VIDEO:ಪತ್ರಕರ್ತ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಆರೋಪಿಸಿದ ನಟಿ!

ಹಿರಿಯ ಪತ್ರಕರ್ತ ಪ್ರಕಾಶ್ ಎಂ. ಸ್ವಾಮಿಯವರನ್ನು ಕಳೆದ ಎರಡು ವರ್ಷಗಳಿಂದ ತಮಗೆ ಲೈಂಗಿಕ ಕಿರುಕುಳ ನಿಡಿದ್ದಲ್ಲದೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆಂದು ತಮಿಳು ನಟಿ ಗಾಯತ್ರಿ ಸಾಯಿ  ಫೇಸ್ಬುಕ್ನಲ್ಲಿ ನೇರ ಪ್ರಸಾರದ ಮೂಲಕ ಆರೋಪ ಮಾಡಿದ್ದಾರೆ . ಅಲ್ಲದೇ ಆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Last Updated : Sep 29, 2018, 07:23 PM IST
VIDEO:ಪತ್ರಕರ್ತ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಆರೋಪಿಸಿದ ನಟಿ! title=
Photo:facebook

ಚೆನ್ನೈ: ಹಿರಿಯ ಪತ್ರಕರ್ತ ಪ್ರಕಾಶ್ ಎಂ. ಸ್ವಾಮಿಯವರನ್ನು ಕಳೆದ ಎರಡು ವರ್ಷಗಳಿಂದ ತಮಗೆ ಲೈಂಗಿಕ ಕಿರುಕುಳ ನಿಡಿದ್ದಲ್ಲದೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆಂದು ತಮಿಳು ನಟಿ ಗಾಯತ್ರಿ ಸಾಯಿ  ಫೇಸ್ಬುಕ್ನಲ್ಲಿ ನೇರ ಪ್ರಸಾರದ ಮೂಲಕ ಆರೋಪ ಮಾಡಿದ್ದಾರೆ . ಅಲ್ಲದೇ ಆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸಾಯಿ ಅವರು ಪ್ರಕರಣವನ್ನು ದಾಖಲಿಸಲು ಪೊಲೀಸರ ಬಳಿ ತೆರಳಿದಾಗ ಎಫ್ಐಆರ್ ದಾಖಲಿಸಲು ಪೊಲೀಸರು ನಿರಾಕರಿಸಿದ್ದಾರೆ ಎಂದು ಅವರು ದೂರಿದ್ದಾರೆ.ಈ ವಿಚಾರವಾಗಿ ಪೊಲೀಸ್ ಠಾಣೆಗೆ ಮತ್ತೆ  ಭೇಟಿ ನೀಡಿದ ನಂತರ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಲು ಪೋಲಿಸ್ ಆಯುಕ್ತರ ಬಳಿ ಹೋಗಬೇಕೆಂದು ಹೇಳಿದ್ದಾರೆ ಎಂದು ನಟಿ ತಿಳಿಸಿದ್ದಾರೆ.

ಒಟ್ಟು ಎಂಟು ನಿಮಿಷಗಳ ವಿಡಿಯೋದಲ್ಲಿ, ತಮ್ಮ ಪತಿ ಹಾಂಗ್ ಕಾಂಗ್ ನಲ್ಲಿ ನಿಧನವಾದ ನಂತರ ತಮ್ಮನ್ನು ಗುರಿಯಾಗಿಸಿಕೊಂಡರು ಎಂದು ಅವರು ಆರೋಪಿಸಿದ್ದಾರೆ.ಅಲ್ಲದೆ ಮಗನ ಪಾಸ್ ಪೋರ್ಟ್ ವಿಷಯದಲ್ಲಿ ಸಹಾಯ ಮಾಡುವ ನೆಪದಲ್ಲಿ ತಮಗೆ ಕಿರುಕುಳು ನಿಡಲು ಆರಂಭಿಸಿದ್ದಾನೆ ಎಂದು ನಟಿ ದೂರಿದ್ದಾರೆ.ನಟಿ ಗಾಯತ್ರಿ ಸಾಯಿ ಹೇಳುವಂತೆ ಆ ಪತ್ರಕರ್ತನು ದೂರವಾಣಿ ಮತ್ತು ಇಂಟರ್ನೆಟ್ ಹಾಗೂ ಅವಹೇಳನಕಾರಿ WhatsApp ಸಂದೇಶಗಳನ್ನು ಕಳುಹಿಸುವ ಮೂಲಕ ತಮಗೆ ಬೆದರಿಕೆವೊಡ್ಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.

ಆದರೆ ನಟಿಯ ಆರೋಪಗಳನ್ನು ಹಿರಿಯ ಪತ್ರಕರ್ತ ಪ್ರಕಾಶ್ ಎಂ. ಸ್ವಾಮಿ ನಿರಾಕರಿಸಿದ್ದಾರೆ. ಸಹಾರಾ ಪ್ರಕರಣಕ್ಕೆ ಸಂಬಂಧಿಸಿದಂತೆ  ಅವರು ಒಂದು ತಿಂಗಳು ಜೈಲಿನಲ್ಲಿದ್ದರು.

Trending News