Airbag mandatory: ಏಪ್ರಿಲ್ 1 ರಿಂದ ಇನ್ನೂ ಸುರಕ್ಷಿತವಾಗಲಿದೆ ನಿಮ್ಮ ಕಾರಿನ ಪ್ರಯಾಣ

ಕಾರಿನಲ್ಲಿರುವ ಏರ್‌ಬ್ಯಾಗ್ ಅಪಘಾತದ ಸಮಯದಲ್ಲಿ ಕಾರಿನ ಚಾಲಕ ಮತ್ತು ಚಾಲಕನ ಪಕ್ಕದಲ್ಲಿ ಕುಳಿತ ಪ್ರಯಾಣಿಕರ ಜೀವನವನ್ನು ಉಳಿಸುತ್ತದೆ.  

Written by - Yashaswini V | Last Updated : Mar 4, 2021, 08:05 PM IST
  • ಭಾರತ ಸರ್ಕಾರವು ಕಾರಿನ ಮುಂಭಾಗದಲ್ಲಿ ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಲಿದೆ
  • ಕಾರಿನಲ್ಲಿ ಏರ್‌ಬ್ಯಾಗ್ ಏಕೆ ಮುಖ್ಯವಾಗಿದೆ?
  • ಏರ್‌ಬ್ಯಾಗ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂದು ತಿಳಿಯಿರಿ
Airbag mandatory: ಏಪ್ರಿಲ್ 1 ರಿಂದ ಇನ್ನೂ ಸುರಕ್ಷಿತವಾಗಲಿದೆ ನಿಮ್ಮ ಕಾರಿನ ಪ್ರಯಾಣ title=
Airbags mandatory in Car

ನವದೆಹಲಿ: Airbag mandatory: ಭಾರತ ಸರ್ಕಾರವು ಕಾರಿನ ಮುಂಭಾಗದಲ್ಲಿ ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಲಿದೆ. ಕಾರಿನಲ್ಲಿ ಪ್ರಯಾಣಿಸುವ ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರ ತೆಗೆದುಕೊಳ್ಳಲಿದೆ. ಮುಂಭಾಗದ ಏರ್‌ಬ್ಯಾಗ್‌ಗಳ ಅಧಿಸೂಚನೆಗೆ ಅನುಮೋದನೆ ನೀಡುವ ಬಗ್ಗೆ ಸಾರಿಗೆ ಸಚಿವಾಲಯ ಕಾನೂನು ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸಿತ್ತು. ಸಾರಿಗೆ ಸಚಿವಾಲಯದ ಈ ಪ್ರಸ್ತಾಪಕ್ಕೆ ಕಾನೂನು ಸಚಿವಾಲಯ ತನ್ನ ಒಪ್ಪಿಗೆ ನೀಡಿದೆ ಎನ್ನಲಾಗಿದೆ. ಈಗ ಶೀಘ್ರದಲ್ಲೇ ಈ ಪ್ರಸ್ತಾಪವನ್ನು ಅಂತಿಮಗೊಳಿಸಿ ಸಾರ್ವಜನಿಕಗೊಳಿಸಲಾಗುವುದು ಎಂದು ನಂಬಲಾಗಿದೆ.

ಆಗಸ್ಟ್ 31 ರೊಳಗೆ ಏರ್‌ಬ್ಯಾಗ್‌ ಕಡ್ಡಾಯವಾಗಲಿದೆ  (Airbag mandatory) :
ಅಧಿಸೂಚನೆಯ ಪ್ರಕಾರ, ಈ ವರ್ಷ ಆಗಸ್ಟ್ 31 ರೊಳಗೆ ರಸ್ತೆಯಲ್ಲಿ ಚಲಿಸುವ ಕಾರುಗಳಲ್ಲಿ ಏರ್‌ಬ್ಯಾಗ್ ಕಡ್ಡಾಯವಾಗಿರುತ್ತದೆ. ಈ ನಿಯಮವು ಏಪ್ರಿಲ್ 1 ರಿಂದ ಹೊಸ ಮಾದರಿಯ ಕಾರುಗಳಿಗೆ ಈ ನಿಯಮ ಅನ್ವಯಿಸುತ್ತದೆ ಎನ್ನಲಾಗಿದೆ.

