New Parliament: ನೂತನ ಸಂಸತ್ ಭವನದಲ್ಲಿ ಅಖಂಡ ಭಾರತದ ನಕ್ಷೆ ಕಂಡು ಬೆಚ್ಚಿ ಬಿದ್ದ ಪಾಕಿಸ್ತಾನ, ಹೇಳಿದ್ದೇನು ಗೊತ್ತಾ?

New Parliament Building: ಭಾರತೀಯ ಸಂಸತ್ತಿನ ನೂತನ ಕಟ್ಟಡದಲ್ಲಿ 'ಅಖಂಡ ಭಾರತ' ನಕ್ಷೆಯನ್ನು ನೋಡಿ ಪಾಕಿಸ್ತಾನ ಮತ್ತು ನೇಪಾಳದ ರಾಜಕೀಯ ಬೀದಿಗಳಲ್ಲಿ ಭಾರಿ ಕೋಲಾಹಲ ಸೃಷ್ಟಿಯಾಗಿದೆ. ಇದೀಗ ಇದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಹೇಳಿಕೆ ಕೂಡ ಪ್ರಕಟಗೊಂಡಿದೆ.   

Written by - Nitin Tabib | Last Updated : Jun 2, 2023, 02:11 PM IST
  • 'ಅಖಂಡ ಭಾರತ' ಕುರಿತು ಬಿಜೆಪಿ ನಾಯಕರ ಕೆಲವು ಹೇಳಿಕೆಗಳ ನಂತರ, ಸಂಸತ್ತಿನಲ್ಲಿ ಸ್ಥಾಪಿಸಲಾದ ಈ ಮ್ಯೂರಲ್ ಆರ್ಟ್ ಇದೀಗ ವಿವಾದಕ್ಕೆ ಸಿಲುಕಿದೆ.
  • ನೇಪಾಳದ ಮಾಜಿ ಪ್ರಧಾನಿ ಬಾಬುರಾಮ್ ಭಟ್ಟರೈ ಇದನ್ನು ಪ್ರಶ್ನಿಸಿದ್ದು, ಭಾರತವು ತನ್ನ ಉದ್ದೇಶವನ್ನು ವ್ಯಕ್ತಪಡಿಸಬೇಕು
  • ಮತ್ತು ನಮಗೆ ಸ್ಪಷ್ಟೀಕರಣವನ್ನು ಕಳುಹಿಸಬೇಕು ಎಂದು ಹೇಳಿದ್ದಾರೆ.
New Parliament: ನೂತನ ಸಂಸತ್ ಭವನದಲ್ಲಿ ಅಖಂಡ ಭಾರತದ ನಕ್ಷೆ ಕಂಡು ಬೆಚ್ಚಿ ಬಿದ್ದ ಪಾಕಿಸ್ತಾನ, ಹೇಳಿದ್ದೇನು ಗೊತ್ತಾ? title=

Akhand Bharat Mural In New Parliament: ಭಾರತೀಯ ಸಂಸತ್ತಿನ ನೂತನ ಕಟ್ಟಡದಲ್ಲಿ ‘ಅಖಂಡ ಭಾರತ’ದ ಬಿತ್ತಿಚಿತ್ರ ಕಲೆಯನ್ನು ನೋಡಿ ನೆರೆಯ ಕೆಲ ದೇಶಗಳು ಗಲಿಬಿಲಿಗೊಂಡಿವೆ. ಮೊದಲು ನೇಪಾಳ ಮತ್ತು ಇದೀಗ ಪಾಕಿಸ್ತಾನ 'ಅಖಂಡ ಭಾರತ'ದ ಬಗ್ಗೆ ಆಕ್ಷೇಪ ಎತ್ತಿದೆ. ಭಾರತೀಯ ಸಂಸತ್ತಿನ ಹೊಸ ಕಟ್ಟಡದಲ್ಲಿ ತೋರಿಸಿರುವ 'ಅಖಂಡ ಭಾರತ' ಪಾಕಿಸ್ತಾನ ಮತ್ತು ಇತರ ನೆರೆಯ ದೇಶಗಳ ಪ್ರದೇಶವನ್ನು ಸಹ ತೋರಿಸುತ್ತದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಮುಮ್ತಾಜ್ ಜಹ್ರಾ ಬಲೋಚ್ ಹೇಳಿದ್ದಾರೆ. ಇದು ಭಾರತದ ವಿಸ್ತರಣಾ ಮನೋಭಾವವನ್ನು ಅನಾವರಣಗೊಳಿಸುವ ಕೆಟ್ಟ ಉದ್ದೇಶ ಹೊಂದಿದೆ ಎಂದು ಅದು ಹೇಳಿದೆ.

