'Soorya Namaskar' ವಿರುದ್ಧ ಹೋರಾಟಕ್ಕಿಳಿದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಹೇಳಿದ್ದೇನು?

AIMPLB Opposes Surya Namaskar: ಮಕ್ಕಳಿಗೆ ಸೂರ್ಯ ನಮಸ್ಕಾರ ಮಾಡಲು ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ. ಇಸ್ಲಾಂನಲ್ಲಿ ಸೂರ್ಯನನ್ನು ಪೂಜಿಸುವುದಿಲ್ಲ.

Written by - Nitin Tabib | Last Updated : Jan 4, 2022, 01:31 PM IST
  • ಬಹುಸಂಖ್ಯಾತರ ಅಭಿಪ್ರಾಯವನ್ನು ಹೇರಲು ಪ್ರಯತ್ನಿಸಲಾಗುತ್ತಿದೆ - AIMPLB
  • ದೇಶಭಕ್ತಿಯನ್ನು ಹೆಚ್ಚಿಸಲು ಇತರ ಮಾರ್ಗಗಳಿವೆ - AIMPLB
  • ಹೆಚ್ಚುತ್ತಿರುವ ಹಣದುಬ್ಬರದ ಮೇಲೆ ಸರ್ಕಾರ ಗಮನಹರಿಸಬೇಕು - AIMPLB
'Soorya Namaskar' ವಿರುದ್ಧ ಹೋರಾಟಕ್ಕಿಳಿದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಹೇಳಿದ್ದೇನು? title=
AIMPLB Opposes Surya Namaskar (File Photo)

ನವದೆಹಲಿ: AIMPLB Opposes Surya Namaskar - ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ಸೂರ್ಯ ನಮಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದೆ. AIMPLB ಪ್ರಕಾರ, ಸ್ವಾತಂತ್ರ್ಯದ 75 ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ಜನವರಿ 1 ರಿಂದ 7 ರವರೆಗೆ ಶಾಲೆಗಳಲ್ಲಿ ಸೂರ್ಯ ನಮಸ್ಕಾರವನ್ನು ನಡೆಸಬೇಕು (Surya Namaskar In Schools) ಎಂದು ಸರ್ಕಾರ (BJP) ಸೂಚನೆಗಳನ್ನು ನೀಡಿದೆ. ಈ ಕುರಿತು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಸೂರ್ಯ ನಮಸ್ಕಾರವು ಸೂರ್ಯನನ್ನು (Soorya Namaskar) ಆರಾಧಿಸುವ ಒಂದು ಮಾರ್ಗವಾಗಿದೆ ಮತ್ತು ಇಸ್ಲಾಂ ಅದನ್ನು ಅನುಮತಿಸುವುದಿಲ್ಲ ಎಂದು ಹೇಳಿದೆ.

ಸಂವಿಧಾನವನ್ನು ನೆನಪಿಸಿದ AIMPLB 
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ (All India Muslim Personal Law Board)  ಪ್ರಧಾನ ಕಾರ್ಯದರ್ಶಿ ಮೌಲಾನಾ ಖಾಲಿದ್ ಸೈಫುಲ್ಲಾ ರಹಮಾನಿ ಮಾತನಾಡಿ, ಭಾರತವು ಜಾತ್ಯತೀತ, ಬಹುಧರ್ಮೀಯ ಮತ್ತು ಬಹು ಸಂಸ್ಕೃತಿಯ ದೇಶವಾಗಿದೆ ಮತ್ತು ಇದೇ ತತ್ವಗಳ ಆಧಾರದ ಮೇಲೆ ನಮ್ಮ ಸಂವಿಧಾನವನ್ನು ಬರೆಯಲಾಗಿದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ನಿರ್ದಿಷ್ಟ ಧರ್ಮದ ಬೋಧನೆಗಳನ್ನು ಕಲಿಸಲು ಅಥವಾ ನಿರ್ದಿಷ್ಟ ಗುಂಪಿನ ನಂಬಿಕೆಗಳ ಆಧಾರದ ಮೇಲೆ ಆಚರಣೆಗಳನ್ನು ಆಯೋಜಿಸಲು ಸಂವಿಧಾನವು ನಮಗೆ ಅನುಮತಿಸುವುದಿಲ್ಲ ಎಂದು ಮಂಡಳಿ ಹೇಳಿದೆ.

ಸರ್ಕಾರ ಜಾತ್ಯತೀತತೆಯಿಂದ ವಿಮುಖವಾಗುತ್ತಿದೆ - AIMPLB
ಈ ಕುರಿತು ಮಾತನಾಡಿರುವ ಮೌಲಾನಾ ಖಾಲಿದ್ ಸೈಫುಲ್ಲಾ ರಹಮಾನಿ, ಪ್ರಸ್ತುತ ದೇಶದಲಿರುವ ಸರಕಾರ ಜಾತ್ಯತೀತ ತತ್ವದಿಂದ ದೂರ ಸರಿದು ಬಹುಸಂಖ್ಯಾತ ಸಮುದಾಯದ ಚಿಂತನೆ, ಸಂಪ್ರದಾಯವನ್ನು ದೇಶದ ಎಲ್ಲ ವರ್ಗಗಳ ಮೇಲೆ ಹೇರಲು ಯತ್ನಿಸುತ್ತಿದೆ. 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಭಾರತ ಸರ್ಕಾರದ ಕಾರ್ಯದರ್ಶಿ ಅಡಿಯಲ್ಲಿ, ಶಿಕ್ಷಣ ಸಚಿವಾಲಯವು ರಾಜ್ಯಗಳಲ್ಲಿ ಸೂರ್ಯ ನಮಸ್ಕಾರ ಯೋಜನೆಯನ್ನು ನಡೆಸಲು ನಿರ್ಧರಿಸಲಾಗಿದೆ. ಇದರಲ್ಲಿ 30 ಸಾವಿರ ಶಾಲೆಗಳು ಮೊದಲ ಹಂತದ ವ್ಯಾಪ್ತಿಗೆ ಬರುತ್ತವೆ.ಈ ಕಾರ್ಯಕ್ರಮವನ್ನು (Surya Namaskar Program) ಜನವರಿ 1 ರಿಂದ ಜನವರಿ 7 ರವರೆಗೆ ಪ್ರಸ್ತಾಪಿಸಲಾಗಿದೆ. ಜನವರಿ 26 ರಂದು ಸೂರ್ಯ ನಮಸ್ಕಾರದ ಕುರಿತು ಸಂಗೀತ ಕಾರ್ಯಕ್ರಮವನ್ನು ಸಹ ಯೋಜಿಸಲಾಗಿದೆ. ಇದು ಸಂವಿಧಾನ ವಿರೋಧಿ ಮತ್ತು ದೇಶಭಕ್ತಿಯ ಸುಳ್ಳು ಪ್ರಚಾರವಾಗಿದೆ ಎಂದು ಮಂಡಳಿ ಹೇಳಿದೆ.

