಳ ವರೆಗಿನ AMUs (Asset Under Management) ಗಳಿಗೆ ಶೇ.0.05ರಷ್ಟಿರಲಿದ್ದರೆ, 1,50,000 ಕೋಟಿ ರೂ.ಗಳಿಗಿಂತ ಹೆಚ್ಚಿನ AMUs ಗಳಿಗೆ ಇದು ಶೇ.0.04 ರಷ್ಟು ಇರಲಿದೆ.
ಚಂದಾದಾರರಿಗೆ ಕಳುಹಿಸಲಾಗಿರುವ ಅಧಿಸೂಚನೆಯ ಪ್ರಕಾರ, ನೂತನ ಸ್ಲ್ಯಾಬ್ ಆಧಾರಿತ ಸಂರಚನೆ ಮಾರ್ಚ್ 30, 2021ಕ್ಕೆ PFRDAಯ ನೊಂದಣಿಯ ಹೊಸ ಸರ್ಟಿಫಿಕೆಟ್ ಗಳಿಗೆ ಅನ್ವಯಿಸಲಿದೆ.
SBI ಪೆನ್ಷನ್ ಫಂಡ್
>>10,000 ಕೋಟಿ ವರೆಗೆ: ವರ್ಷಕ್ಕೆ 0.09%
>>10,001-50,000 ಕೋಟಿ: ವಾರ್ಷಿಕವಾಗಿ 0.06%
>>50,001 - 1,50,000 ಕೋಟಿ ರೂ: ವಾರ್ಷಿಕ 0.05%
>>1,50,000 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನದು: ವಾರ್ಷಿಕವಾಗಿ 0.03%
LIC ಪೆನ್ಷನ್ ಫಂಡ್
>>10,000 ಕೋಟಿ ವರೆಗೆ: ವರ್ಷಕ್ಕೆ 0.09%
>>10,001- 50,000 ಕೋಟಿ: ವಾರ್ಷಿಕ 0.06%
>>50,001 - 1,50,000 ಕೋಟಿ ರೂ: ವಾರ್ಷಿಕ 0.05%
>>1,50,000 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನದು: ವಾರ್ಷಿಕವಾಗಿ 0.03%
UTI ನಿವೃತ್ತಿ ಯೋಜನೆಗಳು
>>10,000 ಕೋಟಿ ವರೆಗೆ: ವರ್ಷಕ್ಕೆ 0.07%
>>10,001-50,000 ಕೋಟಿ: ವಾರ್ಷಿಕವಾಗಿ 0.06%
>>50,001-1,50,000 ಕೋಟಿ: ವಾರ್ಷಿಕ 0.05%
>>1,50,000 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನದು: ವಾರ್ಷಿಕವಾಗಿ 0.03%
HDFC ಪೆನ್ಷನ್ ಮ್ಯಾನೇಜ್ಮೆಂಟ್
>>10,000 ಕೋಟಿ ವರೆಗೆ: ವರ್ಷಕ್ಕೆ 0.09%
>>10,001-50,000 ಕೋಟಿ: ವಾರ್ಷಿಕವಾಗಿ 0.06%
>>50,001-1,50,000 ಕೋಟಿ: ವಾರ್ಷಿಕ 0.05%
>>1,50,000 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನದು: ವಾರ್ಷಿಕವಾಗಿ 0.03%
ಇದನ್ನೂ ಓದಿ- NPS Benefits Issued: ಕೇಂದ್ರ ನೌಕರರ ಪಿಂಚಣಿ, NPS ಪ್ರಯೋಜನಗಳ ಕುರಿತು ಸರ್ಕಾರದಿಂದ ಮಹತ್ವದ ಅಧಿಸೂಚನೆ!
ICICI Prudential ಪೆನ್ಷನ್ ಫಂಡ್
>>10,000 ಕೋಟಿ ವರೆಗೆ: ವರ್ಷಕ್ಕೆ 0.09%
>>10,001-50,000 ಕೋಟಿ: ವಾರ್ಷಿಕವಾಗಿ 0.06%
>>50,001-1,50,000 ಕೋಟಿ: ವಾರ್ಷಿಕ 0.05%
>>1,50,000 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನದು: ವಾರ್ಷಿಕವಾಗಿ 0.03%
ಪೆನ್ಷನ್ ಫಂಡ್ ಗಳ ಮೂಲಕ ಚಾರ್ಜ್ ಮಾಡಲಾಗುವ ಇನ್ವೆಸ್ಟ್ಮೆಂಟ್ ಮ್ಯಾನೇಜ್ಮೆಂಟ್ ಶುಲ್ಕ ಎಲ್ಲಾ ಯೋಜನೆಗಳ ಅಡಿ ಬರುವ ಪೆನ್ಷನ್ ಫಂಡ್ ಗಳ ಒಟ್ಟು AUM ಗಳಿಗೆ ಅನ್ವಹಿಸಲಿದೆ ಹಾಗೂ ದಿನನಿತ್ಯದ ಆಧಾರದ ಮೇಲೆ ಈ ಶುಲ್ಕ ವಿಧಸಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ- ಬಿಗ್ ನ್ಯೂಸ್! EPF ಬಡ್ಡಿ ಮೇಲಿನ ತೆರಿಗೆ ಬಗ್ಗೆ ವಿತ್ತ ಸಚಿವರ ಮಹತ್ವದ ಹೇಳಿಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.