ಬಿಜೆಪಿ ನಾಯಕರು ‘ಅಖಂಡ ಭಾರತ’ ಎಂದು ಕರೆಯುತ್ತಿರುವ ಮತ್ತು ಭಾರತೀಯ ಸಂಸತ್ತಿನಲ್ಲಿ ಪ್ರದರ್ಶಿಸಿರುವುದು ಭಿತ್ತಿಚಿತ್ರ ಕಲೆ ಇದೀಗ ಆತಂಕಕ್ಕೆ ಕಾರಣವಾಗಿದೆ ಎಂದು ಪಾಕಿಸ್ತಾನದ ವತಿಯಿಂದ ಹೇಳಲಾಗಿದೆ. 'ಅಖಂಡ ಭಾರತ'ದ ಹಕ್ಕು ಭಾರತದ ಜನರ ವಿಸ್ತರಣಾ ಮನೋಭಾವ ಪ್ರದರ್ಶಿಸುತ್ತದೆ, ಇದು ನೆರೆಯ ರಾಷ್ಟ್ರಗಳನ್ನು ಮಾತ್ರವಲ್ಲದೆ ಧಾರ್ಮಿಕ ಅಲ್ಪಸಂಖ್ಯಾತರ ಸಿದ್ಧಾಂತ ಮತ್ತು ಸಂಸ್ಕೃತಿಯನ್ನು ಹತ್ತಿಕ್ಕಲು ಬಯಸುತ್ತದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಹೇಳಿದೆ. ಈ ಕುರಿತು ಮಾತನಾಡಿರುವ ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ ಮುಮ್ತಾಜ್ ಝಹ್ರಾ ಬಲೋಚ್, 'ಭಾರತವು ವಿಸ್ತರಣಾ ಸಿದ್ಧಾಂತದಿಂದ ದೂರವಿರಬೇಕು ಮತ್ತು ತನ್ನ ನೆರೆಯ ರಾಷ್ಟ್ರಗಳೊಂದಿಗೆ ಶಾಂತಿಯುತ ರೀತಿಯಲ್ಲಿ ವಿವಾದಗಳನ್ನು ಇತ್ಯರ್ಥಗೊಳಿಸಲು ಮುಂದಾಗಬೇಕು ಎಂದು ನಾವು ಒತ್ತಾಯಿಸುತ್ತೇವೆ' ಎಂದಿದ್ದಾರೆ. 

