ಉಪಚುನಾವಣೆ: ತಮಿಳುನಾಡಿನ 2 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಿಸಿದ ಎಐಎಡಿಎಂಕೆ

ತಮಿಳುನಾಡಿನ ಈ ಎರಡೂ ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21 ರಂದು ಉಪಚುನಾವಣೆ ನಡೆಯಲಿದ್ದು, ಅ.24ರಂದು ಫಲಿತಾಂಶ ಹೊರಬೀಳಲಿದೆ.

Last Updated : Sep 25, 2019, 12:57 PM IST
ಉಪಚುನಾವಣೆ: ತಮಿಳುನಾಡಿನ 2 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಿಸಿದ ಎಐಎಡಿಎಂಕೆ title=

ಚೆನ್ನೈ: ತಮಿಳುನಾಡಿನ ವಿಕ್ರವಂಡಿ ಮತ್ತು ನಂಗುನೇರಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಎಐಎಡಿಎಂಕೆ ಬುಧವಾರ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ.

ವಿಕ್ರವಂಡಿ ವಿಧಾನಸಭಾ ಕ್ಷೇತ್ರದಿಂದ ಎಂ.ಆರ್. ಮುಥಮಿಜ್ಸೆಲ್ವಂ ಮತ್ತು ನಂಗುನೇರಿ ಕ್ಷೇತ್ರದಿಂದ ರೆಡ್ಡಿಯಾರ್ಪಟ್ಟಿ ವಿ ನಾರಾಯಣನ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸುತ್ತಿರುವುದಾಗಿ ಎಐಎಡಿಎಂಕೆ ಘೋಷಿಸಿದೆ.

ತಮಿಳುನಾಡಿನ ಈ ಎರಡೂ ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21 ರಂದು ಉಪಚುನಾವಣೆ ನಡೆಯಲಿದ್ದು, ಅ.24ರಂದು ಫಲಿತಾಂಶ ಹೊರಬೀಳಲಿದೆ.

ಉಪಚುನಾವಣೆ ಬಗ್ಗೆ ಸೆ.23ರಂದು ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು, ನಾಮಪತ್ರ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. ಅಕ್ಟೋಬರ್ 1 ರಂದು ನಾಮಪತ್ರಗಳನ್ನು ಪರಿಶೀಲಿಸಲಿದ್ದು, ಅಕ್ಟೋಬರ್ 3 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.

Trending News