Air Pollution: ದೆಹಲಿಯಲ್ಲಿ ಬೆಳಗಿನ ವಾಯುವಿಹಾರ ಮಾಡದಿರಿ, ಹವಾಮಾನ ಇಲಾಖೆ ಎಚ್ಚರಿಕೆ

ದೆಹಲಿಯಲ್ಲಿ ಮಾಲಿನ್ಯ ಮಟ್ಟ ಮತ್ತು ತಾಪಮಾನದಲ್ಲಿನ ಬದಲಾವಣೆಯಿಂದಾಗಿ, ಹವಾಮಾನ ಇಲಾಖೆಯು ಬೆಳಗಿನ ವಾಯುವಿಹಾರ ಮಾಡದಂತೆ ಜನರಿಗೆ ಸೂಚನೆ ನೀಡಿದೆ.

Last Updated : Nov 21, 2018, 07:01 PM IST
Air Pollution: ದೆಹಲಿಯಲ್ಲಿ ಬೆಳಗಿನ ವಾಯುವಿಹಾರ ಮಾಡದಿರಿ, ಹವಾಮಾನ ಇಲಾಖೆ ಎಚ್ಚರಿಕೆ title=
Pic: ANI

ನವದೆಹಲಿ: ರಾಷ್ಟ್ರ ರಾಜಧಾನಿಗೆ ಪ್ರವಾಸ ಕೈಗೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ ಒಮ್ಮೆ ಈ ಸುದ್ದಿ ಓದಿ. ದೆಹಲಿಯಲ್ಲಿ ಮಾಲಿನ್ಯ ಮಟ್ಟ ಮತ್ತು ತಾಪಮಾನದಲ್ಲಿನ ಬದಲಾವಣೆಯಿಂದಾಗಿ, ಹವಾಮಾನ ಇಲಾಖೆಯು ಬೆಳಗಿನ ವಾಯುವಿಹಾರ ಮಾಡದಂತೆ ಜನರಿಗೆ ಸೂಚನೆ ನೀಡಿದೆ. ದೆಹಲಿಯಲ್ಲಿ ವಾಯುಮಾಲಿನ್ಯ ನಿರಂತರವಾಗಿ ಹೆಚ್ಚಾಗುತ್ತಿರುವುದರಿಂದ ಹವಾಮಾನ ಇಲಾಖೆ ಈ ಎಚ್ಚರಿಕೆಯನ್ನು ನೀಡಿದೆ.

ಪ್ರಸ್ತುತ, ಅನಿಲದ ಗುಣಮಟ್ಟ ಸೂಚ್ಯಂಕವು ನಿರ್ಣಾಯಕ ಮಟ್ಟಕ್ಕಿಂತ ಕೇವಲ 10 ಪಾಯಿಂಟ್ ಮಾತ್ರ ಕೆಳಸ್ಥರದಲ್ಲಿದೆ. ಇದು ದೆಹಲಿಯ ಜನರಿಗೆ ಒಂದು ಪ್ರಮುಖ ಸವಾಲಾಗಿದೆ. ವಿಶೇಷವಾಗಿ ಬೆಳಿಗಿನ ಸಮಯದಲ್ಲಿ, ತೇವಾಂಶದ ಮಟ್ಟ ಕೂಡಾ 93% ಕ್ಕೆ ಏರಿರುವುದರಿಂದ ಮಾಲಿನ್ಯಕಾರಕಗಳನ್ನು ಚದುರಿಸಲು ಕಷ್ಟವಾಗುತ್ತದೆ.
ಬೆಳಿಗ್ಗೆ, ದೆಹಲಿಯ 37 ಪ್ರದೇಶಗಳಲ್ಲಿನ ಮಾಲಿನ್ಯಕಾರಕ ಕಣಗಳ ಸರಾಸರಿ ಉಪಸ್ಥಿತಿಯು 'ನಿರ್ಣಾಯಕ' ಮಟ್ಟದಲ್ಲಿತ್ತು. ಅಂತೆಯೇ, ತೆರೆದ ಗಾಳಿಯಲ್ಲಿ ಯಾವುದೇ ರೀತಿಯ ವ್ಯಾಯಾಮ ಮಾಡುವುದರಿಂದ ಸಹ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಪ್ರಕಾರ, ಕಳೆದ 24 ಗಂಟೆಗಳಲ್ಲಿ ರಾಜಧಾನಿಯಲ್ಲಿ ಕನಿಷ್ಠ ತಾಪಮಾನ ಕುಸಿದಿದೆ. ಬುಧವಾರ ತಾಪಮಾನವು 12.4 ಡಿಗ್ರಿ ಸೆಲ್ಷಿಯಸ್ನಲ್ಲಿ ದಾಖಲಾಗಿದೆ. ಈ ಋತುವಿನ ಸರಾಸರಿ ತಾಪಮಾನವು ಮಂಗಳವಾರ ಉಷ್ಣಾಂಶ 13.5 ಡಿಗ್ರಿ ಸೆಲ್ಷಿಯಸ್ ಆಗಿತ್ತು. ಅಲ್ಲದೆ, ಗರಿಷ್ಟ ಉಷ್ಣತೆಯು ಸುಮಾರು 28 ಡಿಗ್ರಿ ಸೆಲ್ಷಿಯಸ್ ಆಗಿತ್ತು.

Trending News