ಉಪಚುನಾವಣೆಗೂ ಮುನ್ನ 17 ಒಬಿಸಿ ಜಾತಿಗಳನ್ನು ಎಸ್ಸಿ ಪಟ್ಟಿಗೆ ಸೇರಿಸಿದ ಯೋಗಿ ಸರ್ಕಾರ

ಉಪ ಚುನಾವಣೆಗೂ ಮೊದಲು ಉತ್ತರಪ್ರದೇಶದಲ್ಲಿ ಯೋಗಿ ಸರ್ಕಾರ ಹಿಂದುಳಿದ ವರ್ಗಕ್ಕೆ ಸೇರಿದ 17ಜಾತಿಗಳನ್ನು ಆದಿತ್ಯನಾಥ ಸರ್ಕಾರ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ನಿರ್ದೇಶನ ಮಾಡಿದೆ.

Last Updated : Jun 29, 2019, 05:16 PM IST
 ಉಪಚುನಾವಣೆಗೂ ಮುನ್ನ 17 ಒಬಿಸಿ ಜಾತಿಗಳನ್ನು ಎಸ್ಸಿ ಪಟ್ಟಿಗೆ ಸೇರಿಸಿದ ಯೋಗಿ ಸರ್ಕಾರ title=
file photo

ನವದೆಹಲಿ: ಉಪ ಚುನಾವಣೆಗೂ ಮೊದಲು ಉತ್ತರಪ್ರದೇಶದಲ್ಲಿ ಯೋಗಿ ಸರ್ಕಾರ ಹಿಂದುಳಿದ ವರ್ಗಕ್ಕೆ ಸೇರಿದ 17ಜಾತಿಗಳನ್ನು ಆದಿತ್ಯನಾಥ ಸರ್ಕಾರ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲು ನಿರ್ದೇಶನ ಮಾಡಿದೆ.

ಈಗ ಈ ಪಟ್ಟಿಗೆ ಸೇರ್ಪಡೆಗೊಂಡಿರುವ ಜಾತಿಗಳೆಂದರೆ - ನಿಶಾದ್, ಬಿಂದ್, ಮಲ್ಲಾ, ಕೆವಾತ್, ಕಶ್ಯಪ್, ಬಿಹಾರ, ಧಿವಾರ್, ಬಾಥಮ್, ಮಚುವಾ, ಪ್ರಜಾಪತಿ, ರಾಜ್‌ಭರ್, ಕಹಾರ್, ಪೊಟಾರ್, ಧೀಮರ್, ಮಾಂಜಿ, ತುಹಾಹಾ ಮತ್ತು ಗೌರ್, ಜಾತಿಗಳನ್ನು ಸೇರಿಸಲು ನಿರ್ದೇಶನ ಮಾಡಲಾಗಿದೆ. ಆ ಮೂಲಕ 15 ವರ್ಷಗಳ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಮುಂದಾಗಿದೆ. ಇದರಿಂದ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯ ಪ್ರಯೋಜನ ಲಭ್ಯವಾಗಲಿವೆ.

ಈ ಹಿಂದೆ ಈ ಸಮಸ್ಯೆಯನ್ನು ಸ್ಥಗಿತಗೊಳಿಸಿದ್ದ ಹಲವು ಕಾನೂನು ಅಂಶಗಳನ್ನು ಕೂಡ ತೆಗೆದು ಹಾಕಲಾಗಿದೆ.ಈ ಹಿಂದೆ ಮುಲಾಯಂ ಸಿಂಗ್ ನೇತೃತ್ವದ ಸರ್ಕಾರವು ಯುಪಿ ಸಾರ್ವಜನಿಕ ಸೇವೆಗಳ ಕಾಯ್ದೆ 1994 ಕ್ಕೆ ತಿದ್ದುಪಡಿ ಮಾಡುವ ಮೂಲಕ 2004 ರಲ್ಲಿ ಮೊದಲ ಬಿಡ್ ಮಾಡಿತು. ಆದರೆ ಯಾವುದೇ  ಜಾತಿಯನ್ನು ಎಸ್‌ಸಿ ಎಂದು ಘೋಷಿಸುವ ಅಧಿಕಾರ ಕೇಂದ್ರದ ಕೈಯಲ್ಲಿರುವುದರಿಂದ ರಾಜ್ಯ ಸರ್ಕಾರದ ಪ್ರಯತ್ನ ವಿಫಲವಾಯಿತು.

ಉತ್ತರಪ್ರದೇಶದ 12 ವಿಧಾನಸಭಾ ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣೆಗೆ ಮುಂಚಿತವಾಗಿ ಈ ನಡೆಯಿಂದಾಗಿ ಬಿಜೆಪಿಗೆ ಲಾಭವಾಗಲಿದೆ ಎನ್ನಲಾಗಿದೆ

Trending News