ಉನ್ನತ ಮಾದರಿಗಳು ಕಾರಿನಲ್ಲಿ ಏರ್‌ಬ್ಯಾಗ್‌ಗಳನ್ನು ಹೊಂದಿವೆ (Top models have airbags in car) :
ಈಗ ಹೆಚ್ಚಿನ ಕಾರು ತಯಾರಕರು ಉನ್ನತ ಮಾದರಿ ಕಾರುಗಳಲ್ಲಿ ಏರ್‌ಬ್ಯಾಗ್‌ಗಳನ್ನು ಅಳವಡಿಸಲಾಗಿದೆ.  ಆದಾಗ್ಯೂ, ಹೆಚ್ಚಿನ ಕಾರುಗಳಲ್ಲಿ, ಡ್ರೈವರ್ ಸೀಟಿನಲ್ಲಿ ಮಾತ್ರ ಏರ್‌ಬ್ಯಾಗ್‌ (Airbag) ಅಳವಡಿಸಲಾಗಿದೆ. ಇದೀಗ ಮುಂಭಾಗದಲ್ಲಿ ಚಾಲಕನೊಂದಿಗೆ ಕುಳಿತುಕೊಳ್ಳುವ ಪ್ರಯಾಣಿಕರಿಗೂ ಏರ್‌ಬ್ಯಾಗ್‌ಗಳು ಕಡ್ಡಾಯವಾಗುತ್ತಿವೆ.

ಇದನ್ನೂ ಓದಿ - ಪೆಟ್ರೋಲ್, ಡೀಸೆಲ್, ವಿದ್ಯುತ್ ಅಲ್ಲ, ಸೌರಶಕ್ತಿಯಿಂದ ಚಲಿಸುವ ಕಾರುಗಳು, ಇದು ಸರ್ಕಾರದ ಯೋಜನೆ

ಏರ್‌ಬ್ಯಾಗ್ ತಯಾರಕ ಕಂಪನಿಗಳಿಗೆ ಅನುಕೂಲ (Advantage of air bag manufacturers) :
ಸರ್ಕಾರದ ಈ ನಿರ್ಧಾರವು ಏರ್‌ಬ್ಯಾಗ್‌ಗಳನ್ನು ಹೆಚ್ಚು ತಯಾರಿಸುವ ಕಂಪನಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ರಾಣೆ ಮದ್ರಾಸ್ ಕಂಪನಿ ಭಾರತದ ಅತಿದೊಡ್ಡ ಏರ್‌ಬ್ಯಾಗ್ ತಯಾರಕ. ಅಂತರರಾಷ್ಟ್ರೀಯ ಕಂಪನಿ ಬಾಷ್ ಕೂಡ ದೊಡ್ಡ ಪ್ರಮಾಣದಲ್ಲಿ ಏರ್‌ಬ್ಯಾಗ್‌ಗಳನ್ನು ಉತ್ಪಾದಿಸುತ್ತದೆ. ಸರ್ಕಾರದ ಈ ನಿರ್ಧಾರದಿಂದ ಈ ಕಂಪನಿಗಳು ಹೆಚ್ಚಿನ ಲಾಭ ಪಡೆಯುತ್ತವೆ ಎಂದು ನಿರೀಕ್ಷಿಸಲಾಗಿದೆ.