'ಅಖಂಡ ಭಾರತ' ಮ್ಯೂರಲ್ ಆರ್ಟ್‌ಗೆ ನೆರೆ ರಾಷ್ಟ್ರಗಳ ಆಕ್ಷೇಪ
ಭಾರತೀಯ ಸಂಸತ್ತಿನ ಹೊಸ ಕಟ್ಟಡದಲ್ಲಿ, 'ಅಖಂಡ ಭಾರತ' ಮ್ಯೂರಲ್‌ನಲ್ಲಿ, ಪ್ರಾಚೀನ ಭಾರತದ ನಕ್ಷೆಯನ್ನು ತೋರಿಸಲಾಗಿದೆ, ಅದರ ಮೇಲೆ ಭಾರತೀಯ ರಾಜ್ಯಗಳ ಹೆಸರನ್ನು ಬರೆಯಲಾಗಿದೆ.  ಈ ಮ್ಯೂರಲ್ ಕಲೆಯಲ್ಲಿ ಮುಖ್ಯವಾಗಿ ಇಂದಿನ ಅಫ್ಘಾನಿಸ್ತಾನ, ಪಾಕಿಸ್ತಾನ, ಮಾಲ್ಡೀವ್ಸ್, ಶ್ರೀಲಂಕಾ, ಮ್ಯಾನ್ಮಾರ್, ಬಾಂಗ್ಲಾದೇಶ ಮತ್ತು ಭಾರತವನ್ನು ಒಟ್ಟಿಗೆ ಕಾಣಬಹುದು. ಉತ್ತರ ಭಾಗದಲ್ಲಿ ಮನ್ಶಾರಿ ತಕ್ಷಶಿಲಾ, ವಾಯುವ್ಯದಲ್ಲಿ ಪುರುಷಪುರ ಮತ್ತು ಈಶಾನ್ಯದಲ್ಲಿ ಕಾಮರೂಪದವರೆಗಿನ ಪ್ರದೇಶಗಳು ಗೋಚರಿಸುತ್ತವೆ. ಬಿಜೆಪಿ ನಾಯಕರು ಇದನ್ನು ‘ಅಖಂಡ ಭಾರತ’ ಎನ್ನುತ್ತಿದ್ದಾರೆ. ನೀವು ಭಾರತದ ಪ್ರಾಚೀನ ಇತಿಹಾಸವನ್ನು ನೋಡಿದರೆ, ಈ ನಕ್ಷೆಯು ತಪ್ಪಾಗಿಲ್ಲ. ಏಕೆಂದರೆ, ಮೊದಲು ಪಾಕಿಸ್ತಾನ, ಬಾಂಗ್ಲಾದೇಶ, ಮಾಲ್ಡೀವ್ಸ್, ಮ್ಯಾನ್ಮಾರ್ ಮತ್ತು ಅಫ್ಘಾನಿಸ್ತಾನ ಎಂಬ ಹೆಸರಿನ ದೇಶಗಳು ಇರಲಿಲ್ಲ. ಅವುಗಳನ್ನು ಕಳೆದ 1000 ವರ್ಷಗಳಲ್ಲಿ ಸ್ಥಾಪಿಸಲಾಯಿತು. ಮತ್ತು, ಪಾಕಿಸ್ತಾನ-ಬಾಂಗ್ಲಾದೇಶ ರಚನೆಯಾಗಿ 100 ವರ್ಷಗಳೇ ಇನ್ನೂ ಗತಿಸಿಲ್ಲ.

ಇದನ್ನೂ ಓದಿ-Mass Marriage: ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಧುವಿನ ಮೇಕ್ ಅಪ್ ಬಾಕ್ಸ್ ನಲ್ಲಿ ಪತ್ತೆಯಾದ ಕಾಂಡೋಮ್, ಸಿಡಿಮಿಡಿಗೊಂಡ ಕಾಂಗ್ರೆಸ್

