Alert: ಹಣ ವಿಥ್ ಡ್ರಾ ಮಾಡುವ ನಿಯಮದಲ್ಲಿ ಬದಲಾವಣೆ ತಂದ ಕೇಂದ್ರ ಸರ್ಕಾರ, ಕಾರಣ ಇಲ್ಲಿದೆ

ಕೊರೊನಾ ವೈರಸ್ ಕಾಲಾವಧಿಯಲ್ಲಿ ಕೇಂದ್ರ ಸರ್ಕಾರ ಬಡವರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಹಲವು ಹಣಕಾಸು ನೆರವಿನ ಯೋಜನೆಗಳ ಕಂತನ್ನು ಖಾತೆದಾರರ ಖಾತೆಗೆ ವರ್ಗಾಯಿಸಲು ಆರಂಭ ಕೂಡ ಮಾಡಿದೆ. ಆದರೆ, ಮೇ ತಿಂಗಳಿನಿಂದ ಬ್ಯಾಂಕ್ ಗಳು ಖಾತೆಯಿಂದ ಹಣ ವಿಥ್ ಡ್ರಾ ಮಾಡುವ ನಿಯಮಗಳನ್ನು ಕಠಿಣಗೊಳಿಸಿವೆ.

Last Updated : May 3, 2020, 12:43 PM IST
Alert: ಹಣ ವಿಥ್ ಡ್ರಾ ಮಾಡುವ ನಿಯಮದಲ್ಲಿ ಬದಲಾವಣೆ ತಂದ ಕೇಂದ್ರ ಸರ್ಕಾರ, ಕಾರಣ ಇಲ್ಲಿದೆ title=

ನವದೆಹಲಿ:ಕೊರೊನಾ ವೈರಸ್ ಕಾಲಾವಧಿಯಲ್ಲಿ ಕೇಂದ್ರ ಸರ್ಕಾರ ಬಡವರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಹಲವು ಹಣಕಾಸು ನೆರವಿನ ಯೋಜನೆಗಳ ಕಂತನ್ನು ಖಾತೆದಾರರ ಖಾತೆಗೆ ವರ್ಗಾಯಿಸಲು ಆರಂಭ ಕೂಡ ಮಾಡಿದೆ. ಆದರೆ, ಮೇ ತಿಂಗಳಿನಿಂದ ಬ್ಯಾಂಕ್ ಗಳು ಖಾತೆಯಿಂದ ಹಣ ವಿಥ್ ಡ್ರಾ ಮಾಡುವ ನಿಯಮಗಳನ್ನು ಕಠಿಣಗೊಳಿಸಿವೆ. ಸೋಮವಾರದಿಂದ ಕೇಂದ್ರ ಸರ್ಕಾರ ಮಹಿಳಾ ಜನ್ ಧನ್ ಖಾತೆದಾರರ ಖಾತೆಗೆ ರೂ.500 ಮುಂದಿನ ಕಂತು ವರ್ಗಾಯಿಸಲು ಆರಂಭಿಸಲಿದೆ. ಆದರೆ, ಸೋಮವಾರವೇ ಜನರು ಬ್ಯಾಂಕ್ ಎದುರು ಹಣ ಪಡೆಯಲು ಸೇರಬೇಕು ಎಂದರ್ಥವಲ್ಲ. ಇದಲ್ಲದೆ ಸರ್ಕಾರ ಕಿಸಾನ್ ಸಮ್ಮಾನ್ ನಿಧಿ ಹಾಗೂ ಗರೀಬ್ ಕಲ್ಯಾಣ್ ಯೋಜನೆಯಡಿಯೂ ಕೂಡ ಕೊರೊನಾ ಕಾಲದಲ್ಲಿ ಸರ್ಕಾರ ನನರಿಗೆ ಸಹಾಯ ನೀಡುತ್ತಿದೆ.