ಏರ್‌ಬ್ಯಾಗ್ ಏಕೆ ಮುಖ್ಯವಾಗಿದೆ? (Why airbag is important) :
ಕಾರಿನಲ್ಲಿರುವ ಏರ್‌ಬ್ಯಾಗ್ ಅಪಘಾತದಲ್ಲಿ ಚಾಲಕನ ಜೀವನವನ್ನು ಮತ್ತು ಚಾಲಕನ ಪಕ್ಕದಲ್ಲಿ ಕುಳಿತ ಪ್ರಯಾಣಿಕರ ಜೀವಕ್ಕೆ ರಕ್ಷಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ. ಕಾರು ವಾಹನ ಅಥವಾ ಎಲ್ಲೇ ಡಿಕ್ಕಿ ಹೊಡೆದ ಕೂಡಲೇ ಏರ್‌ಬ್ಯಾಗ್‌ಗಳು ಬಲೂನಿನಂತೆ ತೆರೆದುಕೊಳ್ಳುತ್ತವೆ ಮತ್ತು ಕಾರಿನಲ್ಲಿರುವವರು ಡ್ಯಾಶ್‌ಬೋರ್ಡ್ ಅಥವಾ ಕಾರಿನ ಸ್ಟೀರಿಂಗ್‌ಗೆ ಬಡಿದು ಪ್ರಾಣ ಕಳೆದುಕೊಳ್ಳುವುದಿಲ್ಲ. ಅಪಘಾತದ ಸಮಯದಲ್ಲಿ ಪ್ರಯಾಣಿಕರ ತಲೆ ಡ್ಯಾಶ್‌ಬೋರ್ಡ್ ಅಥವಾ ಕಾರಿನ (Car) ಸ್ಟೀರಿಂಗ್‌ಗೆ ಬಡಿದ ಕಾರಣ ಸ್ಥಳದಲ್ಲೇ ಸಾವನ್ನಪ್ಪುತ್ತಾರೆ.

ಇದನ್ನೂ ಓದಿ - Electric Vehicle Battery: ಕೇವಲ 15 ನಿಮಿಷಗಳಲ್ಲಿ ಚಾರ್ಜ್ ಆಗುತ್ತೆ ನಿಮ್ಮ ವಾಹನ

ಏರ್‌ಬ್ಯಾಗ್‌ಗಳನ್ನು ಹತ್ತಿಯಿಂದ ತಯಾರಿಸಲಾಗುತ್ತದೆ, ಅವುಗಳನ್ನು ಸಿಲಿಕಾನ್‌ನಿಂದ ಲೇಪಿಸಲಾಗುತ್ತದೆ. ಏರ್‌ಬ್ಯಾಗ್‌ ಒಳಗೆ, ಸೋಡಿಯಂ ಅಜೈಡ್ ಅನಿಲದಿಂದ ತುಂಬಿರುತ್ತದೆ.

ಏರ್‌ಬ್ಯಾಗ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ?
ಕಾರಿನ ಬಂಪ್‌ನಲ್ಲಿ ಸಂವೇದಕವನ್ನು ಸ್ಥಾಪಿಸಲಾಗಿದೆ. ಕಾರು ಏನನ್ನಾದರೂ ಡಿಕ್ಕಿ ಹೊಡೆದ ತಕ್ಷಣ, ಪ್ರವಾಹವು ಸಂವೇದಕದಿಂದ ಏರ್‌ಬ್ಯಾಗ್‌ ವ್ಯವಸ್ಥೆಯನ್ನು ತಲುಪುತ್ತದೆ ಮತ್ತು ಏರ್‌ಬ್ಯಾಗ್‌ ಒಳಗೆ ಸೋಡಿಯಂ ಅಜೈಡ್ (sodium azide) ಅನಿಲ ತುಂಬುತ್ತದೆ. ಕರೆಂಟ್ ಕಂಡುಬಂದ ತಕ್ಷಣ, ಅದು ಗ್ಯಾಸ್ ಬಲೂನ್ ಆಗಿ ಬದಲಾಗುತ್ತದೆ. ಏರ್‌ಬ್ಯಾಗ್‌ಗಳು ತೆರೆಯಲು ಒಂದು ಸೆಕೆಂಡಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News