ಸೂರ್ಯ ನಮಸ್ಕಾರವು ಸೂರ್ಯನನ್ನು ಪೂಜಿಸುವುದಾಗಿದೆ - AIMPLB
ಸೂರ್ಯ ನಮಸ್ಕಾರವು ಸೂರ್ಯನ ಆರಾಧನೆಯ ಒಂದು ರೂಪವಾಗಿದೆ ಎಂದು ಅವರು ಹೇಳಿದ್ದಾರೆ. ಇಸ್ಲಾಂ ಮತ್ತು ದೇಶದ ಇತರ ಅಲ್ಪಸಂಖ್ಯಾತರು ಸೂರ್ಯನನ್ನು ದೇವರೆಂದು ಪರಿಗಣಿಸುವುದಿಲ್ಲ ಅಥವಾ ಅವರ ಪೂಜೆಯನ್ನು ಮಾಡುವುದಿಲ್ಲ, ಆದ್ದರಿಂದ ಅಂತಹ ಸೂಚನೆಗಳನ್ನು ಹಿಂತೆಗೆದುಕೊಳ್ಳುವುದು ಮತ್ತು ದೇಶದ ಜಾತ್ಯತೀತ ಮೌಲ್ಯಗಳನ್ನು ಗೌರವಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಮಂಡಳಿ ಪ್ರತಿಪಾದಿಸಿದೆ.

ಇದನ್ನೂ ಓದಿ-Omicron: ಓಮಿಕ್ರಾನ್ ನಿಮ್ಮ ಶತ್ರುವಲ್ಲ! ಕರೋನಾವನ್ನು ತೊಡೆದುಹಾಕಲು ನೈಸರ್ಗಿಕ ಲಸಿಕೆ!

ಸರ್ಕಾರ ನೈಜ ಸಮಸ್ಯೆಗಳತ್ತ ಗಮನಹರಿಸಬೇಕು- AIMPLB
ಮುಂದುವರೆದು ಮಾತನಾಡಿರುವ ಮೌಲಾನಾ ಖಾಲಿದ್ ಸೈಫುಲ್ಲಾ ರಹಮಾನಿ, ಸರ್ಕಾರ ಬಯಸಿದರೆ ರಾಷ್ಟ್ರಗೀತೆಯನ್ನು ಪಠಿಸಿ ದೇಶಭಕ್ತಿಯ ಭಾವನೆ ಮೂಡಿಸಬೇಕು. ದೇಶವನ್ನು ಪ್ರೀತಿಸುವ ಹಕ್ಕನ್ನು ಸರ್ಕಾರ ಬಯಸುತ್ತಿದ್ದರೆ, ಅದು ದೇಶದ ನಿಜವಾದ ಸಮಸ್ಯೆಗಳತ್ತ ಗಮನ ಹರಿಸಬೇಕು. ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಗಮನ ಹರಿಸಬೇಕು. ಪರಸ್ಪರ ದ್ವೇಷದ ನಿರಂತರ ಮಾರಾಟ ಮತ್ತು ದೇಶದ ಗಡಿಗಳನ್ನು ರಕ್ಷಿಸುವಲ್ಲಿ ವಿಫಲತೆ ಇವು ನಿಜವಾದ ಸಮಸ್ಯೆಗಳಾಗಿವೆ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ-Bangalore Lockdown:ಕೊರೊನಾ 3ನೇ ಅಲೆಯ ಬಲೆಯೊಳಗೆ ಬೆಂಗಳೂರು! ಲಾಕ್ ಆಗೋದು ಫಿಕ್ಸ್!?

ಸೂರ್ಯ ನಮಸ್ಕಾರದಂತಹ ಕಾರ್ಯಕ್ರಮಗಳಲ್ಲಿ ಮುಸ್ಲಿಂ ಮಕ್ಕಳು ಭಾಗವಹಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಮತ್ತು ಅದನ್ನು ತಪ್ಪಿಸುವುದು ಅವಶ್ಯಕ ಎಂದು ಅವರು ಈ ಸಂದರ್ಭದಲ್ಲಿ ಒತ್ತಿ ಹೇಳಿದ್ದಾರೆ. 

ಇದನ್ನೂ ಓದಿ-Omicron Testing Kit: Omicron ಟೆಸ್ಟ್ ಗೆ ಬಂತು ಮೊದಲ ಕಿಟ್, ICMRನಿಂದ ಅನುಮೋದನೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News