ಚೀನಾ ಬೆಂಬಲಿಸುವ ನೇಪಾಳದ ಮಾಜಿ ಪ್ರಧಾನಿ ಒಲಿ ಕೂಡ ಕಿಡಿಕಾರಿದ್ದಾರೆ
'ಅಖಂಡ ಭಾರತ' ಕುರಿತು ಬಿಜೆಪಿ ನಾಯಕರ ಕೆಲವು ಹೇಳಿಕೆಗಳ ನಂತರ, ಸಂಸತ್ತಿನಲ್ಲಿ ಸ್ಥಾಪಿಸಲಾದ ಈ ಮ್ಯೂರಲ್ ಆರ್ಟ್ ಇದೀಗ ವಿವಾದಕ್ಕೆ ಸಿಲುಕಿದೆ. ನೇಪಾಳದ ಮಾಜಿ ಪ್ರಧಾನಿ ಬಾಬುರಾಮ್ ಭಟ್ಟರೈ ಇದನ್ನು ಪ್ರಶ್ನಿಸಿದ್ದು, ಭಾರತವು ತನ್ನ ಉದ್ದೇಶವನ್ನು ವ್ಯಕ್ತಪಡಿಸಬೇಕು ಮತ್ತು ನಮಗೆ ಸ್ಪಷ್ಟೀಕರಣವನ್ನು ಕಳುಹಿಸಬೇಕು ಎಂದು ಹೇಳಿದ್ದಾರೆ. ಇನ್ನೊಂದೆಡೆ ನೇಪಾಳದ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ಅವರು ಈ  ಚಿತ್ರವನ್ನು ನೋಡಿದ ನಂತರ ಕೆರಳಿದ್ದಾರೆ. ಚಿತ್ರದ ಕುರಿತು ತನ್ನ ಪ್ರತಿಕ್ರಿಯೆ ನೀಡಿರುವ ಒಲಿ ಭಾರತದಂತಹ ದೇಶವು ತನ್ನನ್ನು ತಾನು ಪ್ರಾಚೀನ ಮತ್ತು ಸ್ಥಾಪಿತ ದೇಶವೆಂದು ಮತ್ತು ಪ್ರಜಾಪ್ರಭುತ್ವದ ಮಾದರಿ ಎಂದು ನೋಡುತ್ತದೆ, ನೇಪಾಳಿ ಪ್ರದೇಶಗಳನ್ನು ತನ್ನ ನಕ್ಷೆಯಲ್ಲಿ ಇರಿಸುತ್ತದೆ ಮತ್ತು ಸಂಸತ್ತಿನಲ್ಲಿ ನಕ್ಷೆಯನ್ನು ನೇತುಹಾಕುತ್ತದೆ, ಇದನ್ನು ಸೂಕ್ತವೆಂದು ಪರಿಗಣಿಸಲಾಗುವುದಿಲ್ಲ. ನಮ್ಮ ಪ್ರಧಾನಿ ಪ್ರಚಂಡ ಅವರು ಭಾರತಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಭಾರತದಿಂದ ಈ ಬಗ್ಗೆ ಸ್ಪಷ್ಟೀಕರಣವನ್ನು ಪಡೆಯಬೇಕು ಎಂದು ನಾನು ಒತ್ತಾಯಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ-Delhi Politics: ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಭೇಟಿಯಾದ ಅರವಿಂದ್ ಕೆಜ್ರೀವಾಲ್

'ಅಖಂಡ ಭಾರತ'ದ ತಕ್ಷಶಿಲೆ ಇಂದು ಪಾಕಿಸ್ತಾನದಲ್ಲಿದೆ
ಭಾರತವನ್ನು ವಿಭಜಿಸುವ ಮೂಲಕ 1947 ಆಗಸ್ಟ್ 14 ರಂದು ಪಾಕಿಸ್ತಾನವನ್ನು ರಚಿಸಲಾಯಿತು. ಇದಕ್ಕೂ ಮೊದಲು ಇಡೀ ಪ್ರದೇಶ ಭಾರತದ ಭಾಗವಾಗಿತ್ತು. ಆದ್ದರಿಂದ, ಭಾರತೀಯ ಸಂಸತ್ತಿನಲ್ಲಿನ ಮ್ಯೂರಲ್ ಆರ್ಟ್‌ನಲ್ಲಿ, ಪ್ರಾಚೀನ ಕಾಲದಲ್ಲಿ 'ಅಖಂಡ ಭಾರತ'ದ ಭಾಗವಾಗಿದ್ದ ತಕ್ಷಿಲಾ, ಮನ್ಸೆಹ್ರಾ, ಸಿಂಧು, ಪುರುಷಪುರ, ಉತ್ತರಾಪಥ್ ಮುಂತಾದ ಇಂದಿನ ಪಾಕಿಸ್ತಾನದ ಅನೇಕ ಪ್ರದೇಶಗಳನ್ನು ತೋರಿಸಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News