ನನ್ನ ಮಗನನ್ನು ಕೊಂದವರನ್ನು ಗಲ್ಲಿಗೇರಿಸಬೇಕು: ಕಮಲೇಶ್ ತಿವಾರಿ ತಾಯಿ

ಆರೋಪಿಗಳ ಬಂಧನದಿಂದ ನಮಗೆ ತುಂಬಾ ಸಂತೋಷವಾಗಿದೆ, ಅವರೆಲ್ಲರನ್ನೂ ಗಲ್ಲಿಗೇರಿಸಬೇಕು. ಸರ್ಕಾರದ ಕ್ರಮದಿಂದ ನನಗೆ ತೃಪ್ತಿ ಇದೆ ಎಂದು ಕುಸುಮ್ ತಿವಾರಿ ಹೇಳಿದ್ದಾರೆ.

Last Updated : Oct 23, 2019, 09:47 AM IST
ನನ್ನ ಮಗನನ್ನು ಕೊಂದವರನ್ನು ಗಲ್ಲಿಗೇರಿಸಬೇಕು: ಕಮಲೇಶ್ ತಿವಾರಿ ತಾಯಿ title=

ಸೀತಾಪುರ: ಲಕ್ನೋದಲ್ಲಿ ಹತ್ಯೆಗೀಡಾದ ಹಿಂದೂ ಸಮಾಜ ಪಕ್ಷದ ನಾಯಕ ಕಮಲೇಶ್ ತಿವಾರಿ ಹತ್ಯೆ ಆರೋಪಿಗಳ ಬಂಧನದ ಬೆನ್ನಲ್ಲೇ ಅವರ ತಾಯಿ ಕುಸುಮ್ ತಿವಾರಿ ಬಂಧಿತ ಎಲ್ಲ ಆರೋಪಿಗಳಿಗೆ ಮರಣದಂಡನೆ ವಿಧಿಸುವಂತೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಎಎನ್ಐ ಜೊತೆ ಮಾತನಾಡಿರುವ ಅವರು, "ಆರೋಪಿಗಳ ಬಂಧನದಿಂದ ನಮಗೆ ತುಂಬಾ ಸಂತೋಷವಾಗಿದೆ, ಅವರೆಲ್ಲರನ್ನೂ ಗಲ್ಲಿಗೇರಿಸಬೇಕು. ಸರ್ಕಾರದ ಕ್ರಮದಿಂದ ನನಗೆ ತೃಪ್ತಿ ಇದೆ" ಎಂದು ಹೇಳಿದ್ದಾರೆ.

ಈ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳಾದ ಅಶ್ಫಾಕ್ ಹುಸೇನ್ ಜಕೀರ್‌ಹುಸೇನ್ ಶೇಖ್ (34) ಮತ್ತು ಮೊಯುದ್ದೀನ್ ಖುರ್ಷಿದ್ ಪಠಾಣ್ (27) ಅವರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮಂಗಳವಾರ ಗುಜರಾತ್-ರಾಜಸ್ಥಾನ್ ಗಡಿಯಲ್ಲಿ ಬಂಧಿಸಿದ್ದು, ಆರೋಪಿಗಳನ್ನು ಇಂದು ಉತ್ತರಪ್ರದೇಶ ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ. ಅದಕ್ಕಾಗಿ ಇಂದು ಲಕ್ನೋ ಪೋಲೀಸರ ನಾಲ್ಕು ಸದಸ್ಯರ ತಂಡ ಇಂದು ಅಹಮದಾಬಾದ್‌ಗೆ ತೆರಳುತ್ತಿದೆ. 

ಅಕ್ಟೋಬರ್ 18ರಂದು ಕಮಲೇಶ್ ತಿವಾರಿ ಅವರನ್ನು ಲಖನೌದ ನಾಕಾ ಪ್ರದೇಶದಲ್ಲಿ ಗುಂಡು ಹಾರಿಸಿ ದುಷ್ಕರ್ಮಿಗಳು ಹತ್ಯೆಗೈದಿದ್ದರು.

Trending News