ನಿಯಮಗಳನ್ನು ಬಿಗಿಗೊಳಿಸಿದ ಬ್ಯಾಂಕ್ ಗಳು
ಈ ಬಾರಿ ಹಣ ವಿಥ್ ಡ್ರಾಗೆ ಇದ್ದ ನಿಯಮಗಳಲ್ಲಿ ಬ್ಯಾಂಕ್ ಗಳು ಭಾರಿ ಬದಲಾವಣೆ ಮಾಡಿವೆ. ಕೊರೊನಾ ವೈರಸ್ ಮಹಾಮಾರಿಯ ಹಿನ್ನೆಲೆ ಹಾಗೂ ಸಾಮಾಜಿಕ ಅಂತರ ಕಾಯುವಿಕೆಯನ್ನು ಸುನಿಶ್ಚಿತಗೊಳಿಸಲು ಹೊಸ ನಿಯಮಗಳನ್ನು ಬ್ಯಾಂಕ್ ಗಳು ಜಾರಿಗೆ ತಂದಿವೆ. ಏಕೆಂದರೆ, ಕಳೆದ ಬಾರಿ ಏಪ್ರಿಲ್ ತಿಂಗಳಿನಲ್ಲಿ ಸರ್ಕಾರ ತನ್ನ ಸಹಾಯದ ಮೊದಲ ಕಂತನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದಾಗ ಭಾರಿ ಪ್ರಮಾಣದಲ್ಲಿ ಮಹಿಳೆಯರು ಬ್ಯಾಂಕ್ ಬಳಿ ತೆರಳಿದ ಕಾರಣ ಜನಸಂದಣಿಯೇ ಸೃಷ್ಟಿಯಾಗಿತ್ತು. ಆದರೆ, ಈ ಬಾರಿ ಖಾತೆ ಸಂಖ್ಯೆಯ ಕೊನೆಯ ಅಂಕಗಳನ್ನು ಆಧರಿಸಿ ಹಣವನ್ನು ವಿತರಿಸಲು ನಿಯಮವನ್ನು ಜಾರಿಗೊಳಿಸಿವೆ.

ಹಣ ಹೀಗೆ ವಿಥ್ ಡ್ರಾ ಮಾಡಬಹುದು
ಖಾತಾ ಸಂಖ್ಯೆಯ ಕೊನೆಯ ಅಂಕ         ಹಣ ವಿಥ್ ಡ್ರಾ ಮಾಡುವ ತಿಥಿ
0-1                                             4 ಮೇ
2-3                                             5 ಮೇ 
4-5                                             6 ಮೇ 
6-7                                             8 ಮೇ 
8-9                                           11 ಮೇ 

ATM ಗಳಿಂದಲೂ ಕೂಡ ಹಣ ವಿಥ್ ಡ್ರಾ ಮಾಡಬಹುದು
ಈ ಕುರಿತು ಹೇಳಿಕೆ ಪ್ರಕಟಿಸಿರುವ ಇಂಡಿಯನ್ ಬ್ಯಾಂಕ್ ಅಸ್ಸೋಸಿಯೇಶನ್, ನಿಮ್ಮ ಹತ್ತಿರದ ಬ್ಯಾಂಕ್ ಸ್ನೇಹಿತರ ಸಹಾಯ ಪಡೆದು ಅಥವಾ ಏಟಿಎಂಗೆ ಭೇಟಿ ನೀಡಿ ಕೂಡ ಹಣವನ್ನು ವಿಥ್ ಡ್ರಾ ಮಾಡಬಹುದಾಗಿದೆ ಎಂದು ಹೇಳಿದ್ದು, ಇದಕ್ಕಾಗಿ ಯಾವುದೇ ರೀತಿಯ ಚಾರ್ಜ್ ವಿಧಿಸಲಾಗುವುದಿಲ್ಲ ಎಂದಿದೆ. ಜೊತೆಗೆ ಯಾವುದೇ ಖಾತಾ ನಂಬರ್ ಹೊಂದಿರುವ ಗ್ರಾಹಕರು ಮೇ 11 ರ ಬಳಿಕ ಯಾವಾಗಲಾದರೂ ಕೂಡ ಹಣವನ್ನು ವಿಥ್ ಡ್ರಾ ಮಾಡಬಹುದು ಎಂದು ಅಸೋಸಿಯೇಷನ್ ಹೇಳಿದೆ.

Trending News