ಕೆಪಿಸಿಸಿ ಘಟಕ ವಿಸರ್ಜಿಸಿದ ಕಾಂಗ್ರೆಸ್ ಹೈಕಮಾಂಡ್; ಪ್ರಮುಖ ನಾಯಕರಿಗೆ ಕೊಕ್

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ  ಹೀನಾಯ ಸೋಲನ್ನು ಅನುಭವಿಸಿದ ಹಿನ್ನಲೆಯಲ್ಲಿ ಈಗ  ಹೈಕಮಾಂಡ್ ಕೆಪಿಸಿಸಿ ಘಟಕವನ್ನು ವಿಸರ್ಜಿಸಿದೆ. ಆ ಮೂಲಕ ಈಗ ರಾಜ್ಯ ಕಾಂಗ್ರೆಸ್ ಗೆ ಹೊಸ ರೂಪ ನೀಡಲು ಮುಂದಾಗಿದೆ.

Last Updated : Jun 19, 2019, 02:35 PM IST
 ಕೆಪಿಸಿಸಿ ಘಟಕ ವಿಸರ್ಜಿಸಿದ ಕಾಂಗ್ರೆಸ್ ಹೈಕಮಾಂಡ್; ಪ್ರಮುಖ ನಾಯಕರಿಗೆ ಕೊಕ್   title=

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ  ಹೀನಾಯ ಸೋಲನ್ನು ಅನುಭವಿಸಿದ ಹಿನ್ನಲೆಯಲ್ಲಿ ಈಗ  ಹೈಕಮಾಂಡ್ ಕೆಪಿಸಿಸಿ ಘಟಕವನ್ನು ವಿಸರ್ಜಿಸಿದೆ. ಆ ಮೂಲಕ ಈಗ ರಾಜ್ಯ ಕಾಂಗ್ರೆಸ್ ಗೆ ಹೊಸ ರೂಪ ನೀಡಲು ಮುಂದಾಗಿದೆ.

ಎಐಸಿಸಿ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಈ ಕುರಿತು ಆದೇಶ ಹೊರಡಿಸಿರುವ ಪಕ್ಷವು ಹಾಲಿ ಇರುವ ಘಟಕವನ್ನು ವಿಸರ್ಜಿಸಲಾಗಿದೆ.ಆದರೆ ಅಧ್ಯಕ್ಷ ಹಾಗೂ  ಕಾರ್ಯಾಧ್ಯಕ್ಷರಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ ಎಂದು ಅದು ಹೇಳಿದೆ.ಈಗ ಹೈಕಮಾಂಡ್ ನಿರ್ಧಾರರಿಂದಾಗಿ ರಾಜ್ಯ ಕಾಂಗ್ರೆಸ್ ನಲ್ಲಿನ ಹಲವರು ನಾಯಕರಿಗೆ ಕೊಕ್ ಬಿಳಲಿದೆ ಎನ್ನಲಾಗಿದೆ. 

ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ಕೆ.ಸಿ.ವೇಣುಗೋಪಾಲ್​ ಹೊರಡಿಸಿರುವ ಈ ಪತ್ರದಲ್ಲಿ  ಅವರು ಕೆಪಿಸಿಸಿ ಸಮಿತಿ ವಿಸರ್ಜಿಸಿ, ಹೊಸ ಪದಾಧಿಕಾರಿಗಳ ನೇಮಕ ಮಾಡುವುದಾಗಿ ತಿಳಿಸಿದ್ದಾರೆ.  

Trending News